ಪತ್ರಕರ್ತನ ಮೇಲೆ ರಾಹುಲ್ ಗಾಂಧಿ ಬೆೆಂಬಲಿಗರ ಹಲ್ಲೆ: ಪ್ರತಿಭಟಿಸಿವದರ ಮೇಲೂ ದಾಳಿ!

Published : Sep 19, 2024, 03:23 PM ISTUpdated : Sep 19, 2024, 03:34 PM IST
ಪತ್ರಕರ್ತನ ಮೇಲೆ ರಾಹುಲ್ ಗಾಂಧಿ ಬೆೆಂಬಲಿಗರ ಹಲ್ಲೆ: ಪ್ರತಿಭಟಿಸಿವದರ ಮೇಲೂ ದಾಳಿ!

ಸಾರಾಂಶ

ಅಮೆರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರಿಂದ  ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಹಲ್ಲೆ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಡಿ ನ್ಯೂಸ್ ಪತ್ರಕರ್ತನ ಮೇಲೆಯೂ ಕಾಂಗ್ರೆಸ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ದೆಹಲಿ (ಸೆ.19) ಅಮೆರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರಿಂದ  ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಹಲ್ಲೆ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಡಿ ನ್ಯೂಸ್ ಪತ್ರಕರ್ತನ ಮೇಲೆಯೂ ಕಾಂಗ್ರೆಸ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಅಶೋಕ್ ಶ್ರೀವಾಸ್ತವ್ ಹಲ್ಲೆಗೊಳಗಾದ ಪತ್ರಕರ್ತ.  ಮೂಲಗಳ ಪ್ರಕಾರ, ಅಶೋಕ್ ಶ್ರೀವಾಸ್ತವ ಅವರು ಸೆ.18, ಬುಧವಾರ ರಾತ್ರಿ ತಮ್ಮ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರಿಗೆ ದೊಡ್ಡ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ  ಕಾರಿನಲ್ಲಿದ್ದ ಅಶೋಕ್ ಶ್ರೀವಾಸ್ತವ ಗಾಯಗೊಂಡಿದ್ದಾರೆ. ಈ ಹಠಾತ್ ದಾಳಿಯಿಂದ ಅಶೋಕ್ ಶ್ರೀವಾಸ್ತವ ಕೂಡ ಬೆಚ್ಚಿಬಿದ್ದಿದ್ದಾರೆ. ಘಟನೆ ಬಗ್ಗೆ ಹಲವು ಪತ್ರಕರ್ತರು ಧ್ವನಿ ಎತ್ತಿದ್ದಾರೆ. 

ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?

ಡಿಡಿ ನ್ಯೂಸ್ ಪತ್ರಕರ್ತರಾಗಿರುವ ಅಶೋಕ್ ಶ್ರೀವಾಸ್ತವ ಅವರು ದಾಳಿ ನಡೆದ ಹಿಂದಿನ ದಿನ ಪ್ರೆಸ್‌ಕ್ಲಬ್ ನಿಂದ ಹೊರಗೆ ತೆರಳಿದ್ದರು. ಇಂಡಿಯಾ ಟುಡೇ ಪತ್ರಕರ್ತನ ಮೇಲೆ ಕಾಂಗ್ರೆಸ್ ಮುಖಂಡರಿಂದ ನಡೆದ ಹಲ್ಲೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.  ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಕಾಂಗ್ರೆಸ್ಸಿಗರ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದರು. 

ಬಾಂಗ್ಲಾ ಹಿಂದೂ ಬಗ್ಗೆ ರಾಹುಲ್ ಗಾಂಧಿಯನ್ನ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಪತ್ರಕರ್ತನ ಮೇಲೆ ಹಲ್ಲೆ!

ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದ ಬೆಂಬಲಿಗರ ಕೃತ್ಯಕ್ಕೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು, ಪತ್ರಕರ್ತರನ್ನು ಗೌರವಿಸಿದನ್ನು ಕಲಿಯಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು. ಕಾಂಗ್ರೆಸ್ ನಾಯಕರು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಮಾಧ್ಯಮ ಸ್ವಾತಂತ್ರ್ಯಕ್ಕೆ ಕೊಡುವ ಗೌರವವೇ?  ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿ ಬಗ್ಗೆ ಪ್ರಶ್ನೆ ಕೇಳುವುದು ಅಪರಾಧವೇ? ಎಂದು ಪ್ರಶ್ನಿಸಿದ್ದರು. ಇದೀಗ ಪ್ರತಿಭಟನೆಯಲ್ಲಿ ಭಾಗಿಯಾದ ಮರುದಿನವೇ ಕಾರಿನಿಂದ ಡಿಕ್ಕಿ ಹೊಡೆಸಿ ಹಲ್ಲೆ ನಡೆಸಲಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್