Fact Check: ಇರಾನಿನ ವಿಡಿಯೋ ಪೋಸ್ಟ್‌ ಮಾಡಿ ಸಿಎಎ ಪ್ರತಿಭಟನೆ ಎಂದರು!

By Suvarna NewsFirst Published Jan 15, 2020, 9:42 AM IST
Highlights

ಲಕ್ಷಾಂತರ ಜನರು ಕಿಕ್ಕಿರಿದಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ) ವಿರೋಧಿ ಚಳವಳಿ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ? 

ಲಕ್ಷಾಂತರ ಜನರು ಕಿಕ್ಕಿರಿದಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ) ವಿರೋಧಿ ಚಳವಳಿ ಎಂದು ಹೇಳಲಾಗುತ್ತಿದೆ.

Fact Check| ರಾಜಕೀಯ ನಾಯಕರ ಫೋಟೋ ಫಾರ್ವರ್ಡ್‌ ಮಾಡಿದ್ರೆ ಜೈಲು!

ಇದನ್ನು ನೂರಾರು ಜನರು ಶೇರ್‌ ಮಾಡಿ, ದೆಹಲಿಯ ಮುಸ್ಲಿಂಮರು ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಯಲ್ಲಿ ಪಾಲ್ಗೊಂಡಿದ್ದ ಜನರು ಎಂದು ಒಕ್ಕಣೆ ಬರೆದಿದ್ದಾರೆ. ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಕ್ಕೆ ಇರುವ ಜನಬೆಂಬಲ ಎಂದು ಹೇಳಲಾಗಿದೆ. ರೆಹ್ಮಾನ್‌ ಶೇಖ್‌ ಹೆಸರಿನ ಫೇಸ್‌ಬುಕ್‌ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ದೆಹಲಿಯ ಮುಸ್ಲಿಮರ ರಾರ‍ಯಲಿ’ ಬರೆದುಕೊಂಡಿದ್ದರು. ಇದನ್ನು ಸುಮಾರು 9800 ಜನರು ವೀಕ್ಷಿಸಿದ್ದು, 1200 ಬಾರಿ ಶೇರ್‌ ಆಗಿದೆ.

 

ಆದರೆ ನಿಜಕ್ಕೂ ಇದು ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಚಳವಳಿಯದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಇಂಡಿಯಾ ಟುಡೇ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಲಾಸ್‌ ಏಂಜಲೀಸ್‌ ಟೈಮ್ಸ್‌ನಲ್ಲಿ ಇದೇ ರೀತಿಯ ಫೋಟೋ ಪ್ರಕಟವಾಗಿದೆ. ಅದರಲ್ಲಿ ಇರಾನ್‌ನ ಸೇನಾಧಿಕಾರಿ ಸುಲೈಮಾನಿ ಅಂತಿಮ ಸಂಸ್ಕಾರದ ವೇಳೆ ನೆರೆದಿದ್ದ ಜನಸ್ತೋಮ ಎಂದಿದೆ. ಯುಟ್ಯೂಬ್‌ನಲ್ಲಿ ಈ ಕುರಿತ ಅನೇಕ ವಿಡಿಯೋಗಳು ಲಭ್ಯವಿದೆ. ಅಲ್ಲದೆ ವೈರಲ್‌ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇರಾನಿನ ರಾಷ್ಟ್ರ ಧ್ವಜ ಕೂಡ ಕಾಣಿಸುತ್ತದೆ. ಅಲ್ಲಿಗೆ ಈ ವಿಡಿಯೋ ಇರಾನಿನದ್ದು, ಭಾರತದ್ದಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!