ಕಾಶ್ಮೀರದಲ್ಲಿ ಭೂಕಂಪಕ್ಕೂ ಜಗ್ಗದ ಐಫೆಲ್‌ ಟವರ್‌ಗಿಂತ ಎತ್ತರದ ಸೇತುವೆ!

Published : Jan 15, 2020, 09:33 AM IST
ಕಾಶ್ಮೀರದಲ್ಲಿ ಭೂಕಂಪಕ್ಕೂ ಜಗ್ಗದ ಐಫೆಲ್‌ ಟವರ್‌ಗಿಂತ ಎತ್ತರದ ಸೇತುವೆ!

ಸಾರಾಂಶ

ಭೂಕಂಪಕ್ಕೂ ಜಗ್ಗದ ಐಫೆಲ್‌ ಟವರ್‌ಗಿಂತ ಎತ್ತರದ ಸೇತುವೆ| ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿದೆ ಅದ್ಭುತ ಸೇತುವೆ| ಇದಕ್ಕೆ ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ಹಿರಿಮೆ

ಕೌರಿ[ಜ.15]: ಕಾಶ್ಮೀರ ಕಣಿವೆ ಹಾಗೂ ಭಾರತದ ಇತರೆ ಪ್ರದೇಶವನ್ನು ರೈಲ್ವೇ ಮಾರ್ಗ ಮೂಲಕ ಸಂಪರ್ಕ ಕಲ್ಪಿಸಲು, ಚೆನಾಬ್‌ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿರುವ ಹೊಸ ರೈಲ್ವೇ ಸೇತುವೆ 40 ಕೆಜಿ ಸುಧಾರಿತ ಟಿಎನ್‌ಟಿ ಸ್ಪೋಟ ಹಾಗೂ 8 ರಿಕ್ಟರ್‌ ಮಾಪಕ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರಲಿದೆ ಎಂದು ರೈಲ್ವೇ ಎಂಜಿನಿಯರ್‌ ಹೇಳಿದ್ದಾರೆ.

ಸಂಪೂರ್ಣ ಕೇಂದ್ರ ಅನುದಾನದ ಯೋಜನೆ ಇದಾಗಿದ್ದು, ಅತ್ಯಂತ ಕ್ಲಿಷ್ಟಕರವಾದ ಕಟ್ರಾ-ಬನಿಹಾಲ್‌ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಶೇ.85ರಷ್ಟುಕೆಲಸ ಪೂರ್ತಿಯಾಗಿದ್ದು, 2021ರ ವೇಳೆಗೆ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಈ ಸೇತುವೆ ನದಿಯಿಂದ 359 ಮೀಟರ್‌ ಎತ್ತರದಲ್ಲಿದ್ದು, ಪ್ರತಿಷ್ಠಿತ ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಾಗಿದೆ.

ಈ ಯೋಜನೆ ಪೂರ್ಣಗೊಂಡರೆ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಎನ್ನುವ ಹೆಗ್ಗಳಿಕೆ ಪಾತ್ರವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!