ದೀಪಾವಳಿ ಬಳಿಕ ಸೋಂಕು ಸ್ಫೋಟ : ತಜ್ಞರ ಎಚ್ಚರಿಕೆ

Kannadaprabha News   | Asianet News
Published : Nov 02, 2021, 10:43 AM ISTUpdated : Nov 02, 2021, 11:03 AM IST
ದೀಪಾವಳಿ ಬಳಿಕ ಸೋಂಕು ಸ್ಫೋಟ : ತಜ್ಞರ ಎಚ್ಚರಿಕೆ

ಸಾರಾಂಶ

ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳು ನಿಯಂತ್ರಣ  ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೋಂಕು ಸ್ಫೋಟಗೊಳ್ಳುವ ಆತಂಕ 

ನವದೆಹಲಿ (ಅ.02) : ಭಾರತದಲ್ಲಿ (India) ಕಳೆದ ಕೆಲ ದಿನಗಳಿಂದ ಕೋವಿಡ್‌ (Covid) ಪ್ರಕರಣಗಳು ನಿಯಂತ್ರಣದಲ್ಲಿದ್ದರೂ ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

ದೇಶದಲ್ಲಿ ಸತತ 24 ದಿನಗಳಿಂದ ದೈನಂದಿನ ಕೊರೋನಾ (Corona Cases) ಪ್ರಕರಣಗಳು 20,000ಕ್ಕಿಂತ ಕಡಿಮೆ ದಾಖಲಾಗುತ್ತಿಯಾದರೂ ಕೆಲವೇ ಕೆಲವು ರಾಜ್ಯಗಳು ಒಟ್ಟಾರೆ ಪ್ರಕರಣಕ್ಕೆ ಗರಿಷ್ಠ ಪ್ರಮಾಣದ ಕೊಡುಗೆ ನೀಡುತ್ತಿವೆ. ಈ ನಡುವೆ ಹಬ್ಬಗಳ (Festival) ಕಾರಣದಿಂದ ಬಹುತೇಕ ರಾಜ್ಯಗಳ ಜನರು ಮಾಸ್ಕ್‌ (Mask), ಸಾಮಾಜಿಕ ಅಂತರ (Social Distance) ಸೇರಿ ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ. ಹೀಗಾಗಿ ದೀಪಾವಳಿ (Deepavali) ನಂತರ ಕೋವಿಡ್‌ (Covid) ಸ್ಫೋಟಗೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಯುಎಸ್‌ಎ ಮತ್ತು ಯುರೋಪ್‌ನಲ್ಲಿ ಕೊರೋನಾ ಏಕಾಏಕಿ ಏರಿಕೆ, ಭಾರತಕ್ಕೂ ಆತಂಕ

ಸೋಮವಾರ ಕೇರಳದಲ್ಲಿ (Kerala) 7,167 ಹೊಸ ಪ್ರಕರಣಗಳು ಪತ್ತೆಯಾದರೆ, ಮಹಾರಾಷ್ಟ್ರದಲ್ಲಿ 1172, ತಮಿಳುನಾಡಿನಲ್ಲಿ 1009, ಪಶ್ಚಿಮ ಬಂಗಾಳದಲ್ಲಿ 914, ಒಡಿಶಾದಲ್ಲಿ 488, ಆಂಧ್ರಪ್ರದೇಶದಲ್ಲಿ 385 ಹೊಸ ಕೋವಿಡ್‌ ಕೇಸ್‌ ಪತ್ತೆಯಾಗಿವೆ. ಇಳಿದ ರಾಜ್ಯಗಳಲ್ಲಿ ನಿತ್ಯ ಕನಿಷ್ಠ 200 ಕೊರೋನಾ ಪ್ರಕರಣಗಳು ದೃಢಪಡುತ್ತಿವೆ.

ಈ ನಡುವೆ ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ಸಂಬಂಧ ನ.3ರಂದು ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರ ಉಪಸ್ಥಿತಿಯಲ್ಲಿ ಸಭೆ ಕರೆದಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ಸಭೆಯಲ್ಲಿ 11 ರಾಜ್ಯಗಳ ಮುಖ್ಯಮಂತ್ರಿಗಳು, 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಲಿದ್ದಾರೆ.

