ಅಪರಾಧ ತಡೆಯಲು ಭಾಂಗ್, ಗಾಂಜಾ ಬಳಕೆ ಉತ್ತೇಜಿಸಿ: ಬಿಜೆಪಿ ಶಾಸಕ

Published : Jul 25, 2022, 09:54 AM ISTUpdated : Jul 25, 2022, 10:02 AM IST
ಅಪರಾಧ ತಡೆಯಲು ಭಾಂಗ್, ಗಾಂಜಾ ಬಳಕೆ ಉತ್ತೇಜಿಸಿ: ಬಿಜೆಪಿ ಶಾಸಕ

ಸಾರಾಂಶ

ಮದ್ಯಪಾನದ ಬದಲಾಗಿ ಭಾಂಗ್‌ ಹಾಗೂ ಕ್ಯಾನಬೀಸ್‌ ಅಥವಾ ಗಾಂಜಾ ಬಳಕೆಯನ್ನು ಉತ್ತೇಜಿಸಿ ಎಂದು  ಛತ್ತೀಸ್‌ಗಢ ಬಿಜೆಪಿ ಶಾಸಕ ಸಲಹೆ ನೀಡಿದ್ದಾರೆ. ಗಾಂಜಾ, ಭಾಂಗ್‌ನಂತಹ ಮಾದಕ ವಸ್ತುಗಳಿಗೆ ಚಟಕ್ಕೀಡಾಗಿರುವವರು ಅತ್ಯಾಚಾರ, ಕೊಲೆ ಹಾಗೂ ಡಕಾಯಿತಿಯಂತಹ ಅಪರಾಧಗಳನ್ನು ಮಾಡುವುದು ತುಂಬಾ ಅಪರೂಪ ಎಂದೂ ಅವರು ಹೇಳಿಕೊಂಡಿದ್ದಾರೆ. 

ಮದ್ಯಪಾನ,  ಧೂಮಪಾನ ಹಾಗೂ ಮಾದಕವಸ್ತುಗಳಿಂದ ದೂರವಿರಿ ಎಂದು ಪೋಷಕರು ಹಾಗೂ ಹಿರಿಯರು ಮಕ್ಕಳಿಗೆ ಬುದ್ಧಿವಾದ ಹೇಳೋದು ಸಾಮಾನ್ಯ. ಅಲ್ಲದೆ, ಮದ್ಯಪಾನ, ಮಾದಕವಸ್ತುಗಳ ಚಟದಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುತ್ತದೆ ಎಂದು ಕೆಲ ವರದಿಗಳು ಹೇಳುತ್ತವೆ. ಆದರೆ, ಇಲ್ಲೊಬ್ಬರು ಬಿಜೆಪಿ ಶಾಸಕ ಅಪರಾಧ ಪ್ರಕರಣಗಳನ್ನು ತಡೆಯಲು ಭಾಂಗ್‌, ಗಾಂಜಾವನ್ನು ಉತ್ತೇಜಿಸಿ ಎಂದು ಸಲಹೆ ನೀಡಿದ್ದಾರೆ. 

ಹೌದು, ಮದ್ಯಪಾನದ ಬದಲಾಗಿ ಭಾಂಗ್‌ ಹಾಗೂ ಕ್ಯಾನಬೀಸ್‌ ಅಥವಾ ಗಾಂಜಾ ಬಳಕೆಯನ್ನು ಉತ್ತೇಜಿಸಿ ಎಂದು  ಛತ್ತೀಸ್‌ಗಢ ಬಿಜೆಪಿ ಶಾಸಕ ಸಲಹೆ ನೀಡಿದ್ದಾರೆ. ಗಾಂಜಾ, ಭಾಂಗ್‌ನಂತಹ ಮಾದಕ ವಸ್ತುಗಳಿಗೆ ಚಟಕ್ಕೀಡಾಗಿರುವವರು ಅತ್ಯಾಚಾರ, ಕೊಲೆ ಹಾಗೂ ಡಕಾಯಿತಿಯಂತಹ ಅಪರಾಧಗಳನ್ನು ಮಾಡುವುದು ತುಂಬಾ ಅಪರೂಪ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಅಚ್ಚರಿದಾಯಕ ಹೇಳಿಕೆಯನ್ನು ನೀಡಿದ ಶಾಸಕರ ಹೆಸರು ಡಾ. ಕೃಷ್ಣಮೂರ್ತಿ ಬಂಧಿ. ಶನಿವಾರ ಅವರು ಈ ರೀತಿ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ಈ ಹೇಳಿಕೆಯನ್ನು ಖಂಡಿಸಿದೆ. ಅಲ್ಲದೆ, ಜನಪ್ರತಿನಿಧಿಗಳು ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದೂ ಪ್ರಶ್ನಿಸಿದ್ದಾರೆ.

Bengaluru News: ಡ್ರಗ್ಸ್‌ ದಂಧೆ: ನೈಜೀರಿಯಾದ ಖ್ಯಾತ ಯುಟ್ಯೂಬರ್‌ ಸೇರಿ ಇಬ್ಬರ ಬಂಧನ

ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕಾದರೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ..! 
ಛತ್ತೀಸ್‌ಗಢ ಬಿಜೆಪಿ ಶಾಸಕರ  ಈ ಹೇಳಿಕೆಯನ್ನು ವಿರೋಧಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಭಗೇಲ್‌, ದೇಶದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕೆಂದರೆ ನಿಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಎಂದು ಬಿಜೆಪಿ ಶಾಸಕ ಡಾ. ಕೃಷ್ಣಮೂರ್ತಿ ಬಂಧಿ ತಿಳಿಸಿದ್ದಾರೆ.

