ಮದುವೆಯ ದಿನವೇ ಗರ್ಲ್‌ಫ್ರೆಂಡ್‌ ಕೊಲೆ ಮಾಡಿದ ಪಾತಕಿ: ಢಾಬಾದ ಫ್ರೀಜರ್‌ನಲ್ಲಿ ಮೃತದೇಹ..!

ಎಂಗೇಜ್‌ಮೆಂಟ್‌ ಬಳಿಕ ಸಾಹಿಲ್‌ ತನ್ನ ಸಂಬಂಧಿಕರ ಕಾರಿನಲ್ಲಿ ಮಧ್ಯರಾತ್ರಿ 1 ಗಂಟೆಗೆ ನಿಕ್ಕಿ ಮನೆಗೆ ಹೋಗಿದ್ದು, ಬಳಿಕ 5 ಗಂಟೆಗೆ ದೆಹಲಿಯ ನಿಜಾಮುದ್ದೀನ್‌ ರೈಲ್ವೆ ಸ್ಟೇಷನ್‌ಗೆ ಸಹ ಹೋಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

partner killed nikki yadav hid body in between his engagement wedding ash

ದೆಹಲಿ (ಫೆಬ್ರವರಿ 16, 2023): ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಶ್ರದ್ಧಾ ವಾಕರ್‌ರನ್ನು ಅಫ್ತಾಬ್‌ ಪೂನಾವಾಲಾ ಬರ್ಬರ ಹತ್ಯೆ ನಡೆಸಿದ ಪ್ರಕರಣವನ್ನು, ಪೀಸ್‌ ಪೀಸ್‌ ಮಾಡಿ ಕೊಂದದ್ದನ್ನು ಇನ್ನೂ ಅನೇಕರು ಮರೆತಿಲ್ಲ. ಈ ನಡುವೆ, ಇತ್ತೀಚೆಗೆ ದೆಹಲಿಯಲ್ಲೇ ಢಾಬಾದ ಫ್ರೀಜರ್‌ನಲ್ಲಿ ಗರ್ಲ್‌ಫ್ರೆಂಡ್‌ ಮೃತದೇಹವಿಟ್ಟಿದ್ದ ಪ್ರಕರಣವೂ ಸಹ ಬೆಳಕಿಗೆ ಬಂದಿದೆ. ಗರ್ಲ್‌ಫ್ರೆಂಡ್‌ ನಿಕ್ಕಿ ಯಾದವ್‌ ಎಂಬಾಕೆಯನ್ನು ಕೊಲೆ ಮಾಡಿ ತನ್ನ ಢಾಬಾದ ಫ್ರೀಜರ್‌ನಲ್ಲೇ ಇಟ್ಟಿದ್ದ ಎಂದು ಪೊಲೀಸರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಬೇರೆ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದ ಢಾಬಾ ಮಾಲೀಕ ಸಾಹಿಲ್‌ ಗೆಹ್ಲೋಟ್‌, ಇದನ್ನು ವಿರೋಧಿಸಿದ ನಿಕ್ಕಿ ಯಾದವ್‌ಳನ್ನು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈಗ ಈ ಪ್ರಕರಣದ ಮತ್ತಷ್ಟು ಡೀಟೇಲ್ಸ್‌ಗಳು ಸಿಕ್ಕಿದ್ದು, ಸಾಹಿಲ್‌ನ ಕ್ರೂರ ಕೃತ್ಯ ಬೆಳಕಿಗೆ ಬರುತ್ತಿದೆ.

ತನ್ನ ಎಂಗೇಜ್‌ಮೆಂಟ್‌ ಹಾಗೂ ಮದುವೆಯ ನಡುವೆ ಸಾಹಿಲ್‌ ಗೆಹ್ಲೋಟ್‌ ತನ್ನ 4 ವರ್ಷಗಳ ಕಾಲ ಪ್ರೀತಿಸುತ್ತಿದ್ದ ನಿಕ್ಕಿ ಯಾದವ್‌ಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ತನ್ನ ಢಾಬಾದ ಫ್ರೀಜರ್‌ನಲ್ಲಿಟ್ಟಿದ್ದ ಎಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ಹೊತ್ತಿರುವ ದೆಹಲಿ ಪೊಲೀಸರು ಈ ಬಗ್ಗೆ ತಿಳಿಸಿದ್ದು, ಕಳೆದ ವರ್ಷದ ಶ್ರದ್ಧಾ ವಾಕರ್‌ ಹಾಗೂ ಅಫ್ತಾಬ್‌ ಪೂನಾವಾಲಾ ಪ್ರಕರಣಕ್ಕೂ ಇದಕ್ಕೂ ಹೊಲಿಕೆ ಇದೆ ಎನ್ನುತ್ತಾರೆ. 

ಇದನ್ನು ಓದಿ: ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ: ಢಾಬಾದ ಫ್ರೀಜರ್‌ನೊಳಗೆ ಪತ್ತೆಯಾದ ಮಹಿಳೆಯ ಮೃತದೇಹ..!

ಫೆಬ್ರವರಿ 9, 2023 ರಂದು 24 ವರ್ಷದ ಸಾಹಿಲ್‌ ಗೆಹ್ಲೋಟ್‌ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡು ತನ್ನ ಗೆಳೆಯರ ಜತೆ ಡ್ಯಾನ್ಸ್ ಮಾಡಿದ್ದನಂತೆ. ಮರುದಿನ ಬೆಳಗ್ಗೆ ತನಗೆ ಮೋಸ ಮಾಡಿದ ಸಾಹಿಲ್‌ ಗೆಹ್ಲೋಟ್‌ನನ್ನು ಪ್ರಶ್ನಿಸಿದ ನಿಕ್ಕಿ ಯಾದವ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ತನ್ನ ಮದುವೆಗೆ ತಯಾರಿ ನಡೆಸಿದ್ದಾನೆ. ಇನ್ನು, ಗರ್ಲ್‌ ಫ್ರೆಂಡ್‌ನನ್ನು ಕೊಲೆ ಮಾಡಿರುವ ಬಗ್ಗೆ ಸ್ವಲ್ಪವೂ ಪಶ್ಚಾತಾಪವಿಲ್ಲದೆ ಆತ ಮದುವೆಯ ಶಾಸ್ತ್ರದಲ್ಲಿ ತೊಡಗಿದ್ದ ಎಂಬುದೂ ವಿಡಿಯೋಗಳ ಮೂಲಕ ತಿಳಿದುಬರುತ್ತದೆ ಎಂದು ದೆಹಲಿ ಪೊಳೀಸರು ಹೇಳಿದ್ದಾರೆ. 

ಇನ್ನೊಂದೆಡೆ, ಸಾಹಿಲ್‌ ಎಂಗೇಜ್‌ಮೆಂಟ್‌ ದಿನ ಅಂದರೆ, ಫೆಬ್ರವರಿ 9 ರಂದು ಕೊನೆಯದಾಗಿ ಸಿಸಿ ಕ್ಯಾಮೆರಾದಲ್ಲಿ ನಿಕ್ಕಿ ಯಾದವ್‌ ಕಾಣಿಸಿಕೊಂಡಿದ್ದಳು. ಎಂಗೇಜ್‌ಮೆಂಟ್‌ ಬಳಿಕ ಸಾಹಿಲ್‌ ತನ್ನ ಸಂಬಂಧಿಕರ ಕಾರಿನಲ್ಲಿ ಮಧ್ಯರಾತ್ರಿ 1 ಗಂಟೆಗೆ ನಿಕ್ಕಿ ಮನೆಗೆ ಹೋಗಿದ್ದು, ಬಳಿಕ 5 ಗಂಟೆಗೆ ದೆಹಲಿಯ ನಿಜಾಮುದ್ದೀನ್‌ ರೈಲ್ವೆ ಸ್ಟೇಷನ್‌ಗೆ ಸಹ ಹೋಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಶ್ರದ್ಧಾ ಕೇಸ್, ನರ್ಸ್ ಹತ್ಯೆಗೈದು ಬೆಡ್ ಸ್ಟೋರೇಜ್ ಬಾಕ್ಸ್‌ನಲ್ಲಿಟ್ಟ ಲೀವ್ ಇನ್ ಪಾರ್ಟ್ನರ್

ನಿಕ್ಕಿ ಯಾದವ್‌ ಸಾಹಿಲ್‌ ಜತೆಗೆ ಗೋವಾಗೆ ಹೋಗಲು ಪ್ಲ್ಯಾನ್‌ ಮಾಡಿದ್ದಳು. ಆದರೆ, ಈತ ಟಿಕೆಟ್‌ ಇಲ್ಲವೆಂದು ಹೇಳಿದ. ನಂತರ, ಹಿಮಾಚಲ ಪ್ರದೇಶಕ್ಕೆ ಬಸ್‌ನಲ್ಲಿ ಹೋಗಲು ನಿರ್ಧರಿಸಿದರು. ಆದರೆ, ಅವರಿಗೆ ಬಸ್‌ ಟಿಕೆಟ್‌ ಸಹ ಸಿಗದೆ ವಾಪಸ್ಸಾಗಿದ್ದಾರೆ ಎಂದೂ ದೆಹಲಿ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಟ್ರಿಪ್‌ಗೆ ಕರೆದುಕೊಂಡು ಹೋಗಿ ಆಕೆಯನ್ನು ಅಲ್ಲೇ ಬಿಟ್ಟು ಬರುವ ಪ್ಲ್ಯಾನ್‌ ಇರಬಹುದು ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು, ಇವೆಲ್ಲವೂ ಸಾಹಿಲ್‌ ಹೇಳಿಕೆಯಾಗಿದ್ದು, ಈ ಬಗ್ಗೆ ಸಾಕ್ಷ್ಯಗಳನ್ನು ಹುಡುಕುತ್ತಿದ್ದೇವೆ ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.  ಅಲ್ಲದೆ, ತನ್ನ ಮದುವೆಯ ದಿನವೇ ಸಾಹಿಲ್‌ ಆಕೆಯನ್ನು ಕೊಲೆ ಮಾಡಿದ್ದ. ತನ್ನ ಕುಟುಂಬದವರು ಪದೇ ಪದೇ ಕರೆ ಮಾಡುತ್ತಿದ್ದರಿಂದ ನಿಕ್ಕಿ ಯಾದವ್‌ ಕಾರಿನಲ್ಲಿ ಜಗಳವಾಡಿದ ಬಳಿಕ ವಿಚಾರ ಬೆಳಕಿಗೆ ಬಂದು ತನ್ನ ಡೇಟಾ ಕೇಬಲ್‌ನಿಂದ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಫೆಬ್ರವರಿ 14 ರಂದು ಅಂದರೆ 4 ದಿನಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಿಕ್ಕಿ ಯಾದವ್‌ ಕಾಣೆಯಾಗಿದ್ದಾರೆ ಎಂದು ನೆರೆಹೊರೆಯವರು ನೀಡಿದ ದೂರಿನ ಬಳಿಕ ಪೊಲೀಸರಿಗೆ ಈ ಪ್ರಕರಣ ತಿಳಿದುಬಂದಿದೆ. 

ಇದನ್ನು ಓದಿ: ಶ್ರದ್ಧಾ ವಾಕರ್‌ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?

Latest Videos
Follow Us:
Download App:
  • android
  • ios