ಶ್ರೀಶೈಲಂನಲ್ಲಿ ಶಿವಲಿಂಗಕ್ಕೆ ನಾಗರ ಹಾವೇ ಕಾವಲು,ಮೊಬೈಲ್‌ನಲ್ಲಿ ಸೆರೆಯಾದ ಸಾಕ್ಷಾತ್ ಶಿವನ ದರ್ಶನ!

Published : Jul 16, 2024, 05:39 PM IST
ಶ್ರೀಶೈಲಂನಲ್ಲಿ ಶಿವಲಿಂಗಕ್ಕೆ ನಾಗರ ಹಾವೇ ಕಾವಲು,ಮೊಬೈಲ್‌ನಲ್ಲಿ ಸೆರೆಯಾದ ಸಾಕ್ಷಾತ್ ಶಿವನ ದರ್ಶನ!

ಸಾರಾಂಶ

ಶತ ಶತಮಾನಗಳ ಹಳೆಯ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿವಲಿಂಗಕ್ಕೆ ನಾಗರ ಹಾವು ಕಾವಲು. ಸಾಕ್ಷಾತ್ ಶಿವನ ಕೊರಳಲ್ಲಿ ನಾಗರ ಹಾವು ಸುತ್ತಿಕೊಂಡು ಹೆಡೆ ಎತ್ತಿ ನಿಂತತೆ, ಇಲ್ಲೂ ಭಕ್ತರಿಗೆ ದರ್ಶನ ನೀಡುತ್ತಿದೆ. ಶಿವನೆ ಧರೆಗಿಳಿದು ಬಂದು ದರ್ಶನ ನೀಡುತ್ತಿರುವ ದೃಶ್ಯವನ್ನು ಭಕ್ತರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.  

ಶ್ರೀಶೈಲಂ(ಜು.16) ದೇವಸ್ಥಾನ, ದೇವರ ಗುಡಿಗಳಲ್ಲಿ ಹಲವು ಅಚ್ಚರಿಗಳನ್ನು ಸಂಭವಿಸಿದೆ. ದೇವರು ವಿವಧ ರೂಪದಲ್ಲಿ ಕಾಣಿಸಿಕೊಂಡು ದರ್ಶನ ನೀಡಿದ ಘಟನೆಗಳು ವರದಿಯಾಗಿದೆ. ಇದೀಗ ಅಚ್ಚರಿ ಎಂಬಂತೆ ಸಾಕ್ಷಾತ್ ಶಿವ ಧರೆಗಿಳಿದು ಬಂದ ದರ್ಶನ ನೀಡುತ್ತಿರುವ ದೇವಸ್ಥಾನದ ವಿಡಿಯೋ ಭಾರಿ ವೈರಲ್ ಆಗಿದೆ. ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿರುವ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ನಾಗರ ಹಾವು ಕಾವಾಲಾಗಿದೆ. ಶಿವನ ಕೊರಳಲ್ಲಿ ನಾಗರ ಹಾವು ಸುತ್ತಿ ಹೆಡೆ ಬಿಚ್ಚಿದಂತೆ ಇಲ್ಲೂ ಕೂಡ ಶಿವಲಿಂಗ ಸುತ್ತುವರಿದ ನಾಗರ ಹಾವು, ಹೆಡೆ ಬಿಚ್ಚಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.

ಶತ ಶತಮಾನಗಳ ಹಳೆಯ ದೇವಸ್ಥಾನವಿದು. ಶಿವನ ದೇವಾಲಯದ ಗರ್ಭ ಗುಡಿಯಲ್ಲಿ ಶಿವಲಿಂಗವಿದೆ. ಇದಕ್ಕೆ ಎದುರಾಗಿ ಶಿವಿಲಿಂಗಕ್ಕೆ ಮುಖ ಮಾಡಿ ಎಲ್ಲಾ ಶಿವ ದೇವಾಲಯದಲ್ಲಿರುವಂತೆ ನಂದಿ ವಿಗ್ರಹವಿದೆ.  ಶ್ರೀಶೈಲಂನಲ್ಲಿ ಹಲವು ದೇವಸ್ಥಾನಗಳಿವೆ. ಈ ಪೈಕಿ ಈ ಶಿವನ ದೇವಾಲಯ ಭಾರಿ ಜನಪ್ರಿಯವಾಗಿದೆ. ಶ್ರೀಶೈಲಂಗೆ ಭೇಟಿ ನೀಡುವ ಭಕ್ತರು ಹಲವು ದೇಗುಲಗಳ ಪೈಕಿ ಈ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ನಮಿಸುತ್ತಾರೆ. 

ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!

ಈ ಬಾರಿ ಈ ದೇವಸ್ಥಾನಕ್ಕೆ ಭಕ್ತರು ತೆರಳಿದಾಗ ಶಿವಲಿಂಗಕ್ಕೆ ಸುತ್ತಿಕೊಂಡ ನಾಗರಹಾವು ಭಕ್ತರಿಗೆ ದರ್ಶನ ನೀಡಿದೆ. ಹೆಡೆ ಬಿಚ್ಚಿ ಭಕ್ತರಿಗೆ ದರ್ಶನ ನೀಡಿದೆ. ಭಕ್ತರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಕ್ತ ಸಾಗರವೇ ಹರಿದು ಬಂದಿದೆ. ಈ ವಿಡಿಯೋ ವೈರಲ್ ಆದ ಬಳಿಕ ಇದೀಗ ಪ್ರತಿ ದಿನ ಶಿವ ಲಿಂಗ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಇಲ್ಲಿ ಪೂಜೆ ಮಾಡುವ ಅರ್ಚಕರ ಪ್ರಕಾರ, ಪ್ರತಿ ದಿನ ನಾಗರ ಹಾವು ಈ ದೇವಸ್ಥಾನದ ಸುತ್ತ ಮುತ್ತ ಇರುತ್ತದೆ. ಹಲವು ಬಾರಿ ಪೂಜೆಗೆ ಆಗಮಿಸುವಾಗ ಶಿವಲಿಂಗದ ಬಳಿ ಸುತ್ತಿಕೊಂಡು ಮಲಗಿರುತ್ತದೆ. ನಾವು ಬಂದಾಗ ಹಾವು ಇಲ್ಲಿಂದ ತೆರಳುತ್ತದೆ. ಪೂಜೆ ಸಲ್ಲಿಸಿ ತೆರಳಿದ ಬಳಿಕ ಮತ್ತೆ ಹಾವು ಇದೇ ಶಿವಲಿಂಗಕ್ಕೆ ಸುತ್ತಿಕೊಂಡಿರುತ್ತದೆ. ಹೆಚ್ಚಿನ ಭಕ್ತರು, ಜನಸಂದಣಿ ಹೆಚ್ಚಾದಾಗ ಹಾವು ಮಾಯವಾಗುತ್ತದೆ ಎಂದಿದ್ದಾರೆ.

ಈ ಬಾರಿ ಭಕ್ತರಿಗೆ ನಾಗರ ಹಾವು ದರ್ಶನ ನೀಡಿದೆ. ಸಾಕ್ಷಾತ್ ಶಿವನೇ ದರ್ಶನ ನೀಡಿದ್ದಾರೆ ಎಂದು ಭಕ್ತರು ಭಕ್ತಿಯಿಂದ ನಮಿಸಿದ್ದಾರೆ. ಅತ್ಯಂ ಪುರಾತನ ದೇವಸ್ಥಾನ ಇದಾಗಿದೆ. ಈ ದೇವಸ್ಥಾನದ ಆವರಣದಲ್ಲಿ ವೆಂಕಂಟೇಶ್ವರ ಸೇರಿದಂತೆ ಹಲವು ದೇವಸ್ಥಾಗಳಿವೆ. ಈ ಪೈಕಿ ಹಾವು ನೇರವಾಗಿ ಶಿವನ ದೇವಸ್ಥಾನಕ್ಕೆ ಆಗಮಿಸುತ್ತದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. 

ರಾತ್ರಿ ಈ ರೀತಿ ಕನಸು ಕಂಡರೆ ನಿಮಗೆ ಬರಬಾರದ ರೋಗ ಕಾಡೋ ಸೂಚನೆ ಕೊಡುತ್ತೆ!


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