ನಿಖಿತಾ ಹತ್ಯೆ ಪ್ರಕರಣ: ಕುಟಂಬಕ್ಕೆ 1 ಕೋಟಿ ರೂ ಪರಿಹಾರಕ್ಕೆ ಒತ್ತಾಯಿಸಿದ VHP!

By Suvarna NewsFirst Published Oct 30, 2020, 12:37 PM IST
Highlights

ಕಾಲೇಜು ವಿದ್ಯಾರ್ಥಿನಿ ನಿಖಿತಾ ಹತ್ಯೆ ಪ್ರಕರಣ ಇದೀಗ ಭಾರಿ ಸದ್ದು ಮಾಡುತ್ತಿದೆ.  ಇದೀಗ ವಿಶ್ವಹಿಂದೂ ಪರಿಷತ್, ನಿಖಿತಾ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಲವ್ ಜಿಹಾದ್ ಅಂತ್ಯ ಹಾಡಲು ಆಗ್ರಹಿಸಿದ್ದಾರೆ.

ಫರೀದಾಬಾದ್(ಅ.30): ಮತಾಂತರಕ್ಕೆ ಒತ್ತಾಯಿಸಿ ನಡೆದ ನಿಖಿತಾ ಹತ್ಯೆ ಪ್ರಕರಣ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಲೇಜು ಮುಂಭಾಗದಲ್ಲೇ 21 ವರ್ಷದ ನಿಖಿತಾಳಿಗೆ ಗುಂಡಿಕ್ಕಿ ಕೊಂದ ತೌಸಿಫ್ ರೆಹಾನ್‌ನ್ನು ಬಂಧಿಸಲಾಗಿದೆ. ಬಲ್ಲಭಗಡದಲ್ಲಿರುವ ನಿಖಿಥಾ ಮನೆಗೆ ಇದೀಗ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಹಾಗೂ ಆಡ್ವೋಕೇಟ್ ಆಲೋಕ್ ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ

ನಿಖಿತಾ ಸಾವು ತೀವ್ರ ನೋವು ತಂದಿರುವುದಾಗಿ ಆಲೋಕ್ ಕುಮಾರ್ ಹೇಳಿದ್ದಾರೆ. ನಿಖಿತಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಳು. ಕಠಿಣ ಪರಿಶ್ರಮದ ಮೂಲಕ ಕನಸುಗಳನ್ನು ನನಸಾಗಿಸಲು ಹೆಜ್ಜೆ ಇಡುತ್ತಿದ್ದಳು. ಆದರೆ ಹಾಡಹಗಲೇ ಇಸ್ಲಾಂ ಜಿಹಾದಿಗಳ ಕ್ರೂರಕ್ಕೆ ಬಲಿಯಾಗಿರುವುದು ದುರಂತ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. 

 ಇಸ್ಲಾಂ-ಫ್ಯಾಸಿಸ್ಟ್ ಜಿಹಾದಿಗಳ ಚಟುವಟಿಕೆಗಳು ನಾಗರಿಕ ಸಮಾಜ, ಅಭಿವ್ಯಕ್ತಿ ಸ್ವಾತಂತ್ರ್ಯ, ಘನತೆ ಮತ್ತು ಜಗತ್ತಿನಾದ್ಯಂತ ಜನರ ಜೀವನವನ್ನು ಅಪಾಯಕ್ಕೆ ದೂಡಿದೆ ಎಂದು ಹೇಳಿದರು. ನಾವೆಲ್ಲಾ ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕಾಗಿದೆ ಎಂದು ಆಲೋಕ್ ಕುಮಾರ್ ಒತ್ತಾಯಿಸಿದ್ದಾರೆ. 

ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!.

ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳು ನೇರವಾಗಿ ಜಿಹಾದಿಗಳಿ ಬಲಿಯಾಗುತ್ತಿದ್ದಾರೆ. ಹಲವರು ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತಾಂತರ, ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿಖಿತಾ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಲೋಕ್ ಕುಮಾರ್ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲ ಲವ್ ಜಿದಾಹ್ ಮೂಲಕ ಮತಾಂತರ ಮಾಡುತ್ತಿರುವ ವಿರುದ್ಧ ಪರಿಣಾಮಕಾರಿಯಾದ ಶಾಸನ ಜಾರಿಗೆ ತರಲು ಆಗ್ರಹಿಸಿದ್ದಾರೆ.

30 ದಿನದ  ಒಳಗೆ ತನಿಖೆ ಮುಗಿಸಲು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ತ್ವರಿತ ನ್ಯಾಯಾಲಯದಲ್ಲಿ ಪ್ರತಿ ದಿನ ವಿಚಾರಣೆ ನಡೆಸಿ ನಿಖಿತಾಗೆ ನ್ಯಾ ಕೊಡಿಸಬೇಕು ಎಂದು ಹರಿಯಾಣ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಹಿಂದೂಗಳ ಮೇಲಿನ ದೌರ್ಜನ್ಯ ಅಂತ್ಯಗೊಳಿಸಲು ವಿಶ್ವ ಹಿಂದೂ ಪರಿಷತ್ ನಿರಂತರ ಹೋರಾಟ ಮಾಡಲಿದೆ. ಜಿಹಾದಿಗಳ ಅಟ್ಟಹಾಸಕ್ಕೆ ಅಂತ್ಯ ಹಾಡುವವರಗೆ ಹೋರಾಟ ನಿಲ್ಲದು ಎಂದು ಆಲೋಕ್ ಕುಮಾರ್ ಭರವಸೆ ನೀಡಿದ್ದಾರೆ.

click me!