ಬಲವಂತವಾಗಿ ಪುರುಷತ್ವ ಪರೀಕ್ಷೆ: ವಿಶ್ವಸಂಸ್ಥೆಗೆ ಭಾರತದ ವಿರುದ್ಧ ನಿತ್ಯಾನಂದ ದೂರು!

By Web DeskFirst Published Dec 5, 2019, 9:49 AM IST
Highlights

ವಿಶ್ವಸಂಸ್ಥೆಗೆ ಭಾರತದ ವಿರುದ್ಧ ನಿತ್ಯಾನಂದ ದೂರು| ಭಾರತದ ನ್ಯಾಯಾಂಗ ವ್ಯವಸ್ಥೆ, ರಾಜಕೀಯ ಪಕ್ಷಗಳ ಬಗ್ಗೆ ಕೀಳು ಆರೋಪ| ಬಲವಂತವಾಗಿ ಪುರುಷತ್ವ ಪರೀಕ್ಷೆಗೆ ಒಳಪಡಿಸಿದ್ದಾಗಿ ದೂರು| ನಿರಾಶ್ರಿತ ಸ್ಥಾನಮಾನದ ಮೂಲಕ ತನಿಖಾ ಸಂಸ್ಥೆಗಳ ವಿಚಾರಣೆ ತಪ್ಪಿಸಿಕೊಳ್ಳುವ ಯತ್ನ

ನವದೆಹಲಿ[ಡಿ.05]: ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅದನ್ನು ಪ್ರತ್ಯೇಕ ದೇಶ ಎಂದು ಘೋಷಿಸಿಕೊಂಡಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ ತನಗೆ ನಿರಾಶ್ರಿತ ಸ್ಥಾನಮಾನ ನೀಡುವಂತೆ ಕೋರಿ ವಿಶ್ವಸಂಸ್ಥೆಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾನೆ. ಈ ಮೂಲಕ ಭಾರತದಲ್ಲಿ ತನ್ನ ಮೇಲೆ ದಾಖಲಾಗಿರುವ ಅತ್ಯಾಚಾರ, ಅಪಹರಣ ಮೊದಲಾದ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ತನಿಖೆಯಿಂದ ತಪ್ಪಿಸಿಕೊಳ್ಳುವ ತಂತ್ರ ರೂಪಿಸಿದ್ದಾನೆ.

ಅಷ್ಟುಮಾತ್ರವಲ್ಲದೆ, ವಿಶ್ವಸಂಸ್ಥೆಗೆ ರವಾನಿಸಿರುವ ಅರ್ಜಿಯಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡಿದ್ದಾನೆ. ಜೊತೆಗೆ ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಪೊಲೀಸ್‌ ಪಡೆಯ ಬಗ್ಗೆಯೂ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿದ್ದಾನೆ.

ನಿತ್ಯಾನಂದ ವಿರುದ್ಧ ಶೀಘ್ರ ಬ್ಲೂಕಾರ್ನರ್‌ ನೋಟಿಸ್‌!

ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಬಲವಂತವಾಗಿ ಪುರುಷತ್ವ ಪರೀಕ್ಷೆಗೆ ಒಳಪಡಿಸಿದ್ದನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ನಿತ್ಯಾನಂದ, ‘ಭಾರತೀಯ ಕೋರ್ಟ್‌ಗಳು ಆರೋಪಿಗಳನ್ನು ಬಲವಂತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತವೆ. ಅಲ್ಲಿ ಮೂರನೇ ವ್ಯಕ್ತಿ ಹಸ್ತಮೈಥುನ ಮಾಡುತ್ತಾರೆ. ಬಲವಂತವಾಗಿ ಶಿಶ್ನ ಚುಚ್ಚುಮದ್ದುಗಳನ್ನು ನೀಡುತ್ತಾರೆ. ಗುದನಾಳವನ್ನು ಶೋಧಿಸಲಾಗುತ್ತದೆ’ ಎಂದು ಆರೋಪಿಸಿದ್ದಾನೆ. ವ್ಯಕ್ತಿಯ ಲೈಂಗಿಕ ಸಾಮರ್ಥ್ಯ ಪರೀಕ್ಷೆಗಾಗಿ ಪುರುಷತ್ವ ಪರೀಕ್ಷೆಗೆ ಒಳಪಡಿಸುವುದು ಕೂಡ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಎನಿಸಿಕೊಳ್ಳುತ್ತದೆ. ಈ ರೀತಿಯ ಪರೀಕ್ಷೆ ಅವಕಾನಕರ, ಕೀಳುಮಟ್ಟದ್ದು ಎಂದು ನಿತ್ಯಾನಂದ ಹೇಳಿದ್ದಾನೆ.

ಇದೇ ವೇಳೆ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡಿರುವ ನಿತ್ಯಾನಂದ, ‘ಭಾರತದಲ್ಲಿ ಜನರ ಗುಂಪು ಅಮಾಯಕರನ್ನು ಬಡಿದು ಹತ್ಯೆ ಮಾಡುವ ಸಂಸ್ಕೃತಿ ಹೆಚ್ಚುತ್ತಿದೆ. ಈ ರೀತಿಯ ದಾಳಿಗಳು ರಾಜಕೀಯ ಪ್ರೇರಿತವಾದದ್ದು. ಆರ್‌ಎಸ್‌ಎಸ್‌, ಬಜರಂಗದಳ ಅಥವಾ ಡಿಎಂಕೆ ನಾಯಕರು ಇಂತಹ ದಾಳಿಗಳನ್ನು ಸಂಘಟಿಸಿದ್ದಾರೆ. ಭಾರತದಲ್ಲಿ ಉಗ್ರ ಹಿಂದುತ್ವ ಚಳವಳಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವಹಿಂದೂ ಪರಿಷತ್‌, ಬಜರಂಗದಳಗಳು ಭಾಗಿಯಾಗಿವೆ ಎಂದು ನಿತ್ಯಾನಂದ ಆರೋಪಿಸಿದ್ದಾನೆ.

ಅಯ್ಯೋ ನಿತ್ಯಾನಂದ: ದೇಶ ಕಟ್ಟುವ ನಿಯಮ ಗೊತ್ತೇನೋ ಕಂದ?

ನಿತ್ಯಾ ಆರೋಪಗಳೇನು?

1. ಭಾರತೀಯ ಕೋರ್ಟುಗಳು ಬಲವಂತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತವೆ

2. ಭಾರತದಲ್ಲಿ ಜನರ ಗುಂಪು ಅಮಾಯಕರನ್ನು ಬಡಿದು ಕೊಲ್ಲವು ಸಂಸ್ಕೃತಿ ಹೆಚ್ಚುತ್ತಿದೆ

3. ಆರ್‌ಎಸ್‌ಎಸ್‌, ಬಜರಂಗದಳ ಅಥವಾ ಡಿಎಂಕೆ ನಾಯಕರು ಇಂತಹ ದಾಳಿ ಮಾಡಿಸುತ್ತಾರೆ

4. ಉಗ್ರ ಹಿಂದುತ್ವ ಚಳವಳಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವಹಿಂದೂ ಪರಿಷತ್‌ ಭಾಗಿಯಾಗಿವೆ

ನಿತ್ಯಾನಂದನಿಂದ ಹೊಸ ದೇಶ ಸ್ಥಾಪನೆ! ಎಲ್ಲಿದೆ ದೇಶ?

click me!