
ಇಂಫಾಲ್: 2022ರ ಜುಲೈನಿಂದ 2023ರ ಜುಲೈವರೆಗಿನ ಒಂದು ವರ್ಷದ ಅವಧಿಯಲ್ಲಿ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಪಡೆಯು 1,610 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ಇನ್ನು 2020-21, 2021- 22ರ ಹಣಕಾಸು ವರ್ಷದಲ್ಲಿ ಕ್ರಮವಾಗಿ 1,200 ಕೋಟಿ ರು. ಮತ್ತು 850 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 2022-23ರಲ್ಲಿ ಮಣಿಪುರ ಪೊಲೀಸರು ಮಾದಕ ವಸ್ತು ಸಾಗಣೆ ಕುರಿತಂತೆ 620 ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 724 ಜನರನ್ನು ಬಂಧಿಸಿದ್ದಾರೆ. ಈ ಪೈಕಿ 474 ಜನರು ನ್ಯಾಯಾಂಗ ಬಂಧನದಲ್ಲಿದ್ದರೆ 250 ಜನರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸೇನೆ ವಿರುದ್ಧವೇ ಮಣಿಪುರ ಪೊಲೀಸರ ಕೇಸು ದಾಖಲು
ಕಳೆದ ವಾರ ಕಾರ್ಯಾಚರಣೆಗಾಗಿ ಹೋಗುತ್ತಿದ್ದ ನಮ್ಮ ಪೊಲೀಸರ ವಾಹನವನ್ನು ತಡೆಯಲಾಗಿದೆ ಎಂದು ಆರೋಪಿಸಿ ಮಣಿಪುರ ಪೊಲೀಸರು ಅಸ್ಸಾಂ ರೈಫಲ್ಸ್ ಪಡೆಯ ವಿರುದ್ಧವೇ ಎಫ್‌ಐಆರ್ (FIR) ದಾಖಲಿಸಿರುವ ಸಂಗತಿ ನಡೆದಿದೆ. ಆ.5 ರಂದು ಬಿಷ್ಣುಪುರ್ ಜಿಲ್ಲೆಯ ಕ್ವಾಟ್ಟಾದ ಗೋಥಾಲ್ ರಸ್ತೆಯಲ್ಲಿ ಅಸ್ಸಾಂ ರೈಫಲ್ಸ್ ಪಡೆಯು ನಮ್ಮ ವಾಹನವನ್ನು ತಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಮಣಿಪುರದಲ್ಲಿ ಮತ್ತೆ ಹಿಂಸೆ: 3 ಮಂದಿ ಹತ್ಯೆ: ತಂದೆ, ಮಗ ಸೇರಿ 3 ಮೈತೇಯಿಗಳ ಕಗ್ಗೊಲೆ
ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಕುಕಿ ದಂಗೆಕೋರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲು ರಾಜ್ಯ ಪೊಲೀಸರು ಕ್ವಾಟ್ಟಾದ ಉದ್ದಕ್ಕೂ ಸಾಗುತ್ತಿದ್ದಾಗ ಕ್ಯಾಸ್ಪರ್ ವಾಹನವನ್ನು 9 ಅಸ್ಸಾಂ ರೈಫಲ್ಸ್ (Assam Rifles)ಸಿಬ್ಬಂದಿಗಳು ತಡೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ ಮೂಲಗಳು ಕುಕಿ ಮತ್ತು ಮೈತೇಯಿಗಳ ನಡುವಿನ ಬಫರ್ ವಲಯದಲ್ಲಿ ಯಾರ ಪ್ರವೇಶಕ್ಕೆ ಅನುಮತಿ ನೀಡದಂತೆ ಕಾರ್ಯನಿರ್ವಹಿಸಲು ಸೂಚಿಸಿರುವ ಆದೇಶವನ್ನು ಸಿಬ್ಬಂದಿಗಳು ಪಾಲಿಸಿದ್ದಾರೆ ಎಂದಿದ್ದಾರೆ.
ಮಣಿಪುರ ಹಿಂಸಾಚಾರದ ನಡುವೆ ಬಿರೇನ್ ಸರ್ಕಾರಕ್ಕೆ ಶಾಕ್, ಬೆಂಬಲ ವಾಪಸ್ ಪಡೆದ ಕೆಪಿಎ ಪಕ್ಷ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