ಡ್ರಗ್‌ ಪೆಡ್ಲರ್‌ ಜೊತೆ ಮಾಜಿ ಸಿಎಂ ಫಡ್ನಾವಿಸ್ ಪತ್ನಿಗೆ ನಂಟು : ‘ಬಾಂಬ್‌’

By Kannadaprabha NewsFirst Published Nov 2, 2021, 9:17 AM IST
Highlights
  • ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿ ಸಮೀರ್‌ ವಾಂಖೇಡೆ ವಿರುದ್ಧ ದಿನಕ್ಕೊಂದು ಆರೋಪ 
  • ಡ್ರಗ್ಸ್‌ ಪೆಡ್ಲರ್‌ ಜೊತೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಇರುವ ಫೋಟೋ  ಟ್ವೀಟ್‌ 

 ಮುಂಬೈ (ಅ.02): ನಟ ಶಾರುಖ್‌ (Sharuk Khan) ಪುತ್ರ ಆರ್ಯನ್‌ ಖಾನ್‌ (Aryan Khan) ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿ ಸಮೀರ್‌ ವಾಂಖೇಡೆ (sameer wankhede) ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ಮಹಾರಾಷ್ಟ್ರದ (Maharshtra) ಸಚಿವ ನವಾಬ್‌ ಮಲಿಕ್‌ (Navab Malik), ಇದೀಗ ಡ್ರಗ್ಸ್‌ ಪೆಡ್ಲರ್‌ ಜೊತೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ (Devendra padnavis) ಅವರ ಪತ್ನಿ ಅಮೃತಾ ಇರುವ ಫೋಟೋ ಒಂದನ್ನು ಟ್ವೀಟ್‌ (Tweet) ಮಾಡಿದ್ದಾರೆ.

ಬಿಜೆಪಿ (BJP) ನಾಯಕರು ಮತ್ತು ಡ್ರಗ್‌ ಪೆಡ್ಲರ್‌ ಜೊತೆಗಿನ ನಂಟಿನ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿ ಅದರ ಜೊತೆಗೆ ಡ್ರಗ್‌ ಪೆಡ್ಲರ್‌ ಜೈದೀಪ್‌ ರಾಣಾ ಮತ್ತು ಅಮೃತಾ ಫಡ್ನವೀಸ್‌ (Amrutha Padnavis) ಇರುವ ಫೋಟೋ ಲಗತ್ತಿಸಿದ್ದಾರೆ.

ನವಾಬ್ ಮಲಿಕ್‌ಗೆ ಭೂಗತ ಪಾತಕಿ ನಂಟು, ದೀಪಾವಳಿ ಬಳಿಕ ದಾಖಲೆ ಬಹಿರಂಗ ಎಂದ ಫಡ್ನವಿಸ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವೀಸ್‌, ನಾನು ಸಿಎಂ ಆಗಿದ್ದ ವೇಳೆ ನದಿಗಳ ಪುನರುಜ್ಜೀವನ ಕುರಿತ ಕಾರ್ಯಕ್ರಮದ ಶೂಟಿಂಗ್‌ ವೇಳೆ ತೆಗೆದ ಫೋಟೋ ಇದು. ಜೈದೀಪ್‌ (Jai ಎಲ್ಲರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದ. ಆದರೆ ಅಮೃತಾ ಜೊತೆಗಿನ ಫೋಟೋ ಮಾತ್ರವೇ ಟ್ವೀಟ್‌ ಮಾಡುವ ಮೂಲಕ ನವಾಬ್‌ ಮಲಿಕ್‌ ತಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. 

ದೀಪಾವಳಿ ಬಳಿಕ ನಾನು ಭೂಗತ ಜಗತ್ತಿನೊಂದಿಗೆ ನವಾಬ್‌ ಮಲಿಕ್‌ಗಿರುವ ನಂಟಿನ ಕುರಿತು ಮಾಹಿತಿ ಬಹಿರಂಗಪಡಿಸುತ್ತೇನೆ. ಅದನ್ನು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಜೊತೆಗೂ ಹಂಚಿಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ನವಾಬ್ ಮಲಿಕ್‌ಗೆ ಭೂಗತ ಪಾತಕಿ ನಂಟು

 

