Fact check: ಮೋದಿ ಮೇಕಪ್‌ಗೆ ತಿಂಗಳಿಗೆ .15 ಲಕ್ಷ ಬೇಕಂತೆ, ಹೌದಾ!

By Kannadaprabha News  |  First Published Dec 5, 2019, 11:08 AM IST

ಪ್ರಧಾನಿ ನರೇಂದ್ರ ಮೋದಿ ಅವರು ಮೇಕಪ್‌ ಕಲಾವಿದೆಯೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ 15 ಲಕ್ಷ ರುಪಾಯಿ ಸಂಬಳ ಕೊಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಈ ಸುದ್ದಿ ಪೂರ್ತಿ ಓದಿ. 


ಪ್ರಧಾನಿ ನರೇಂದ್ರ ಮೋದಿ ಅವರು ಮೇಕಪ್‌ ಕಲಾವಿದೆಯೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ 15 ಲಕ್ಷ ರುಪಾಯಿ ಸಂಬಳ ಕೊಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್‌ ಆಗುತ್ತಿದೆ. ಆದಿತ್ಯ ಚತುರ್ವೇದಿ ಎಂಬುವರು ಮಾಡಿರುವ ಈ ಪೋಸ್ಟ್‌ 15,000 ಬಾರಿ ಶೇರ್‌ ಆಗಿದೆ. ಕಳೆದ ಒಂದೆರಡು ವರ್ಷಗಳಿಂದಲೂ ಈ ಪೋಸ್ಟ್‌ ಆಗಾಗ ವೈರಲ್‌ ಆಗುತ್ತಿದೆ.

Fact Check: ಮಹಿಳೆಯರು 9833312222 ಗೆ ಕರೆ ಮಾಡಿದ್ರೆ ಪೊಲೀಸರು ನೆರವಾಗ್ತಾರಾ?

Latest Videos

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಫೋಟೋದಲ್ಲಿ ಮಹಿಳೆಯೊಬ್ಬರು ಮೋದಿ ಅವರಿಗೆ ಮೇಕಪ್‌ ಮಾಡುತ್ತಿರುವಂತೆ ಕಾಣಿಸುತ್ತದೆ. ಮೋದಿ ಅವರು ಈ ಹಿಂದೆ ಅಮೆರಿಕ ಅಧ್ಯಕ್ಷರ ಭೇಟಿ ವೇಳೆ 10 ಲಕ್ಷದ ಸೂಟು ಧರಿಸಿದ್ದರು ಎಂದು ಸುದ್ದಿಯಾಗಿತ್ತು. ಹೀಗಾಗಿ ಮೋದಿ ಅವರು ಕಾರ‍್ಯಕ್ರಮದ ವೇಳೆ ವಿವಿಧ ರೀತಿಯ ವೇಷಭೂಷಣ ಧರಿಸಿರುವ ಫೋಟೋಗಳನ್ನು ಹಾಕಿ ಟೀಕಾಕಾರರು ಕಮೆಂಟ್‌ ಮಾಡುತ್ತಿದ್ದಾರೆ.

ಆದರೆ ವೈರಲ್‌ ಆಗಿರುವ ಫೋಟೋದ ಹಿಂದಿನ ಸತ್ಯಾಸತ್ಯ ಪರಿಶೀಲಿಸಿದಾಗ ಇದು 2016ರಲ್ಲಿ ತೆಗೆದಿದ್ದು ಎಂದು ತಿಳಿದುಬಂದಿದೆ. ಮೇಡಂ ಟುಸ್ಸಾಡ್‌ ಮೇಣದ ಪುತ್ಥಳಿ ನಿರ್ಮಿಸಲು ತಂಡವೊಂದು ಮೋದಿ ಅವರ ನಿವಾಸಕ್ಕೆ ಬಂದು ಅವರ ಅಳತೆ ತೆಗೆದುಕೊಂಡಿತ್ತು.

Fact Check: ಸೋನಿಯಾ ಗಾಂಧಿ ಫೋಟೋಗೆ ತಲೆಬಾಗಿ ನಮಸ್ಕರಿಸಿದ ಉದ್ಧವ್‌!

ಈ ವೇಳೆ ಮಹಿಳೆಯೊಬ್ಬರು ಮೋದಿ ಅವರ ಕಣ್ಣಿನ ಅಳತೆ ತೆಗೆದುಕೊಂಡಿದ್ದರು. ಆದರೆ ಈ ಫೋಟೋದ ಹಿನ್ನೆಲೆಯನ್ನು ಮರೆಮಾಚಿ ಅವರು ಮೇಕಪ್‌ ಕಲಾವಿದೆಗೆ ತಿಂಗಳಿಗೆ 15 ಲಕ್ಷ ರು. ಸಂಬಳ ನೀಡುತ್ತಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್ 

click me!