
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಿಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಕದನ ವಿರಾಮದ ಬಗ್ಗೆ ಭಾರತ ಮತ್ತು ಪಾಕ್ ಒಪ್ಪಂದಕ್ಕೆ ಬಂದಿವೆ, ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ದೃಢವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿ ಹೇಳಿದ್ದಾರೆ.
"ಭಾರತ ಮತ್ತು ಪಾಕಿಸ್ತಾನ ಇಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಭಾರತವು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ದೃಢ ಮತ್ತು ಸಂಧಾನವಾಗದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಅದು ಹಾಗೆಯೇ ಮುಂದುವರಿಯುತ್ತದೆ." ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ಅಂದರೆ ಎರಡೂ ದೇಶಗಳ ಮಧ್ಯೆ ಇದ್ದ ಗುಂಡಿನ ದಾಳಿಗಳು ನಿಲ್ಲುತ್ತವೆ. ಆದರೆ ಉಗ್ರವಾದದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಜೈಶಂಕರ್ ಹೇಳಿದ್ದಾರೆ. ಇಂದು ಪ್ರಧಾನಿ ಅವರ ನಿವಾಸದಲ್ಲಿ ನಡೆದ ಮೂರು ಸೇನೆಗಳ ಮುಖ್ಯಸ್ಥರ ನಡುವಿನ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೂಡ ಉಗ್ರ ರೀತಿಯಲ್ಲಿ ದಾಳಿ ನಡೆದರೆ ಭಾರತ ಅದನ್ನು ಯುದ್ಧವೆಂದೇ ಪರಿಗಣಿಸಲಿದೆ ಎಂಬ ನೀತಿಯನ್ನು ಹೊಂದಿರಲಿದ್ದೇವೆ ಎಂದು ಹೇಳಿತ್ತು. ಭಾರತದ ಮೇಲೆ ಉಗ್ರ ದಾಳಿಗೆ ತನ್ನ ನೆಲೆಗಳನ್ನು ಪಾಕಿಸ್ತಾನ ನೀಡಿದರೆ ಭಾರತದ ಉತ್ತರ ಯುದ್ಧವೇ ಆಗಿರಲಿದೆ ಎಂಬುದು ಸ್ಪಷ್ಟ.
ಕದನ ವಿರಾಮಕ್ಕೆ ಮೊದಲು ಮಾತುಕತೆಗೆ ಒಪ್ಪಿಕೊಂಡಿದ್ದು ಪಾಕಿಸ್ತಾನವೇ ಆಗಿದೆ. ಮಧ್ಯಾಹ್ನ ಭಾರತದ ಡಿಜಿಒಎಂ ಗೆ ಮೊದಲ ಕರೆ ಪಾಕಿಸ್ತಾದಿಂದ ಬಂತು. ಈ ನಡುವೆ ಮೊದಲು ಅಂದರೆ ಭಾರತದ ಘೋಷಿಸುವ ಮುನ್ನವೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆದಿದೆ ಎಂದು ಸಂಜೆ ಘೋಷಿಸಿದ್ದರು. ಹೀಗಾಗಿ ಅಮೆರಿಕದ ಮಧ್ಯಸ್ಥಿಕೆ ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಭಾರತ ಈಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಲ್ಲೂ ಕೂಡ ಅಮೆರಿಕದ ಮಧ್ಯಸ್ಥಿಕೆಯನ್ನು ಉಲ್ಲೇಖಿಸಿಲ್ಲ. ಯಾಕೆಂದರೆ ಭಾರತ ನಮ್ಮ ಸಮಸ್ಯೆಯನ್ನು ನಾವೇ ನಿವಾರಿಸಿಕೊಳ್ಳುತ್ತೇವೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಪಾಕಿಸ್ತಾನ ಮತ್ತು ನಮ್ಮ ಮಧ್ಯೆ ಮೂರನೇ ದೇಶ ವಿಷಯದಲ್ಲಿ ಬರುವಂತಿಲ್ಲ ಎಂಬುದು ಭಾರತ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವ ನಿಲುವು ಹೀಗಾಗಿ ಅಮೆರಿಕದ ಮಧ್ಯಸ್ಥಿಕೆ ಏನು ಎಂಬುದು ಪ್ರಶ್ನೆ ಎದ್ದಿದೆ.
ಸಂಜೆ 5 ಗಂಟೆಯಿಂದಲೇ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಮೇ.12ರಂದು ಭಾರತದ ಡಿಜಿಒಎಂ ಮತ್ತು ಪಾಕಿಸ್ತಾನದ ಡಿಜಿಒಎಂ ನಡುವೆ ಮಾತುಕತೆ ನಡೆಯಲಿದೆ. ಹೀಗಾಗಿ ಸದ್ಯಕ್ಕಂತೂ ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಮೇ.12ರಂದು ಉಭಯ ದೇಶಗಳ ನಡುವೆ ಯಾವ ರೀತಿಯಲ್ಲಿ ಮಾತುಕತೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಇಂದು ಮಧ್ಯಾಹ್ನ 3:35 ಗಂಟೆಗೆ ಭಾರತೀಯ ಡಿಜಿಎಂಒ ಅವರಿಗೆ ಮಾತುಕತೆಗೆ ಕರೆದರು. ಭಾರತೀಯ ಸಮಯ 17.00 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