ಭಾರತೀಯ ಯೋಧನ ಥಳಿಸಿ ಹತೈಗೈದ ಡಿಎಂಕೆ ನಾಯಕ, ತಮಿಳುನಾಡಿನಲ್ಲಿ ಭಾರಿ ಆಕ್ರೋಶ!

By Suvarna NewsFirst Published Feb 16, 2023, 9:54 PM IST
Highlights

ಸುಖಾಸುಮ್ಮನೆ ಕ್ಯಾತೆ ತೆಗೆದು ಭಾರತೀಯ ಯೋಧನ ಮೇಲೆರಗಿದ ಡಿಎಂಕೆ ನಾಯಕ ಮಾರಣಾಂತಿಕ ಹಲ್ಲೆ ನಡೆಸಿ ಹೈತ್ಯಗೈದ ಘಟನೆಗೆ ತಮಿಳುನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದರೆ, ಯೋಧನ ಕುಟುಂಬ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದೆ.

ಚೆನ್ನೈ(ಫೆ.16): ದೇಶ ಕಾಯುವ ಹೆಮ್ಮೆಯ ಯೋಧ ಎದುರಿಗೆ ಬಂದರೆ ಸಲ್ಯೂಟ್ ಹೊಡೆದು ಗೌರವ ಸೂಚಿಸುವ ದೇಶ ನಮ್ಮದು. ಆದರೆ ಇದೇ ವೀರ ಯೋಧನ ಮೇಲೆ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ವಿರುದ್ದ ತಮಿಳುನಾಡಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಯೋಧನ ಕುಟುಂಬ ಸದಸ್ಯರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದರೆ, ಇತ್ತ ತಮಿಳುನಾಡು ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿದೆ. ನೀರಿನ ಟ್ಯಾಂಕ್ ಬಳಿ ಬಟ್ಟೆ ತೊಳೆಯುವ ವಿಚಾರಕ್ಕೆ ಯೋಧನ ಮೇಲೆ ವಾಗ್ವಾದಕ್ಕಿಳಿದ ಡಿಎಂಕೆ ನಾಯಕ ಚಿನ್ನಸ್ವಾಮಿ ಹಾಗೂ ಆತನ ಬೆಂಬಲಿಗರು  ದಾಳಿ ಮಾಡಿ ಕೊಲೆ ಮಾಡಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಯೋಧ ಪ್ರಭು ರಜೆಯಲ್ಲಿ ಮನಗೆ ಆಗಮಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಯಲ್ಲಿದ್ದ ಪ್ರಭು ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಬಳಿ ಬಟ್ಟೆ ತೊಳೆಯು ವಿಚಾರಕ್ಕೆ ಜಗಳವಾಗಿದೆ. ಡಿಎಂಕೆ ಪಕ್ಷದ ಕೌನ್ಸಿಲರ್ ಚಿನ್ನಸ್ವಾಮಿ ಹಾಗೂ ಬೆಂಬಲಿಗರು ಯೋಧ ಪ್ರಭುವಿನ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಯೋಧನ ಸಹೋದರ ತೆರಳಿ ಚಿನ್ನಸ್ವಾಮಿ ಹಾಗೂ ಆತನ ಬೆಂಬಲಿಗರನ್ನು ಅಲ್ಲಿಂದ ಹೊರಕಳುಹಿಸಿದ್ದಾರೆ. 

Latest Videos

ಮದುವೆಯ ದಿನವೇ ಗರ್ಲ್‌ಫ್ರೆಂಡ್‌ ಕೊಲೆ ಮಾಡಿದ ಪಾತಕಿ: ಢಾಬಾದ ಫ್ರೀಜರ್‌ನಲ್ಲಿ ಮೃತದೇಹ..!

ಇಷ್ಟಕ್ಕೆ ಸುಮ್ಮನಾಗದ ಚಿನ್ನಸ್ವಾಮಿ ಹಾಗೂ ಆತನ ಬೆಂಬಲಿಗರು ಅದೇ ದಿನ ರಾತ್ರಿ ಏಕಾಏಖಿ ಯೋಧ ಪ್ರಭು ಹಾಗೂ ಆತನ ಸಹೋದರನ ಮೇಲೆ ದಾಳಿ ನಡೆಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಪ್ರಭು ತೀವ್ರವಾಗಿ ಗಾಯಗೊಂಡರೆ, ಸಹೋದರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡಿದ್ದ ಸೈನಿಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ತಡರಾತ್ರಿ ಪ್ರಭು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 3 ಮಂದಿಯನ್ನು ಫೆ.9ರಂದು ಬಂಧಿಸಿದ್ದ ಪೊಲೀಸರು, ಬುಧವಾರ ಚಿನ್ನಸ್ವಾಮಿ ಸೇರಿದಂತೆ ಇತರ 6 ಮಂದಿಯನ್ನು ಬಂಧಿಸಿದ್ದಾರೆ. 

 

Tears of the wife of Army Lance Nk Prabhu 😢😢🙏🏻

Brutally Killed not by our enemies but by a goon n mob of Dynasty party DMK . 😡 https://t.co/iwBfSxseV7

— Rajeev Chandrasekhar 🇮🇳 (@Rajeev_GoI)

 

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರಭು ಹಿರಿಯ ಸಹೋದರ ಪ್ರಭಾಕರನ್ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸಹೋದರ ಪ್ರಭು 28 ವರ್ಷಕ್ಕೆ ರಾಜಕೀಯ ನಾಯಕನಿಂದ ಮೃತಪಟ್ಟಿದ್ದಾನೆ. ಡಿಎಂಕೆ ನಾಯಕನ ವಿರುದ್ದ ಕಠಿಣ ಶಿಕ್ಷೆ ಆಗುವ ವರೆಗೆ ನಾನು ಸೇನೆಗೆ ಮರಳುವುದಿಲ್ಲ ಎಂದು ಪ್ರಭಾಕರನ್ ಹೇಳಿದ್ದಾರೆ. ಡಿಎಂಕೆ ನಾಯಕ ಚಿನ್ನಸ್ವಾಮಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಪ್ರಭು ಕುಟಂಬ ಸದಸ್ಯರು ಇದೀಗ ಹೋರಾಟ ತೀವ್ರಗೊಳಿಸಿದ್ದಾರೆ.

ಮುಂಬೈನಲ್ಲಿ ಕರ್ನಾಟಕ ಮೂಲದ ನರ್ಸ್‌ ಮೇಘಾ ತೊರವಿ ಹತ್ಯೆ

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಘಟನೆ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ತಮಿಳುನಾಡಿನ ಜಿಲ್ಲೆ ಜಿಲ್ಲೆಗಳಲ್ಲಿ ಭಾರತೀಯ ಸೇನೆಯ ಮಾಜಿ ಸೈನಿಕರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಘಟನೆಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಇಷ್ಟೇ ಅಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
 

click me!