ಬಾಲಿವುಡ್ ಡ್ರಗ್ಸ್ ಪ್ರಕರಣದ(Bollywood Drug case) ತನಿಖೆ ನಡೆಯುತ್ತಿದೆ. ಆದರೆ ಆರೋಪ, ಪ್ರತ್ಯಾರೋಪ, ರಾಜಕೀಯ ಕೆಸರೆರೆಚಾಟವೂ ಮುಂದುವರಿದಿದೆ. ಇದರ ನಡುವೆ NCB ಅಧಿಕಾರಿ ಸಮೀರ್ ವಾಂಖೆಡೆ(Sameer Wankhede) ವಿರುದ್ಧ ಸತತ ಆರೋಪ ಮಾಡಿದ್ದ NCP ನಾಯಕ ನವಾಬ್ ಮಲಿಕ್(Nawab Malik), ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್(Devendra Fadnavis) ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಫಡ್ನವಿಸ್ ಇದೀಗ ನವಾಬ್ ಮಿಲಿಕ್‌ಗೆ ಭೂಗತ ಪಾತಕಿಗಳ ಜೊತೆ ನಂಟಿದೆ. ದೀವಾಪಳಿ ಬಳಿಕ ನವಾಬ್ ಮಲಿಕ್ ಪಾತಕಿಗಳ ಜೊತೆಗಿನ ನಂಟಿನ ವಿವರನ್ನು ದಾಖಲೆ ಸಮೇತ ಬಹಿರಂಗ ಪಡಿಸುವುದಾಗಿ ಎಚ್ಚರಿಸಿದ್ದಾರೆ.

ಮುಂಬೈಯಿಂದ ಬಾಲಿವುಡ್‌ ಹೊರ ಹಾಕಲು ಬಿಜೆಪಿ ಸಂಚು: ನವಾಬ್ ಮಲಿಕ್‌

ನವಾಬ್ ಮಲಿಕ್ ಆರೋಪಕ್ಕೆ ತಿರುಗೇಟು ನೀಡಿದ ಫಡ್ನವಿಸ್, ಭೂಗತ ಪಾತಕಿಗಳ(Underworld link) ಜೊತೆ ನಂಟು ಹೊಂದಿದರ ಕುರಿತು ಮಾತನಾಡುವುದಿಲ್ಲ. ಆದರೆ ಈ ದೀಪಾವಳಿ(Diwali) ಮುಗಿಯಲಿ ಎಂದು ಕಾಯುತ್ತಿದ್ದೇನೆ. ದೀಪಾವಳಿ ಬಳಿಕ ನವಾಬ್ ಮಲಿಕ್‌ಗೆ ಇರುವ ಭೂಗತ ಪಾತಕಿಗಳ ಜೊತೆಗಿನ ನಂಟಿನ ವಿವರವನ್ನು ದಾಖಲೆ ಸಮೇತ ಬಿಚ್ಚಿಡುತ್ತೇನೆ ಎಂದು ಫಡ್ನವಿಸ್ ಹೇಳಿದ್ದಾರೆ.

ದೇವೇಂದ್ರ ಫಡ್ನಿವಿಸ್ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. NCB ವಿರುದ್ಧ ಹಗೆತನ ಸಾಧಿಸುತ್ತಿರುವ ನವಾಬ್ ಮಲಿಕ್ ಆರೋಪ ಹಾಗೂ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ನವಾಬ್ ಮಲಿಕ್ ಅಳಿಯ ವಿರುದ್ಧ ಪ್ರಕರಣ ದಾಖಲಿಸಿರುವ NCBಯನ್ನು ಒತ್ತಡಕ್ಕೆ ಸಿಲುಕಿಸಲು ನವಾಬ್ ಮಲಿಕ್ ಯತ್ನಿಸುತ್ತಿದ್ದಾರೆ. ಅಳಿಯ ಮೇಲಿರುವ ಚಾರ್ಜ್‌ಶೀಟ್ ಹಿಂತೆಗೆದುಕೊಳ್ಳುವಂತೆ ಮಾಡಲು ನವಾಬ್ ಮಲಿಕ್ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಫಡ್ನಿವಿಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

