ನವದೆಹಲಿ(ಜ.17): ಗಣರಾಜ್ಯೋತ್ಸವ ಸಂಭ್ರಮಕ್ಕೆ(Republic Day celebration) ಭಾರತ ಭರ್ಜರಿ ತಯಾರಿ ನಡೆಸುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಅದರಲ್ಲೂ ದಿಲ್ಲಿಯ ರಾಜಪಥದಲ್ಲಿ ನಡೆಯಲಿರುವ ಪರೇಡ್ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಈ ಬಾರಿಯ ಪರೇಡ್‌ನಲ್ಲಿ ವಾಯುಸೇನೆ ಹಲವು ವಿಶೇಷ ಕಸರತ್ತು ನಡೆಸಲಿದೆ. 75ನೇ ಸ್ವಾತಂತ್ರ್ಯ ಸಂಭ್ರಮ ಹೆಚ್ಚಿಸಲು ವಾಯುಸೇನೆ ಮುಂದಾಗಿದೆ. ಇದಕ್ಕಾಗಿ 17 ಜಾಗ್ವಾರ್ ಫೈಟರ್ ಜೆಟ್ 75ರ ಆಕೃತಿಯಲ್ಲಿ(Amrit formation) ಹಾರಾಟ(grandest flypast) ನಡೆಸಲಿದೆ.
ಅಮೃತ್ ಫಾರ್ಮೇಶನ್‌ನಲ್ಲಿ ಜಾಗ್ವಾರ್ ಫೈಟರ್ ಜೆಟ್ ಹಾರಾಟ ನಡೆಸಲಿದೆ. ಈ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರವನ್ನು ಅಜಾದಿ ಕಾ ಅಮೃತ ಮಹೋತ್ಸವಾಗಿ ಆಚರಿಸುತ್ತಿದೆ. ಹೀಗಾಗಿ ಜಾಗ್ವಾರ್ ಫೈಟರ್ ಜೆಟ್(aguar fighter jets) 75ರ ಆಕೃತ್ತಿಯಲ್ಲಿ ಹಾರಾಟ ನಡೆಸಲಿದೆ. ಈ ಆಕೃತಿಯನ್ನು ಅಮೃತ್ ಫಾರ್ಮೇಶನ್ ಎಂದು ಕರೆಯಲಾಗುತ್ತದೆ.
ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!
ದೆಹಲಿಯ ರಾಜಪಥದಲ್ಲಿ(Rajpath) ನಡೆಯಲಿರುವ ಪರೇಡ್‌ನಲ್ಲಿ(Republic Day parade) ವಾಯುಸೇನೆಯ ಫಾರ್ಮೇಶನ್ ಕುರಿತು IAF ವೆಸ್ಟರ್ನ್ ಏರ್ ಕಮಾಂಡ್ ಪ್ರೋ ವಿಂಗ್ ಕಮಾಂಡರ್ ಇಂದ್ರನಿಲ್ ನಂದಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಬ್ರಿಟೀಷ್ ಮೂಲದ ಜಾಗ್ವಾರ್ ಫೈಟರ್ ಜೆಟ್ ಈ ಬಾರಿ ಹೊಸ ಸಾಧನ ಮಾಡಲಿದೆ ಎಂದಿದ್ದಾರೆ. ಇನ್ನು ಇತ್ತೀಚೆಗೆ ವಾಯುಸೇನೆ ಸೇರಿಕೊಂಡ ರಾಫೆಲ್ ಯುದ್ದವಿಮಾನ ಮೂರು ಫಾರ್ಮೇಶನ್‌ನಲ್ಲಿ ಹಾರಾಟ ನಡೆಸಲಿದೆ ಎಂದು ಇಂದ್ರನಿಲ್ ಹೇಳಿದ್ದಾರೆ.
ರಾಫೆಲ್ ಯುದ್ಧವಿಮಾನದಿಂದ 3 ಫಾರ್ಮೇಶನ್:
ವಿನಾಶ್, ಬಾಝ್ ಹಾಗೂ ವಿಜಯ್ ಎಂಬ ಮೂರು ಫಾರ್ಮೇಶನ್‌ನಲ್ಲಿ ರಾಫೆಲ್ ಯುದ್ದವಿಮಾನಗಳು ಹಾರಾಟ ನಡೆಸಲಿದೆ. ವಿನಾಶ್ ಫಾರ್ಮೇಶನ್ ಹಾರಾಟದಲ್ಲಿ 5 ರಾಫೆಲ್ ಯುದ್ಧ ವಿಮಾನಗಳು ಅಂಬಾಲಾ ಏರ್‌ಬೇಸ್‌ನಿಂದ ಹಾರಾಟ ನಡೆಸಲಿದೆ. ಇನ್ನು ಬಾಝ್ ಹಾಗೂ ವಿಜಯ್ ಫಾರ್ಮೇಶನ್‌ನಲ್ಲಿ ತಲಾ ಒಂದೊಂದು ರಾಫೆಲ್ ಯುದ್ಧವಿಮಾನ ಪಾಲ್ಗೊಳ್ಳಲಿದೆ.
ಇನ್ಮುಂದೆ ಜನವರಿ 23 ರಿಂದ Republic Day Celebrations!
ದಿಲ್ಲಿ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ಫೈಟರ್ ಜೆಟ್ :
ಭಾರತೀಯ ನೌಕಾಪಡೆಯ MiG-29K ಫೈಟರ್ ಏರ್‌ಕ್ರಾಫ್ಟ್ ಹಾಗೂ P-8I ಸರ್ವಿಲೆನ್ಸ್ ಏರ್‌ಕ್ರಾಫ್ಟ್ ವರುಣಾ ಫಾರ್ಮೇಶನ್‌ನಲ್ಲಿ ಹಾರಾಟ ನಡೆಸಲಿದೆ. ಇನ್ನು ಎಂಟು Mi-17s ಹೆಲಿಕಾಪ್ಟರ್, 14 ಲೈಟ್ ಹೆಲಿಕಾಪ್ಟರ್, ಒಂದು Mi-35 ಹೆಲಿಕಾಪ್ಟರ್, 5 ಅಪಾಚೆ ಹೆಲಿಕಾಪ್ಟರ್, ವಿಂಟೇಜ್ ಏರ್‌ಕ್ರಾಫ್ಟ್ ಡಕೋಟಾ, 2 ಡ್ರೋನಿಯರ್ 228 ಏರ್‌ಕ್ರಾಫ್ಟ್, ಒಂದು ಚಿನೂಕ್ ಹೆಲಿಕಾಪ್ಟರ್, ಮೂರು C-130 ಹೆವಿ ಲಿಫ್ಟ್ ಏರ್‌ಕ್ರಾಪ್ಟ್, ಒಂದು P-8I ಹಾಗೂ AEW&C ಸರ್ವಿಲೆನ್ಸ್ ಏರ್‌ಕ್ರಾಫ್ಟ್ ಈ ಬಾರಿಯ ದಿಲ್ಲಿ ಪರೇಡ್‌ನಲ್ಲಿ ಹಾರಾಟ ನಡೆಸಲಿದೆ. ಇದರ ಜೊತೆಗೆ 7 ಸುಖೋಯ್ ಫೈಟರ್ ಏರ್‌ಕ್ರಾಫ್ಟ್, ನಾಲ್ಕು ಮಿಗ್ 29s, 7 ರಾಫೆಲ್ ಯುದ್ದವಿಮಾನ, 19 ಜಾಗ್ವಾರ್ ಫೈಟರ್ ಜೆಟ್, ಹಾಗೂ ಒಂದು ಮಿಗ್ -29K ಏರ್‌ಕ್ರಾಫ್ಟ್ ಪಾಲ್ಗೊಳ್ಳಲಿದೆ.
ದಿಲ್ಲಿ ಪರೇಡ್‌ನಿಂದ ತೇಜಸ್, ಮಿರಾಜ್ ಔಟ್
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಿಂದ ಸ್ವದೇಶಿ ನಿರ್ಮಿಸತ ಲೈಟ್ ಕಾಂಬಾಟ್ ಏರ್‌ಕ್ರಾಫ್ಟ್ ತೇಜಸ್ ಹಾಗೂ ಫ್ರೆಂಚ್ ಮೂಲದ ಮಿರಾಜ್ ಫೈಟರ್ ಜೆಟ್ ಹೊರಗಿಡಲಾಗಿದೆ. ತೇಜಸ್ 2017ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು. ಇನ್ನು ಕೊನೆಯದಾಗಿ 2018ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ತೇಜಸ್ ಕಾಣಿಸಿಕೊಂಡಿದೆ. 2018ರ ಬಳಿಕ ತೇಜಸ್ ಫೇಟರ್ ಏರ್‌ಕ್ರಾಫ್ಟ್ ಗಣರಾಜ್ಯೋತ್ಸವ ಪರೇಡ್‌ಲ್ಲಿ ಕಾಣಿಸಿಕೊಂಡಿಲ್ಲ. ಈ ಬಾರಿಯೂ ತೇಜಸ್ ಕಾಣಿಸಿಕೊಳ್ಳುತ್ತಿಲ್ಲ. ಭಾರತೀಯ ವಾಯುಸೇನೆ ಸೂಲುರ್ ಏರ್‌ಬೇಸ್ ಮಾತ್ರ ಎರಡು ಸ್ಕ್ವಾಡ್ರಾನ್ ಏರ್‌ಕ್ರಾಫ್ಟ್ ಆಪರೇಟ್ ಮಾಡುತ್ತಿದೆ. ಇದರಲ್ಲಿ ಒಂದು ತೇಜಸ್. ಅಂಬಾಲ ಏರ್‌ಬೇಸ್ ತೇಜಸ್ ಯುದ್ದವಿಮಾನ ಆಪರೇಟ್ ಮಾಡುತ್ತಿಲ್ಲ. ಹೀಗಾಗಿ ತೇಜಸ್ ಗಣರಾಜ್ಯೋತ್ಸ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಇನ್ನ ಮಿರಾಜ್ ಕೂಡ ಅಂಬಾಲ ಏರ್‌ಬೇಸ್ ಆಪರೇಟ್ ಮಾಡುತ್ತಿಲ್ಲ. ಹೀಗಾಗಿ ಈ ಎರಡ ಫೈಟರ್ ಜೆಟ್ ದಿಲ್ಲಿ ಪರೇಡ್‌ನಿಂದ ಹೊರಗಿಡಲಾಗಿದೆ.