Breaking: ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕ

Published : Mar 14, 2024, 08:00 PM ISTUpdated : Mar 14, 2024, 08:09 PM IST
Breaking: ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕ

ಸಾರಾಂಶ

ನಿವೃತ್ತ ಐಎಎಸ್‌ ಅಧಿಕಾರಿಗಳಾದ ಕೇರಳ ಕೆಡರ್‌ನ ಜ್ಞಾನೇಶ್‌ ಕುಮಾರ್‌ ಹಾಗೂ ಪಂಜಾಬ್‌ ಕೆಡರ್‌ನ ಸುಖ್ಬೀರ್‌ ಸಿಂಗ್‌ ಸಂಧು ಅವರನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ಖಾಲಿ ಇರುವ ಎರಡು ಚುನಾವಣಾ ಆಯುಕ್ತರ ಸ್ಥಾನಕ್ಕೆ ನೇಮಿಸಲಾಗಿದೆ.  

ನವದೆಹಲಿ (ಮಾ.14):  ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದಲ್ಲಿ ಖಾಲಿ ಇದ್ದ ಎರಡು ಚುನಾವಣಾ ಆಯುಕ್ತರ ಸ್ಥಾನಕ್ಕೆ ನಿವೃತ್ತ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿದೆ.  ಕೇರಳ ಕೆಡರ್‌ನ ಜ್ಞಾನೇಶ್‌ ಕುಮಾರ್‌ ಹಾಗೂ ಉತ್ತರಾಖಂಡ ಕೆಡರ್‌ನ ಸುಖ್ಬೀರ್‌ ಸಿಂಗ್‌ ಸಂಧು ಅವರನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ಖಾಲಿ ಇರುವ ಎರಡು ಚುನಾವಣಾ ಆಯುಕ್ತರ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.ಗುರುವಾರ ಸಂಜೆಯ ವೇಳೆಗೆ ಕೇಂದ್ರ ಸರ್ಕಾರ ಈ ಕುರಿತಾದ ಅಧಿಕೃತ ಗೆಜೆಟ್‌ ನೋಟಿಫಿಕೇಶನ್‌ ಅನ್ನು ಹೊರಡಿಸಿದೆ. ಸರ್ಕಾರದ ಅಧಿಸೂಚನೆ ಬರುವ ಮುನ್ನವೇ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ, ಜ್ಞಾನೇಶ್‌ ಕುಮಾರ್‌ ಹಾಗೂ ಸುಖ್ಬೀರ್‌ ಸಿಂಗ್‌ ಸಂಧು ಅವರನ್ನು ಚುನಾವಣಾ ಆಯುಕ್ತರ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದರು.

ಜ್ಞಾನೇಶ್‌ ಕುಮಾರ್‌ ಹಾಗೂ ಸುಖ್ಬೀರ್‌ ಸಿಂಗ್‌ ಸಂಧು ಅವರು ಅನೂಪ್‌ ಚಂದ್ರ ಪಾಂಡೆ ಹಾಗೂ ಅರುಣ್‌ ಗೋಯೆಲ್‌ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. 65 ವರ್ಷ ಪೂರ್ಣವಾದ ಬಳಿಕ ಅನೂಪ್‌ ಚಂದ್ರ ಪಾಂಡೆ ಫೆಬ್ರವರಿ 14ರಂದು ನಿವೃತ್ತರಾಗಿದ್ದರು. ಇನ್ನು ಮಾರ್ಚ್‌ 9 ರಂದು ಅರುಣ್‌ ಗೋಯೆಲ್‌ ತಮ್ಮ ಸ್ಥಾನಕ್ಕೆ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದು ಹಲವರ ಹುಬ್ಬೇರಿಸಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಚುನಾವಣಾ ಆಯೋಗವು ಮೂವರೂ ಸದಸ್ಯರನ್ನು ಹೊಂದಿರುವುದು ಬಹಳ ಅಗತ್ಯವಾಗಿತ್ತು. ಮಾರ್ಚ್ 15 ಅಥವಾ 16 ರಂದು ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಸಂಸ್ಥೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ಆಯ್ಕೆ ಮಂಡಳಿಯ ಸಭೆಯ ನಂತರ ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕ ನಡೆದಿದೆ. ಚುನಾವಣಾ ಅಧಿಕಾರಿಗಳನ್ನು ಆಯ್ಕೆ ಮಾಡಲು ನೇಮಕಗೊಂಡ ಸಮಿತಿಯ ಮೂವರು ಸದಸ್ಯರಲ್ಲಿ ಅಧೀರ್ ರಂಜನ್ ಚೌಧರಿ ಕೂಡ ಒಬ್ಬರಾಗಿದ್ದರು. ಇವರಿಬ್ಬರು ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಅಧೀರ್‌ ರಂಜನ್‌ ಚೌಧರಿ,  ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಅವರು ವಿರೋಧ ವ್ಯಕ್ತಪಡಿಸಿದರು. ಬುಧವಾರ ತಡರಾತ್ರಿ 212 ಹೆಸರುಗಳ ಪಟ್ಟಿ ಸಿಕ್ಕಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಸಭೆಗೆ ಹಾಜರಾಗಬೇಕಿತ್ತು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕ? ಫೇಕ್‌ ನ್ಯೂಸ್‌ ಎಂದ ಪಿಐಬಿ

ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್‌ ಸಿಂಗ್ ಸಂಧು ಅವರ ಹೆಸರನ್ನು ಆರು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಂದ ಅಂತಿಮಗೊಳಿಸಲಾಗಿದೆ, ಅವರು ನಿವತ್ತ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್‌ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!