ದೀಪಾವಳಿಗೂ ಮೊದಲು ನವಾಬ್ ಮಲಿಕ್ ಹಳೆ ವಿಡಿಯೋವನ್ನು ಹರಿಬಿಟ್ಟು ಸಣ್ಣ ಪಟಾಕಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ದೀಪಾವಳಿ ಬಳಿಕ ದೊಡ್ಡ ಪಟಾಕಿಗೆ ಬೆಂಕಿ ಹಚ್ಚುತ್ತೇನೆ ಎಂದು ನವಾಬ್ ಮಲಿಕ್ ವಿರುದ್ಧ ದೇವೇಂದ್ರ ಫಡ್ನಿವಸ್ ಹೇಳಿದ್ದಾರೆ. ಈ ಮೂಲಕ ಇದೀಗ ನವಾಬ್ ಮಲಿಕ್ ಹಾಗೂ ಫಡ್ನಿಸ್ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ 25 ಕೋಟಿ ರೂಪಾಯಿ ಡೀಲ್ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ ನವಾಬ್ ಮಲಿಕ್ ಇದೀಗ ದೇವೇಂದ್ರ ಫಡ್ನವಿಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಫಡ್ನವಿಸ್‌ಗೆ ಮಾದಕ ದ್ರವ್ಯ ಸಾಗಾಟಗಾರರ ಜೊತೆ ಸಂಪರ್ಕವಿದೆ. ಜೈಲು ಸೇರಿರುವ ಡ್ರಗ್ ಪೆಡ್ಲರ್ ಜಯದೀಪ್ ರಾಣಾ ಜೊತೆ ಫಡ್ನವಿಸ್‌ಗೆ ನಕಟ ಸಂಪರ್ಕವಿದೆ. ಡ್ರಗ್ಸ್ ಪೆಡ್ಲರ್ ಜೊತೆಗಿನ ಸಂಪರ್ಕದಿಂದ ಫಡ್ನವಸಿ ಆಡಳಿತದಲ್ಲಿ ಮುಂಬೈ ಹಾಗೂ ಮಹರಾಷ್ಟ್ರದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಇದೀಗ ನಮ್ಮ ಮೈತ್ರಿ ಸರ್ಕಾರ ಡ್ರಗ್ಸ್ ದಂಧೆಯನ್ನು ನಿಯಂತ್ರಿಸುತ್ತಿದೆ ಎಂದು ಮಲಿಕ್ ಆರೋಪಿಸಿದ್ದರು.

'ನನ್ನ ತಂದೆ ಹಿಂದು..ತಾಯಿ ಮುಸ್ಲಿಂ... ಸಮೀರ್ ವಾಂಖೆಡೆ ತಿರುಗೇಟು!

ಅಕ್ಟೋಬರ್ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಿಂದ ಹೊರಡ ಕ್ರ್ಯೂಸ್ ಹಡಗಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಬಳಕೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು ಮುಫ್ತಿಯಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೇ ಅಲ್ಲ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.

ಆರ್ಯನ್ ಖಾನ್ ಬಂಧನದ ಬೆನ್ನಲ್ಲೇ ಕೆಲವರು ಎನ್‌ಸಿಬಿ ದಾಳಿಯನ್ನೇ ಪ್ರಶ್ನಿಸಿದ್ದರು. ಹೀಗೆ ಪ್ರಶ್ನೆ ಮಾಡಿದ ಪ್ರಮುಖರಲ್ಲಿ NCP ನಾಯಕ ನವಾಬ್ ಮಲಿಕ್ ಕೂಡ ಒಬ್ಬರು. ಸಮೀರ್ ವಾಂಖೆಡೆಯನ್ನು ಟಾರ್ಗೆಟ್ ಮಾಡಿದ ನವಾಬ್ ಮಲಿಕ್, ಆರ್ಯನ್ ಖಾನ್‌ನ್ನು ಬಲಿಪಶು ಮಾಡಲಾಗಿದೆ. ಆರ್ಯನ್ ಖಾನ್ ಕೇಸ್ ಮುಚ್ಚಿಹಾಕಲು ಅಧಿಕಾರಿ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಸಮೀರ್ ವಾಂಖೆಡೆ ಧರ್ಮ, ಪತ್ನಿ ಸೇರಿದಂತೆ ವೈಯುಕ್ತಿಕ ವಿಚಾರಗಳ ಮೇಲೆ ಮಲಿಕ್ ಆರೋಪಗಳ ಸುರಿಮಳೆಗೈದಿದ್ದರು.

click me!