ದಾಖಲೆ ಜನ ಸಂಚಾರ

 

ಕೋವಿಡ್‌ (Covid) ಮೊದಲ ಹಾಗೂ ಎರಡನೇ ಅಲೆಯ ಹೊಡೆತದಿಂದ ಮಂಕಾಗಿದ್ದ ಪ್ರವಾಸೋದ್ಯಮ (Tourism), ರಸ್ತೆ (Road) ಹಾಗೂ ವಿಮಾನ ಸಂಚಾರ (Flught) ಈಗ ಸಹಜ ಸ್ಥಿತಿಗೆ ಮರಳಿದೆ. ಮೂರೂ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆ ಪ್ರಮಾಣದ ಚಟುವಟಿಕೆ ಹಾಗೂ ವಹಿವಾಟು ನಡೆದಿರುವುದೇ ಬಹುತೇಕ ಎಲ್ಲ ವಲಯಗಳ ಚೇತರಿಕೆ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ: ಕಳೆದ 17 ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣ

ಅಕ್ಟೋಬರ್‌ ಒಂದೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 3356 ಕೋಟಿ ರು. ಟೋಲ್‌ (Toll) ಶುಲ್ಕವನ್ನು ಫಾಸ್ಟ್ಯಾಗ್‌ ಮೂಲಕ ಸಂಗ್ರಹವಾಗಿದೆ. ಶನಿವಾರ ಸಾರ್ವಕಾಲಿಕ ದಾಖಲೆಯ 122.81 ಕೋಟಿ ರು. ಫಾಸ್ಟ್ಯಾಗ್‌ನಿಂದ (Fastag) ಸಂಗ್ರಹವಾಗಿದೆ.

ಕರ್ನಾಟಕದಲ್ಲಿ ಕೊರೋನಾ: ಕಳೆದ 17 ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣ

ಶನಿವಾರ ದೇಶಾದ್ಯಂತ 2500ಕ್ಕೂ ಹೆಚ್ಚು ವಿಮಾನಗಳಲ್ಲಿ 3.38 ಲಕ್ಷ ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸಿದ್ದಾರೆ. ಇದು ಕೋವಿಡ್‌ (Covid) 2ನೇ ಅಲೆ ಆರಂಭದ ನಂತರ ದಾಖಲೆಯ ಸಂಚಾರ. ಇನ್ನು ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ 4 ಲಕ್ಷ ಯಾತ್ರಿಕರು ಚಾರ್‌ಧಾಮ (Chardham) ಯಾತ್ರೆ ಕೈಗೊಂಡಿದ್ದು, ಕೂಡ ಪ್ರವಾಸೋದ್ಯಮ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ.

ದಾಖಲೆಯ ಟೋಲ್‌ ಸಂಗ್ರಹ:

ಹಬ್ಬಗಳು (Festival) ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಅಕ್ಟೋಬರ್‌ ತಿಂಗಳೊಂದರಲ್ಲೇ ಆನ್‌ಲೈನ್‌ ಟೋಲ್‌ (Online Toll) ಶುಲ್ಕ ಸಂಗ್ರಹ ವ್ಯವಸ್ಥೆ ಆಗಿರುವ ಫಾಸ್ಟ್ಯಾಗ್‌ನಲ್ಲಿ ದಾಖಲೆಯ 21.42 ಕೋಟಿ ವಹಿವಾಟುಗಳು ನಡೆದಿದೆ. ಇದರೊಂದಿಗೆ ಸರ್ಕಾರಕ್ಕೆ ಈವರೆಗಿನ ಸಾರ್ವಕಾಲಿಕ ದಾಖಲೆಯ 3356 ಕೋಟಿ ರು. ಒಂದೇ ತಿಂಗಳಲ್ಲಿ ಸಂಗ್ರಹವಾಗಿದೆ. ಅಲ್ಲದೆ ಕಳೆದ ಶನಿವಾರ ಒಂದೇ ದಿನ 122.81 ಕೋಟಿ ರು. ಫಾಸ್ಟ್ಯಾಗ್‌ನಿಂದ ಸಂಗ್ರಹವಾಗಿದೆ ಎಂದು ಸರ್ಕಾರ (Govt) ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು