ಇಡಿ ನನ್ನನ್ನು ಗಾಳಿ - ಬೆಳಕು, ಕಿಟಕಿ ಇಲ್ಲದ ಕೋಣೆಯಲ್ಲಿಟ್ಟಿದೆ: ಸಂಜಯ್ ರಾವುತ್‌

By BK AshwinFirst Published Aug 4, 2022, 5:53 PM IST
Highlights

ನನ್ನನ್ನು ಗಾಳಿ ಬೆಳಕು ಇಲ್ಲದ ಹಾಗೂ ಕಿಟಕಿಯೇ ಇಲ್ಲದ ಕೋಣೆಯಲ್ಲಿ ಇರಿಸಲಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್‌ ಕೋರ್ಟ್‌ ಎದುರು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅವರ ಕಸ್ಟಡಿಯನ್ನು ಆಗಸ್ಟ್‌ 8 ರವರೆಗೆ ವಿಸ್ತರಿಸಲಾಗಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (Enforcement Directorate) ಶಿವಸೇನಾ ನಾಯಕ ಸಂಜಯ್‌ ರಾವುತ್‌ರನ್ನು ಇತ್ತೀಚೆಗೆ ಬಂಧಿಸಿತ್ತು. ಇಡಿ ವಶದಲ್ಲೇ ಇರುವ ಅವರು ಕೆಂದ್ರ ತನಿಖಾ ದಳ ತನನ್ನು ಕಿಟಕಿ, ಗಾಳಿ - ಬೆಳಕಿಲ್ಲದ ಕೋಣೆಯೊಂದರಲ್ಲಿ ಇರಿಸಿದೆ ಎಂದು ವಿಶೇಷ ಕೋರ್ಟ್‌ನಲ್ಲಿ ಗುರುವಾರ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದ (Prevention of Money Laundering Act) (ಪಿಎಂಎಲ್‌ಎ)  ವಿಷಯಗಳನ್ನು ಕೇಳಲು ಗೊತ್ತುಪಡಿಸಲಾದ ವಿಶೇಷ ಕೋರ್ಟ್‌ ವಕೀಲ ಎಂ. ಜಿ. ದೇಶಪಾಂಡೆ ಅವರಿಗೆ ಸಂಸದ ಸಂಜಯ್‌ ರಾವುತ್‌ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ,  ಸಂಜಯ್‌ ರಾವುತ್‌ ಅವರ ಕಸ್ಟಡಿ ಅವಧಿ ಆಗಸ್ಟ್‌ 8 ರವರೆಗೆ ವಿಸ್ತರಿಸಲಾಗಿದ್ದು, ಜಾರಿ ನಿರ್ದೇಶನಾಲಯ ಮತ್ತೆ ಅವರನ್ನು ವಶಕ್ಕೆ ಪಡೆದಿದೆ.

ಮಹಾರಾಷ್ಟ್ರದ ಮುಂಬೈ ಬಳಿಯ ಉಪನಗರ ಗೋರೆಗಾಂವ್‌ನಲ್ಲಿ ಪತ್ರ 'ಚಾಲ್‌’ ಅಂದರೆ ಹಳೆಯ ಸಾಲು ವಠಾರ ಮನೆಗಳ ಮರುಅಭಿವೃದ್ಧಿಯಲ್ಲಿ ಹಣಕಾಸಿನ ಅಕ್ರಮಗಳು ಮತ್ತು ಅವರ ಪತ್ನಿ ಹಾಗೂ ಆಪಾದಿತ ಸಹಚರರನ್ನು ಒಳಗೊಂಡ ಸಂಬಂಧಿತ ಹಣಕಾಸಿನ ಆಸ್ತಿ ವಹಿವಾಟುಗಳ ಸಂಬಂಧ ಭಾನುವಾರ ರಾತ್ರಿ ಶಿವಸೇನಾ ಸಂಸದ  ಸಂಜಯ್‌ ರಾವುತ್‌ ಅವರನ್ನು ಇಡಿ ಬಂಧಿಸಿತ್ತು.  ನಂತರ, ಸೋಮವಾರ ಅವರನ್ನು ಕೋರ್ಟ್‌ ಎದುರು ಹಾಜರುಪಡಿಸಿದ ಬಳಿಕ ಆಗಸ್ಟ್‌ 4 ರವರೆಗೆ ಜಾರಿ ನಿರ್ದೇಶನಾಲಯ ತನ್ನ ವಶಕ್ಕೆ ಪಡೆದಿತ್ತು. ಇಂದು ಕಸ್ಟಡಿ ಅವಧಿ ಮುಕ್ತಾಯವಾಗುತ್ತಿದ್ದ ಹಿನ್ನೆಲೆ ಅವರನ್ನು ವಿಶೇಷ ಕೋರ್ಟ್‌ ಎದುರು ಹಾಜರುಪಡಿಸಲಾಗಿದ್ದು, ಬಳಿಕ ಕೋರ್ಟ್‌ ಮತ್ತೆ 4 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ.

ಭೂ ಹಗರಣ ಕೇಸ್‌: ಶಿವಸೇನಾ ನಾಯಕ ಸಂಜಯ್‌ ರಾವುತ್‌ ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ಈ ವೇಳೆ, ಇಡಿ ವಿರುದ್ಧ ನಿಮ್ಮದೇನಾದರೂ ದೂರುಗಳಿವೆಯಾ ಎಂದು ಕೇಳಿದ್ದಕ್ಕೆ, ನಿರ್ದಿಷ್ಟವಾಗಿ ಏನೂ ದೂರು ಇಲ್ಲ ಎಂದು ಹೇಳಿದರು. ಆದರೂ, ಕಿಟಕಿ, ಗಾಳಿ - ಬೆಳಕು ಇಲ್ಲದ ಕೋಣೆಯಲ್ಲಿ ಜಾರಿ ನಿರ್ದೇಶನಾಲಯ ನನ್ನನ್ನು ಇರಿಸಿದೆ ಎಂದು ಸಂಜಯ್‌ ರಾವುತ್‌ ಹೇಳಿದ್ದಾರೆ. ನಂತರ, ಕೋರ್ಟ್‌ ಈ ಬಗ್ಗೆ ಕೇಂದ್ರ ತನಿಖಾ ದಳದ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ. 

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಡಿ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹಿತೇನ್‌, ರಾವುತ್‌ ಅವರನ್ನು  ಎಸಿ ಕೋಣೆಯಲ್ಲಿ ಇರಿಸಲಾಗಿದೆ, ಹಾಗಾಗಿ ಅದರಲ್ಲಿ ಕಿಟಕಿ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿದ ಸಂಸದ, ಎಸಿ ವ್ಯವಸ್ಥೆ ಇದ್ದರೂ, ನನ್ನ ಆಹಾರ ಸ್ಥಿತಿಯ ಕಾರಣ ಅದನ್ನು ಬಳಸಲು ಸಾಧ್ಯವಿಲ್ಲ ಎಂದು ಶಿವಸೇನಾ ಸಂಸದ ಹೇಳಿಕೊಂಡಿದ್ದಾರೆ. ನಂತರ, ಅವರನ್ನು ಸರಿಯಾದ ಗಾಳಿ ಬೆಳಕು ಇರುವ ಕೋಣೆಯಲ್ಲಿ ಇರಿಸಲಾಗುವುದು ಎಂದು ಇಡಿ ಕೋರ್ಟ್‌ಗೆ ಭರವಸೆ ನೀಡಿತು. 60 ವರ್ಷ ವಯಸ್ಸಿನ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ನಿಕಟ ಸಹವರ್ತಿಯಾಗಿದ್ದು, ಶಿವಸೇನಾದ ಮುಖ್ಯ ವಕ್ತಾರ ಹಾಗೂ ಪಕ್ಷದ ಮುಖವಾಣಿ ಸಾಮ್ನಾದ ಎಕ್ಸಿಕ್ಯುಟಿವ್‌ ಎಡಿಟರ್‌ ಸಹ ಆಗಿದ್ದಾರೆ. 

ಶಿವಸೇನಾ ಸಂಸದ ಸಂಜಯ್‌ ರಾವುತ್‌ ನಿವಾಸದ ಮೇಲೆ ಇಡಿ ದಾಳಿ: ಪರಿಶೀಲನೆ

ಇಡಿ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದ ಕೋರ್ಟ್‌
ಇನ್ನೊಂದೆಡೆ, ಸಂಜಯ್ ರಾವುತ್‌ ಅವರ ಕಸ್ಟಡಿ ಅವಧಿ ವಿಸ್ತರಿಸಿದ ವಿಶೇಷ ಕೋರ್ಟ್‌ ಈ ವೇಳೆ, ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದೆ. ಈ ಮಧ್ಯೆ, ಪತ್ರ ಚಾಲ್‌ ಜಮೀನಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವುತ್‌ ಅವರ ಪತ್ನಿ ವರ್ಷಾ ರಾವುತ್‌ ಅವರಿಗೂ ಸಹ ಇಡಿ ಸಮನ್ಸ್‌ ನೀಡಿದೆ. 

click me!