ಹಣಕ್ಕಾಗಿ ಹತ್ತಿರದ ಸಂಬಂಧಿಯಿಂದಲೇ 5 ವರ್ಷದ ಮಗುವಿನ ಉಸಿರುಕಟ್ಟಿಸಿ ಹತ್ಯೆ

By Anusha Kb  |  First Published Sep 19, 2024, 3:26 PM IST

ಆಗ್ರಾದಲ್ಲಿ ಐದು ವರ್ಷದ ಬಾಲಕನನ್ನು ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಲಾಗಿದೆ. ಮಗುವಿನ ಸಂಬಂಧಿಕರೇ ಈ ಕೃತ್ಯ ಎಂಬುದು ಬೆಳಿಗ್ಗೆ ಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


ಅಗ್ರಾ: ಹಣಕ್ಕಾಗಿ 5 ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿದ ಮಗುವಿನ ಹತ್ತಿರದ ಸಂಬಂಧಿಗಳು ಪೋಷಕರು ಹಣ ನೀಡುವ ಮೊದಲೇ ಮಗುವನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದಂತಹ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಆಗ್ರಾದಲ್ಲಿ(ಉತ್ತರ ಪ್ರದೇಶ) ನಡೆದಿದೆ. ಬಾಲಕನ ತಂದೆಯ ಚಿಕ್ಕಮ್ಮ  ಹಾಗೂ ಆಕೆಯ ಸೋದರ ಇಬ್ಬರು ಸೇರಿ 5 ವರ್ಷದ ಗಂಡು ಮಗುವನ್ನು ಕಿಡ್ಯಾಪ್ ಮಾಡಿದ್ದು, ಬಳಿಕ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಮಗು ನಿದ್ರೆಯಲ್ಲಿದ್ದ ವೇಳೆಯೇ ಪಾಪಿಗಳು ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. 

ಮಗುವಿಗೆ ಸಂಬಂಧದಲ್ಲಿ ಅಜ್ಜಿಯಾಗಬೇಕಾದ ಮಹಿಳೆ ಹಾಗೂ ಆಕೆಯ ಸೋದರ ಮಗುವಿನ ತಂದೆಯ ಬಳಿ 15 ಲಕ್ಷ ಹಣವನ್ನು ಕೊಟ್ಟು ಮಗುವನ್ನು ಬಿಡಿಸಿಕೊಂಡು ಹೋಗುವಂತೆ ಬೆದರಿಸಿದ್ದಾರೆ. ಮಗು ಸೆಪ್ಟೆಂಬರ್ 14 ರಿಂದ ನಾಪತ್ತೆಯಾಗಿತ್ತು. ಹೀಗಾಗಿ ಮಗುವಿನ ಪೋಚಕರು ಬರ್ಹನ್ ಪೊಲೀಸ್ ಸ್ಟೇಷನ್‌ನಲ್ಲಿ ಮಗು ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದರು. ಕೂಡಲೇ ಪೊಲೀಸರು ತಂಡ ರಚಿಸಿ ಬಾಲಕನ ಪತ್ತೆಗಾಗಿ ಶೋಧ ನಡೆಸಲು ಶುರು ಮಾಡಿದ್ದರು. ಈ ವೇಳೆ ಮಗುವನ್ನು ಸಂಬಂಧಿಗಳೇ ಕಿಡ್ನ್ಯಾಪ್ ಮಾಡಿರುವುದು ಪತ್ತೆಯಾಗಿತ್ತು. ಮಗುವಿನ ತಂದೆಯ ಚಿಕ್ಕಮ್ಮ ಕಲ್ಪನಾ ಹಾಗೂ ಆಕೆಯ ಸೋದರ ಇಬ್ಬರು ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದರು. ಇತ್ತ ಮಗುವಿನ ತಂದೆ ಇತ್ತೀಚೆಗಷ್ಟೇ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ್ದು, ಈ ವೇಳೆ ಅವರಿಗೆ ಸ್ವಲ್ಪ ಹಣ ಸಿಕ್ಕಿತ್ತು. ಈ ವಿಚಾರ ಆತನ ಚಿಕ್ಕಮ್ಮ ಕಲ್ಪನಾಗೆ ಗೊತ್ತಾಗಿ ಆಕೆ ಆ ಹಣದ ಮೇಲೆ ಕಣ್ಣಿಟ್ಟಿದ್ದಳು. 

Tap to resize

Latest Videos

ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ

ಮಗು ಮನೆ ಮುಂದೆ ಆಟವಾಡುತ್ತಿದ್ದಾಗಲೇ ಆರೋಪಿಗಳು ಮಗುವಿಗೆ ತಮ್ಮ ಜೊತೆ ಬಂದರೆ ಏನೋ ಕೊಡುವುದಾಗಿ ಆಮಿಷವೊಡ್ಡಿ ಕರೆದು ಬಳಿಕ ನಿದ್ರೆ ಮಾತ್ರೆ ನೀಡಿದ್ದಾರೆ. ಬಳಿಕ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಚೀಲದ ಬಾಯನ್ನು ಬಿಗಿಯಾಗಿ ಕಟ್ಟಿದ್ದಾರೆ. ಇದರಿಂದ ಮಗುವಿಗೆ ಚೀಲದೊಳಗೆ ಉಸಿರುಕಟ್ಟಿದಂತಾಗಿ ಮಗು ಸಾವಿಗೀಡಾಗಿದೆ. ಇತ್ತ ಮಗು ಸತ್ತ ವಿಚಾರ ತಿಳಿದ ಆರೋಪಿಗಳು ಮಗುವನ್ನು ಸಮೀಪದ ಕೆನಾಲ್‌ಗೆ ಹಾಕಿ ಕೈ ತೊಳೆದಿದ್ದಾರೆ. 

ಘಟನೆ ಬಗ್ಗೆ ತನಿಖೆ ನೇತೃತ್ವ ವಹಿಸಿದ್ದ ಪಶ್ಚಿಮ ಡಿಸಿಪಿ ಸೋನಂ ಕುಮಾರ್ ಮಾಹಿತಿ ನೀಡಿದ್ದು,  ಪೊಲೀಸರು ಮರುವೇಷದಲ್ಲಿ ಹೋಗಿ ಆರೋಪಿ ಕಲ್ಪನಾ ಹಾಗೂ ಆಕೆಯ ಸೋದರನನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ನಿದ್ದೆ ಮಾತ್ರೆ, ಒಂದು ಬೈಕ್‌, ಒಂದು ಮೊಬೈಲ್ ಫೋನ್ ಹಾಗೂ ಅಪರಾಧಕ್ಕೆ ಬಳಿಸಿದ ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಹಣಕಾಸಿನ ತೊಂದರೆಯಿಂದಾಗಿ ಮಗುವನ್ನು ಕಿಡ್ನಾಪ್ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. 

ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ

click me!