Fact Check : ಕೊರೋನಾಪೀಡಿತೆಯನ್ನು ನಡುರಸ್ತೇಲಿ ಕೊಂದ ಪೊಲೀಸರು!

By Suvarna NewsFirst Published Feb 14, 2020, 10:47 AM IST
Highlights

ಚೀನಾದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದಂತೆ ಸೋಂಕು ಹರಡಿರುವ 20,000 ಜನರನ್ನು ಕೊಲ್ಲಲು ಚೀನಾ ಸರ್ಕಾರ ಅಲ್ಲಿನ ಸುಪ್ರೀಂಕೋರ್ಟ್‌ ಬಳಿ ಅನುಮತಿ ಕೇಳಿದೆ ಎನ್ನುವ ಸುಳ್ಳುಸುದ್ದಿ ವೈರಲ್‌ ಆಗಿತ್ತು. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಚೀನಾದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದಂತೆ ಸೋಂಕು ಹರಡಿರುವ 20,000 ಜನರನ್ನು ಕೊಲ್ಲಲು ಚೀನಾ ಸರ್ಕಾರ ಅಲ್ಲಿನ ಸುಪ್ರೀಂಕೋರ್ಟ್‌ ಬಳಿ ಅನುಮತಿ ಕೇಳಿದೆ ಎನ್ನುವ ಸುಳ್ಳುಸುದ್ದಿ ವೈರಲ್‌ ಆಗಿತ್ತು. ಬಳಿಕ ಆ ಸುದ್ದಿಯ ವಾಸ್ತವ ಬಯಲಾಗಿತ್ತು. ಇದೀಗ ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪೊಲೀಸರು ಮಹಿಳೆಯೊಬ್ಬರನ್ನು ಕಾರಿನಿಂದ ಎಳೆತರುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ ‘ಚೀನಾದಲ್ಲಿ ಕೊರೋನಾ ಸೋಂಕಿತ ಮಹಿಳೆಯನ್ನು ಪೊಲೀಸರು ಬಹಿರಂಗವಾಗಿ ಕೊಂದರು’ ಎಂದು ಒಕ್ಕಣೆ ಬರೆಯಲಾಗಿದೆ. ಡೈಲಿ ಅಪ್‌ಡೇಟ್ಸ್‌ ಎನ್ನುವ ಫೇಸ್‌ಬುಕ್‌ ಪೇಜ್‌ ಈ ವಿಡಿಯೋವನ್ನು ಮೊದಲು ಪೋಸ್ಟ್‌ ಮಾಡಿ’ ‘ಕೊರೋನಾ ಸೋಂಕಿತ ಮಹಿಳೆಯನ್ನು ಪೊಲೀಸರು ನಡುರಸ್ತೆಯಲ್ಲೇ ಹೊಡೆದು ಕೊಂದಿದ್ದಾರೆ’ ಎಂದು ಒಕ್ಕಣೆ ಬರೆದಿತ್ತು.

 

ಆದರೆ ನಿಜಕ್ಕೂ ಕೊರೋನಾ ಸೋಂಕಿತೆಯನ್ನು ಪೊಲೀಸರು ಕೊಂದರೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ವಿಡಿಯೋದಲ್ಲಿರುವ ಮಹಿಳೆ ಕೊರೋನಾ ಪೀಡಿತೆ ಅಲ್ಲ. ಚೀನಾದ ಹೈಲಾಂಗ್ಜಿಯಾಂಗ್‌ ಪ್ರಾಂತ್ಯದಲ್ಲಿ ಖಾಸಗಿ ಕಾರುಗಳ ಪ್ರವೇಶಕ್ಕೆ ನಿರ್ಬಂಧವಿದೆ. ಆದರೆ ಈ ಮಹಿಳೆಗೆ ಅನೇಕ ಬಾರಿ ನೋಟಿಸ್‌ ನೀಡಿದ್ದರೂ ಖಾಸಗಿ ಕಾರನ್ನು ಈ ಪ್ರಾಂತ್ಯಕ್ಕೆ ತಂದ ಕಾರಣ ಪೊಲೀಸರು ಮಹಿಳೆಯನ್ನು ಬಂಧಿಸಿ ಎಳೆದೊಯ್ದಿದ್ದರು.

Fact check: ಕೊರೋನಾದಿಂದ ಮುಕ್ತಿ ಕೋರಿ ಮಸೀದಿಗೆ ಮೊರೆ ಹೋದ ಕ್ಸಿ!

ಒತ್ತಾಯಪೂರ್ವಕವಾಗಿ ಎಳೆದೊಯ್ದಿದ್ದರಿಂದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದೇ ವಿಡಿಯೋವನ್ನು ತಿರುಚಿ ಕೊರೋನಾ ಪೀಡಿತ ಮಹಿಳೆಯನ್ನು ಮಧ್ಯರಸ್ತೆಯಲ್ಲಿಯೇ ಕೊಂದಿದ್ದಾರೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!