400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಕ್‌ MBBS ಸರ್ಟಿಫಿಕೇಟ್ ನೀಡಿದ ನಕಲಿ ವೈದ್ಯನ ಬಂಧನ

By Anusha Kb  |  First Published Sep 19, 2024, 4:11 PM IST

400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಕಲಿ MBBS ಪದವಿ ಪ್ರಮಾಣಪತ್ರಗಳನ್ನು ನೀಡಿ ₹3 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಬರೇಲಿಯಲ್ಲಿ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಈ ವಂಚನೆಯು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಾಗ ಬೆಳಕಿಗೆ ಬಂದಿತು, ಇದರಿಂದಾಗಿ ಆರೋಪಿ ವಿಜಯ್ ಶರ್ಮಾ ನೇತೃತ್ವದಲ್ಲಿ ನಡೆದ ವಂಚನೆಯ ಬೃಹತ್ ಜಾಲ ಬಯಲಾಯಿತು.


ಬರೇಲಿ: 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಕಲಿ ವೈದ್ಯಕೀಯ ಪದವಿಯ (MBBS Bill) ಪ್ರಮಾಣ ಪತ್ರ ನೀಡಿ ಅವರಿಂದ 3 ಕೋಟಿಗೂ ಅಧಿಕ ವಸೂಲಿ ಮಾಡಿದ ನಕಲಿ ವೈದ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ವಿಜಯ್ ಶರ್ಮಾ ಎಂದು ಗುರುತಿಸಲಾಗಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ ಎಸ್ಪಿ ಮನುಶ್‌ ಪರೀಕ್‌, ಬರೇಲಿಯ ಖುಶ್ರೋ ಮೆಮೊರಿಯಲ್ ಪಿಜಿ ಕಾಲೇಜು ನಕಲಿ ಎಂಬಿಬಿಎಸ್ ಸರ್ಟಿಫಿಕೇಟ್‌ಗಳನ್ನು ವಿವಿಧ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಿದೆ. ಈ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಮುಖ ಆರೋಪಿ ವಿಜಯ್‌ ಶರ್ಮಾ ಈ ದಂಧೆಯಿಂದಾಗಿ ಒಟ್ಟು 3.7 ಕೋಟಿ ಹಣ ಗಳಿಸಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಸೇವೆ ಆರಂಭಿಸಲು ಹಾಗೂ ಉದ್ಯೋಗಕ್ಕಾಗಿ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವವರೆಗೂ ಈ ಫ್ರಾಡ್‌ ಬಗ್ಗೆ ಗೊತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ವಿಜಯ್ ಶರ್ಮಾ, ತಾನು ಮೆಡಿಸಿನ್ ಹಾಗೂ ಸರ್ಜರಿಯಲ್ಲಿ ಬ್ಯಾಚುಲರ್ ಡಿಗ್ರಿ ಮಾಡಿದ್ದಾಗಿ ಹೇಳಿಕೊಂಡಿದ್ದ, ಆದರೆ ಪೊಲೀಸರು ವಿಚಾರಣೆ ನಡೆಸಿದ ನಂತರವಷ್ಟೇ ಆತನ ನಿಜ ಬಣ್ಣ ಬಯಲಾಗಿದೆ. 

Tap to resize

Latest Videos

undefined

ಹಣಕ್ಕಾಗಿ ಹತ್ತಿರದ ಸಂಬಂಧಿಯಿಂದಲೇ 5 ವರ್ಷದ ಮಗುವಿನ ಉಸಿರುಕಟ್ಟಿಸಿ ಹತ್ಯೆ

ಕಳೆದ ವಾರವಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಾಲೇಜಿನ ಮಾಲೀಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕಾಲೇಜನ್ನು ಈಗ ಆಡಳಿತ ಮಂಡಳಿಯೇ ಬಂದ್ ಮಾಡಿದೆ. ಇತ್ತ ಪ್ರಮುಖ ಆರೋಪಿ ಶರ್ಮಾ ನಾಪತ್ತೆಯಾಗಿದ್ದ, ಆದರೆ ನಿನ್ನೆ ಆತನನ್ನು ಬಂಧಿಸಲಾಗಿದ್ದು, ಆತ ವಿಚಾರಣೆ ವೇಳೆ ತಾನು ಈ ಬೃಹತ್ ಮೋಸದ ಜಾಲದ ಭಾಗವಾಗಿದ್ದಾಗಿ ಹಾಗೂ ನಕಲಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. 

ತಾನು ಹಾಗೂ ತನ್ನ ಸಹಾಯಕರು ಕಾನ್ಪುರ, ರೂರ್ಕಿ, ಹಿಮಾಚಲ ಪ್ರದೇಶ ಹಾಗೂ ಒಡಿಶಾ ವಿಶ್ವವಿದ್ಯಾನಿಲಯದಿಂದ ನಕಲಿ ಡಿಗ್ರಿ ಪಡೆದಿದ್ದೇವೆ. ಈ ನಕಲಿ ಸರ್ಟಿಫಿಕೇಟ್ ದಂಧೆಯಿಂದ ಬಂದ ಹಣದಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಈ ಹಿಂದೆಯೂ ವಿಜಯ್ ಶರ್ಮಾ ವಿರುದ್ಧ ಫ್ರಾಡ್ ಹಾಗೂ ಪೋರ್ಜರಿ ಸಹಿ ಮಾಡಿದ ಹಿನ್ನೆಲೆ ಇದೆ.  ಈ ಹಿಂದೆ ಈತ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ ಮಾಡಿದ್ದು, ಸಣ್ಣದೊಂದು ಕನ್ಸಲ್ಟೆನ್ಸಿಯನ್ನು ತೆರೆದಿದ್ದ, ಈ ಕನ್ಸಲ್ಟೆನ್ಸಿಯಲ್ಲಿ ಆತ ಪದವೀಧರರಿಗೆ ನಕಲಿ ಡಿಗ್ರಿಗಳನ್ನು ಹಣಕ್ಕಾಗಿ ಮಾಡಿಕೊಡುತ್ತಿದ್ದ. 

ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ

ಈ ಹಿಂದೆ ಮಹಾರಾಷ್ಟ್ರದ ನಲಸೊಪರಾದಲ್ಲಿಯೂ ಇಂತಹದ್ದೇ ಪ್ರಕರಣವೊಂದು ನಡೆದಿತ್ತು. 12ಕ್ಲಾಸ್‌ನಲ್ಲಿ ಶಾಲೆಬಿಟ್ಟು ನಕಲಿ ವೈದ್ಯನಾದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದರು. ಈತ ಯಾವುದೇ ಡಿಗ್ರಿ ಇಲ್ಲದೇ ದಶಕಕ್ಕೂ ಹೆಚ್ಚು ಕಾಲ ರೋಗಿಗಳಿಗೆ ಔಷಧಿ ನೀಡುತ್ತಿದ್ದ. ಈ ನಕಲಿ ವೈದ್ಯನನ್ನು ತಿರುಮಲ ತೆಲಿ ಎಂದು ಗುರುತಿಸಲಾಗಿತ್ತು. ವಸೈ ವಿರಾರ್‌ನ ಮಹಾನಗರ ಪಾಲಿಕೆ ಅಧಿಕಾರಿಗಳು ಈತನ ಕ್ಲಿನಿಕ್‌ಗೆ ದಾಳಿ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.

ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ

click me!