Fact check: ಪ್ಯಾಂಗಾಂಗ್ ಸರೋವರ ಬಳಿ 2 ಸ್ಥಾನ ಆಕ್ರಮಿಸಿಕೊಂಡಿತಾ ಚೀನಾ?

By Suvarna News  |  First Published Oct 30, 2020, 2:09 PM IST

ಭಾರತ ಹಾಗೂ ಚೀನಾ ಗಡಿ ಪ್ರದೇಶದಲ್ಲಿನ ಸಂಘರ್ಷ ಇನ್ನೂ ಕೂಡ ಅಂತ್ಯಗೊಂಡಿಲ್ಲ. ಇದರ ನಡುವೆ ಹಲವು ಊಹಾಪೋಹ ಸುದ್ದಿಗಳು ಹರಿದಾಡುತ್ತಿದೆ.  ಚೀನಾ ಪ್ಯಾಂಗಾಂಗ್ ಸರೋವರದ ಬಳಿಯ ಪಿಂಗರ್ 2 ಹಾಗೂ ಫಿಂಗರ್ 3 ವಲಯ ಪ್ರದೇಶ ಆಕ್ರಮಿಸಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಇಲ್ಲಿದೆ.
 


ನವದೆಹಲಿ(ಅ.30):  ಲಡಾಖ್ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಲು ಭಾರತೀಯ ಸೇನೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಮಾತುಕತೆಯಲ್ಲಿ ತಲೆಯಾಡಿಸಿ ಬಳಿಕ ತನ್ನ ನರಿ ಬುದ್ದಿ ತೋರಿಸುತ್ತಲೇ ಇದೆ. ಇತ್ತ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಇಷ್ಟೇ ಅಲ್ಲ ಚೀನಾದ ವಶದಲ್ಲಿದ್ದ ಹಲವು ಸೇನಾ ಪೋಸ್ಟ್ ಹಾಗೂ ಬೆಟ್ಟ ಪ್ರದೇಶಗಳನ್ನು ಭಾರತ ವಶಪಡಿಸಿಕೊಂಡಿದೆ. ಇದೀಗ ಪ್ಯಾಂಗಾಂಗ್ ಸೋರವರದ ಬಳಿಕ ಫಿಂಗ್ 2 ಹಾಗೂ ಫಿಂಗರ್ 3 ವಲಯಗಳನ್ನು ಚೀನಾ ಆಕ್ರಮಿಸಿಕೊಂಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಲಡಾಖ್‌ನಲ್ಲಿ ಒಎಫ್‌ಸಿ ಕೇಬಲ್‌: ಸಂಘರ್ಷ ಮುಂದುವರೆಸಲು ಚೀನಾ ಸಿದ್ಧತೆ!.

Tap to resize

Latest Videos

undefined

ಇಂಗ್ಲೀಷ್ ಮಾಧ್ಯಮ  ದಿ ಹಿಂದೂ ಈ ಕುರಿತು ವರದಿ ಪ್ರಕಟಿಸಿತ್ತು. ತಕ್ಷಣವೇ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಫ್ಯಾಕ್ಟ್ ಚೆಕ್ ವಿಭಾಗ(PIB Fact check) ಪ್ರತಿಕ್ರಿಯೆ ನೀಡಿದೆ. ಇದು ಸುಳ್ಳು ಸುದ್ದಿ ಎಂದು ಸಾಕ್ಷಿ ಸಮೇತ ಹೇಳಿದೆ. ಇಷ್ಟೇ  ಈ ವರದಿಯನ್ನು ಭಾರತೀಯ ಸೇನೆ ತಳ್ಳಿ ಹಾಕಿದೆ.

 

. citing a claim, has published that Chinese troops have further transgressed into Indian territory and occupied positions in Finger 2 and 3 of the north bank of Lake.: It is a news. has refuted this statement. pic.twitter.com/PvNjUQRCt4

— PIB Fact Check (@PIBFactCheck)

ಪ್ಯಾಂಗಾಂಗ್‌ನಲ್ಲಿ ಕಂಗೆಟ್ಟ ಚೀನಾ:, ಗಡಿಯಲ್ಲಿ ಭಾರೀ ಸಲಕರಣೆ ಜಮಾವಣೆ

ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯ ಫಿಂಗರ್ 2 ಹಾಗೂ ಫಿಂಗರ್ 3 ಸ್ಥಾನಗಳನ್ನು ಚೀನಾ ಸೇನೆ ಆಕ್ರಮಿಸಿಕೊಂಡಿದೆ ಅನ್ನೋ ದಿ ಹಿಂದೂ ಮಾಧ್ಯಮ ಪ್ರಕಟಿಸಿದ ವರದಿ ಸತ್ಯಕ್ಕೆ ದೂರವಾಗಿದೆ. ಈ ಕುರಿತು ಭಾರತೀಯ ಸೇನೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಇಷ್ಟೇ ಅಲ್ಲ ಈ ವರದಿ ಸುಳ್ಳು ಎಂದಿದೆ ಎಂದು PIB Fact check ಸ್ಪಷ್ಟಪಡಿಸಿದೆ.

ಚೀನಾ ಸೇನೆ ಭಾರತದ ಭೂಭಾಕ ಅತಿಕ್ರಮಣ ಮಾಡುತ್ತಿದೆ. ಇದೀಗ ಅತಿಕ್ರಮಣ ಮಾತ್ರವಲ್ಲ, ಪ್ಯಾಂಗೋಂಗ್ ಸರೋವರದ ಫಿಂಗರ್ 2 ಹಾಗೂ ಫಿಂಗರ್ 3 ಸ್ಥಾನ ವಶಪಡಿಸಿಕೊಂಡಿದೆ ಎಂದು  ಲಡಾಖ್ ಬಿಜೆಪಿ ಮಾಜಿ ಸಂಸದ ತುಪಸ್ತಾನ್ ಚೆವಾಂಗ್ ದಿ ಹಿಂದೂ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಪ್ಯಾಂಗಾಂಗ್ ಸರೋವರದ ಬಳಿಕ ಚೀನಾ ಕಿರಿಕ್ ಮಾಡುತ್ತಲೇ ಇದೆ. ಚೀನಾ ಸೇನೆ ಅತಿಕ್ರಮಣಕ್ಕೆ ಹಲವು ಭಾರಿ ಯತ್ನ ಮಾಡಿದೆ. ಆದರೆ ಚೀನಾದ ಪ್ರತಿ ಪ್ರಯತ್ನವನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಸರೋವರದ ಉತ್ತರ ದಂಡೆಯಲ್ಲಿ ಚೀನಾ ಭಾರಿ ಯುದ್ಧ ಶಸ್ತ್ರಾಸ್ರ ಹಾಗೂ ಹೆಚ್ಚುವರಿ ಸೇನೆ ನಿಯೋಜಿಸುವ ಪ್ರಯತ್ನ ಮಾಡಿತ್ತು. ಆದರೆ ಚೀನಾ ಸೇನೆಯ ಕುತಂತ್ರಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ.

click me!