Fact Check: ಇಸ್ಲಾಂಗೆ ಜಗತ್ತಿನ ಶಾಂತಿಯುತ ಧರ್ಮ ಮಾನ್ಯತೆ ನೀಡಿದ ಯುನೆಸ್ಕೊ

By Kannadaprabha NewsFirst Published Nov 19, 2019, 10:38 AM IST
Highlights

ವಿಶ್ವಸಂಸ್ಥೆಯ ಯುನೆಸ್ಕೊ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಎಂದು ಘೋಷಿಸಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಇಸ್ಲಾಮಿಕ್‌ ಫೇಸ್‌ಬುಕ್‌ ಪೇಜ್‌ಗಳು ಇದನ್ನು ಪೋಸ್ಟ್‌ ಮಾಡಿದ್ದು, ಇದೀಗ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ವಿಶ್ವಸಂಸ್ಥೆಯ ಯುನೆಸ್ಕೊ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಎಂದು ಘೋಷಿಸಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಇಸ್ಲಾಮಿಕ್‌ ಫೇಸ್‌ಬುಕ್‌ ಪೇಜ್‌ಗಳು ಇದನ್ನು ಪೋಸ್ಟ್‌ ಮಾಡಿದ್ದು, ಇದೀಗ ವೈರಲ್‌ ಆಗುತ್ತಿದೆ.

Fact Check: ಕೊಬ್ಬರಿ ಎಣ್ಣೆಯನ್ನು ಕಾಲಿಗೆ ಹಚ್ಚೋದ್ರಿಂದ ಡೆಂಘೀ ಹರಡಲ್ಲ!

ಯುನೆಸ್ಕೊ ನಿರ್ದೇಶಕ ಐರಿನಾ ಬೊಕೊವಾ ಅವರ ಸಹಿ ಹೊಂದಿದ ಸರ್ಟಿಫಿಕೇಟನ್ನು ಪೋಸ್ಟ್‌ ಮಾಡಿದ್ದು, ಅದರಲ್ಲಿ ‘2016ರ ಜುಲೈ 4ರಂದು ನಾವು ಇಸ್ಲಾಮನ್ನು ಜಗತ್ತಿನ ಅತ್ಯಂತ ಶಾಂತಿಯುತ ಧರ್ಮ ಎಂದು ಘೋಷಿಸಿದ್ದೇವೆ’ ಎಂದು ಬರೆಯಲಾಗಿದೆ. ಅದರೊಂದಿಗೆ ಅಂತಾರಾಷ್ಟ್ರೀಯ ಶಾಂತಿ ಸಂಘಟನೆಯ ಲೋಗೋ ಕೂಡ ಸರ್ಟಿಫಿಕೇಟ್‌ನಲ್ಲಿದೆ.

Fact Check: ರಾಮಮಂದಿರ ನಿರ್ಮಾಣಕ್ಕೆ ತಿರುಪತಿಯಿಂದ 100 ಕೋಟಿ ದೇಣಿಗೆ!

ಹಲವರು ‘ಐ ಲವ್‌ ಇಸ್ಲಾಂ’ ಎಂದು ಬರೆದು ಈ ಸರ್ಟಿಫಿಕೇಟನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ ನಿಜಕ್ಕೂ ಯುನೆಸ್ಕೋ ಇಸ್ಲಾಂ ಧರ್ಮಕ್ಕೆ ಈ ಮಾನ್ಯತೆ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಸೋಷಿಯಲ್‌ ಮೀಡಿಯಗಳಲ್ಲಿ ವೈರಲ್‌ ಆಗಿರುವ ಸರ್ಟಿಫಿಕೇಟ್‌ ನಕಲಿ. ಇದು ಹಲವು ವರ್ಷಗಳಿಂದಲೂ ಹರಿದಾಡುತ್ತಿದೆ. ಅಲ್ಲದೆ ಯುನೆಸ್ಕೊಗೆ ಯಾವುದೇ ಅಂತಾರಾಷ್ಟ್ರೀಯ ಶಾಂತಿ ಸಂಘಟನೆಗಳೊಂದಿಗೆ ಅಧಿಕೃತ ಸಂಬಂಧ ಇಲ್ಲ. ಹಾಗಾಗಿ ಯುನೆಸ್ಕೋ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಧರ್ಮ ಎಂದು ಮಾನ್ಯತೆ ನೀಡಿರುವುದು ಸುಳ್ಳು.

- ವೈರಲ್ ಚೆಕ್ 

click me!