#ResignModi ಪೋಸ್ಟ್ ಕೆಲ ಕಾಲ ತಡೆ ಹಿಡಿದ ಫೇಸ್‌ಬುಕ್

By Kannadaprabha NewsFirst Published Apr 30, 2021, 10:17 AM IST
Highlights

 #ResignModi ಎಂಬ ಹ್ಯಾಶ್‌ಟ್ಯಾಗ್‌ನಡಿ ಮಾಡಿದ ಪೋಸ್ಟ್‌ಗಳನ್ನು ಬುಧವಾರ ಕೆಲ ಕಾಲ ಫೇಸ್‌ಬುಕ್‌ ತಡೆಹಿಡಿದಿತ್ತು. ಬಳಿಕ ತೆರವು ಮಾಡಿತು. ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಈ ರೀತಿ ಹ್ಯಾಶ್ ಟ್ಯಾಗ್ ಬಳಸಿ ಆಕ್ರೋಶ ಹೊರಹಾಕಲಾಗಿತ್ತು. 
 

 ನವದೆಹಲಿ (ಏ.30):  ಕೊರೋನಾ ವೈರಸ್‌ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಗೆ ಆಗ್ರಹಿಸಿದ ಪೋಸ್ಟ್‌ಗಳನ್ನು ಫೇಸ್‌ಬುಕ್‌ ಕೆಲ ತಾಸುಗಳ ಕಾಲ ಬ್ಲಾಕ್‌ ಮಾಡಿ, ನಂತರ ಮತ್ತೆ ವೀಕ್ಷಣೆಗೆ ತೆರವುಗೊಳಿಸಿದ ಘಟನೆ ನಡೆದಿದೆ. #ResignModi ಎಂಬ ಹ್ಯಾಶ್‌ಟ್ಯಾಗ್‌ನಡಿ ಮಾಡಿದ ಪೋಸ್ಟ್‌ಗಳನ್ನು ಬುಧವಾರ ಕೆಲ ಕಾಲ ಫೇಸ್‌ಬುಕ್‌ ತಡೆಹಿಡಿದಿತ್ತು.

ಈ ಕುರಿತು ಗುರುವಾರ ಸ್ಪಷ್ಟನೆ ನೀಡಿರುವ ಫೇಸ್‌ಬುಕ್‌ ಇಂಡಿಯಾ ವಕ್ತಾರ, ‘ಅಚಾತುರ್ಯದಿಂದ ತಾತ್ಕಾಲಿಕವಾಗಿ ಈ ಹ್ಯಾಶ್‌ಟ್ಯಾಗ್‌ನ ಪೋಸ್ಟ್‌ಗಳನ್ನು ಬ್ಲಾಕ್‌ ಮಾಡಿದ್ದೆವು. ಭಾರತ ಸರ್ಕಾರ ಬ್ಲಾಕ್‌ ಮಾಡಲು ನಮಗೆ ಹೇಳಿರಲಿಲ್ಲ’ ಎಂದು ತಿಳಿಸಿದ್ದಾರೆ. ಕೇಂದ್ರ ಐಟಿ ಸಚಿವಾಲಯ ಕೂಡ ‘ಈ ಹ್ಯಾಶ್‌ಟ್ಯಾಗ್‌ ಬ್ಲಾಕ್‌ ಮಾಡಲು ನಾವು ಫೇಸ್‌ಬುಕ್‌ಗೆ ಹೇಳಿರಲಿಲ್ಲ’ ಎಂದು ತಿಳಿಸಿದೆ.

ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ! ...

ಇತ್ತೀಚೆಗಷ್ಟೇ 200ಕ್ಕೂ ಹೆಚ್ಚು ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಸೋಷಿಯಲ್‌ ಮೀಡಿಯಾಗಳಿಗೆ ಸೂಚಿಸಿತ್ತು. ಅದು ವಿವಾದಕ್ಕೆ ಕಾರಣವಾಗಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!