ನಾರ್ಕೋಟಿಕ್ ಡ್ರಗ್ಸ್‌ ಹಾಗೂ ಸೈಕೋಟ್ರೋಪಿಕ್‌ ವಸ್ತುಗಳ (ಎನ್‌ಡಿಪಿಎಸ್‌) ಕಾಯಿದೆಯಡಿ ದೇಶದಲ್ಲಿ ಗಾಂಜಾ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಇನ್ನೊಂದೆಡೆ, ಭಾಂಗ್ ಬಳಕೆಯನ್ನು ಕಾನೂನಿನಡಿ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
 
ಮದ್ಯಪಾನ ನಿಷೇಧಿಸುವುದಾಗ ಭರವಸೆ ನೀಡಿದ್ದ ಕಾಂಗ್ರೆಸ್‌
ಈ ಮಧ್ಯೆ, ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದರೆ ಮದ್ಯಪಾನವನ್ನು ನಿಷೇಧಿಸುವುದಾಗಿ ಕಾಂಗ್ರೆಸ್‌ ಚುನಾವಣೆಗೆ ಮೊದಲು ಆಶ್ವಾಸನೆ ನೀಡಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಶಾಸಕ ಬಂಧಿ, ನಾವು ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಶ್ನೆ ಮಾಡಿದ್ದೆವು. ಹಾಗೂ, ಜುಲೈ 27ರಂದು ಈ ವಿಚಾರವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲಾಗುವುದು. ಅದೇ ದಿನ ವಿರೋಧ ಪಕ್ಷ ಬಿಜೆಪಿ ಛತ್ತೀಸ್‌ಗಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ ಎಂದೂ ಡಾ. ಕೃಷ್ಣಮೂರ್ತಿ ಬಂಧಿ ಹೇಳಿದ್ದಾರೆ.

ಅಲ್ಲದೆ, ಗಾಂಜಾ, ಭಾಂಗ್‌ ಬಗ್ಗೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಶಾಸಕರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ವಿಧಾನಸಭೆಯಲ್ಲಿ ಈ ಹಿಂದೆಯೂ ಹೇಳಿದ್ದೇನೆ. ಅತ್ಯಾಚಾರ, ಕೊಲೆ ಹಾಗೂ ಜಗಳಕ್ಕೆ ಮದ್ಯಪಾನವೇ ಕಾರಣ ಎಂದು ನನಗೆ ಎಲ್ಲೋ ಹೇಳಿದ್ದಾರೆ. ಇನ್ನೊಂದೆಡೆ, ಭಾಂಗ್‌ ಸೇವಿಸಿದ ಯಾರಾದರೂ ಅತ್ಯಾಚಾರ, ಕೊಲೆ ಹಾಗೂ ಡಕಾಯಿತಿಯನ್ನು ಮಾಡಿದ್ದಾರಾ ಎಂದು ನಾನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದೇನೆ ಎಂದೂ ಡಾ. ಕೃಷ್ಣಮೂರ್ತಿ ಬಂಧಿ ಹೇಳಿದ್ದಾರೆ.

ಮದ್ಯಪಾನ ನಿಷೇಧಿಸಲು ಛತ್ತೀಸ್‌ಗಢದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ ಮಸ್ತೂರಿ ಕ್ಷೇತ್ರದ ಶಾಸಕ ಡಾ. ಕೃಷ್ಣಮೂರ್ತಿ ಬಂಧಿ, ಜನರಿಗೆ ಚಟ ಬೇಕಾದರೆ, ಅವರಿಗೆ ಅತ್ಯಾಚಾರ, ಕೊಲೆ ಹಾಗೂ ಇತರೆ ಅಪರಾಧಗಳನ್ನು ಮಾಡಲು ಉತ್ತೇಜಿಸದಂತಹ ವಸ್ತುಗಳನ್ನು ಕೊಡಬೇಕು. ಹಾಗೂ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದೂ ಹೇಳಿದ್ದಾರೆ. 

ರಿಯಾ ಚಕ್ರವರ್ತಿ ಡ್ರಗ್ಸ್ ಖರೀದಿಸಿ ಸುಶಾಂತ್‌ಗೆ ಕೊಡುತ್ತಿದ್ದರು; NCB

ಯಾವುದೇ ಚಟ ಒಳ್ಳೆಯದಲ್ಲ ಎಂದ ಛತ್ತೀಸ್‌ಗಢ ಸಿಎಂ

ಛತ್ತೀಸ್‌ಗಢ ಬಿಜೆಪಿ ಶಾಸಕರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಭಗೇಲ್‌, ಯಾವುದೇ ರೂಪದಲ್ಲಾದರೂ ಚಟ ಒಳ್ಳೆಯದಲ್ಲ ಎಂದು ಹೇಳಿದರು. ಹಾಗೆ, ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕಾದರೆ ಕೇಂದ್ರ ಸರ್ಕಾರಕ್ಕೆ ಆಘ್ರಹಿಸಿ ಎಂದೂ ಬಿಜೆಪಿಯ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು