ನಾ ಆಫೀಸ್ ಬರೋದಿಲ್ಲ, ಉದ್ಯೋಗಿಯ 1 ವಾರದ ದಿಢೀರ್ ರಜೆ ಕಾರಣ ಕೇಳಿ ಬಾಸ್ ಕಂಗಾಲು!

By Chethan Kumar  |  First Published Nov 8, 2024, 7:43 PM IST

ಉದ್ಯೋಗಿ ಏಕಾಏಕಿ 1 ವಾರ ರಜೆ ಹಾಕಿದ್ದಾನೆ. ಮೆಸೇಜ್ ಮೂಲಕ ಬಾಸ್‌ಗೆ ಮಾಹಿತಿ ನೀಡಿ ಸ್ವಿಚ್ ಆಫ್ ಮಾಡಿದ್ದಾನೆ. ಒತ್ತಡದ ಕೆಲಸದ ನಡುವೆ ರಜೆ ಬಾಸ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.ಆದರೆ ಕಾರಣ ಕೇಳಿ ಬಾಸ್ ಕಂಗಾಲಾಗಿದ ಘಟನೆ ನಡೆದಿದೆ.
 


ಕಚೇರಿ ಕೆಲಸ ಹಾಗೂ ರಜೆ ನಡುವೆ ಹಲವು ಸ್ವಾರಸ್ಯಘಟನೆಗಳು ನಡೆದಿದೆ. ಪ್ರತಿ ಕಚೇರಿಯಲ್ಲೂ ಈ ಕುರಿತು ಅಚ್ಚರಿ, ಶಾಕಿಂಗ್, ಹಾಸ್ಯ ಘಟನೆಗಳು ನಡೆದೇ ಇರುತ್ತದೆ. ಇದೀಗ ಜೆನ್ ಝೆಡ್ ಕಂಪನಿಯ ಬಾಸ್ ಒಬ್ಬರು ತಾವು ಎದುರಿಸಿದ ವಿಚಿತ್ರ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯೋಗಿ ಏಕಾಏಕಿ 1 ವಾರ ರಜೆ ಎಂದು ಮೆಸೇಜ್ ಮಾಡಿ ನಾಪತ್ತೆಯಾಗಿದ್ದೇನೆ. ಮೊದಲೇ ಕೆಲಸದ ಒತ್ತಡ, ತಕ್ಕ ಸಮಯಕ್ಕೆ ಮುಗಿಸಬೇಕಾದ ಜವಾಬ್ದಾರಿ ನಡುವೆ ರಜೆ ವಿಚಾರ ಕೇಳಿ ಬಾಸ್ ಆಕ್ರೋಶಗೊಂಡಿದ್ದಾರೆ. ಆದರೆ ಉದ್ಯೋಗಿಯ ರಜೆ ಕಾರಣ ಕೇಳಿ ಬಾಸ್ ಕಂಗಾಲಾಗಿ ಹೋಗಿದ್ದಾರೆ.

ಇತ್ತೀಚೆಗೆ ಜೆನ್ ಝೆಡ್ ಮ್ಯಾನೇಜರ್ ತನ್ನ ಟೀಂ ಸದಸ್ಯರೊಬ್ಬರು ನಾನು ಒಂದು ದಿನ ರಜೆ, ಬೈ ಎಂದು ನಾಲ್ಕೇ ಪದಗಳಲ್ಲಿ ರಜೆ ಕೇಳಿದ ಮಾಹಿತಿ ಹಂಚಿಕೊಂಡಿದ್ದರು. ಇದೇ ವಿಚಾರ ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ವೇಳೆ ಮತ್ತೊಬ್ಬ ಮ್ಯಾನೇಜರ್ ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆ. 1 ವಾರ ರಜೆ ಹಾಕಿ ಹೋದ ಉದ್ಯೋಗಿಯ ಘಟನೆ ಕುರಿತು ವಿವರಿಸಿದ್ದಾರೆ.

Tap to resize

Latest Videos

undefined

ಮದುವೆಗೆ ರಜೆ ನಿರಾಕರಿಸಿದ ಬಾಸ್, ವರನ ನಿರ್ಧಾರಕ್ಕೆ ಕಕ್ಕಾಬಿಕ್ಕಿಯಾದ ಕಂಪನಿ

ಝೆನ್ ಝೆಡ್ ಕಂಪನಿಯ ಮತ್ತೋರ್ವ ಬಾಸ್ ಕೃಷ್ಣ ಮೋಹನ್ ತಮಗಾದ ಘಟನೆ ವಿವರಿಸಿದ್ದಾರೆ. ನನ್ನ ತಂಡದ ಸದಸ್ಯರೊಬ್ಬರು ಏಕಾಏಕಿ 1 ವಾರ ರಜೆ ಎಂದು ಮೆಸೇಜ್ ಮಾಡಿದ್ದಾನೆ. ಪ್ರಾಜೆಕ್ಟ್ ಮುಗಿಸಬೇಕಾದ ತುರ್ತು ಸಂದರ್ಭದಲ್ಲೇ ಉದ್ಯೋಗಿ ಈ ರೀತಿ 1 ವಾರ ರಜೆ ಹಾಕಿದ್ದಾನೆ. ಆತನ ಕಾರಣ ಕೇಳಿ ಕೆಲ ದಿನಗಳ ಕಾಲ ರಜೆ ಮುಂದೂಡುವ ಪ್ರಯತ್ನ ಮಾಡಿದ್ದೆ. ಆದರೆ ಉದ್ಯೋಗಿ ಯಾವ ಸುಳಿವು ಬಿಡಲಿಲ್ಲ, ಸಂಪರ್ಕಕ್ಕೂ ಸಿಗಲಿಲ್ಲ. ಒಂದು ಮೆಸೇಜ್ ಮಾಡಿ ಉದ್ಯೋಗಿ ನಾಪತ್ತೆಯಾಗಿದ್ದೇನೆ. ಇತ್ತ ಪ್ರಾಜೆಕ್ಟ್ ಪೂರ್ಣಗೊಳಿಸಬೇಕಾದ ದೊಡ್ಡ ಸವಾಲು ಎದುರಾಗಿತ್ತು. ಉದ್ಯೋಗಿ 1 ವಾರ ರಜೆ ಹಾಕಿ ಪರ್ವತ ಪ್ರದೇಶಕ್ಕೆ ತೆರಳಿರುವ ಮಾಹಿತಿ ಸಿಕ್ಕಿತ್ತು. ಕಾರಣ ತಿಳಿದಾಗ ಅಚ್ಚರಿಯಾಗಿತ್ತು. ಕಾರಣ ಬ್ರೇಕ್ ಅಪ್‌ನಿಂದ ಹೊರಬರಲು 1 ವಾರ ರಜೆ ಪಡೆದು ಪರ್ವತ ಪ್ರದೇಶಕ್ಕೆ ತೆರಳಿದ್ದಾನೆ ಅನ್ನೋ ಮಾಹಿತಿ ತಿಳಿದು ನನಗೆ ಅಚ್ಚರಿಯಾಗಿತ್ತು ಎಂದು ಕೃಷ್ಣ ಮೋಹನ್ ಹೇಳಿದ್ದಾರೆ.

ಕೃಷ್ಣ ಮೋಹನ್ ಬಹಿರಂಗಪಡಿಸಿದ ಈ ರಜೆ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯಾಗುತ್ತಿದೆ. ಉದ್ಯೋಗಿಯ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ. ಆತ ಬ್ರೇಕ್ಅಪ್‌ನಿಂದ ಹೊರಬರುವ ಗಟ್ಟಿ ನಿರ್ಧಾರ ಮಾಡಿದ್ದಾನೆ. ಇದು ಮಹತ್ತದ್ದಾಗಿದೆ. ಕಾರಣ ಹಲವರು ಇದರಿಂದ ಹೊರಬರಲಾಗದೆ ದುರಂತ ಅಂತ್ಯ ಕಾಣುತ್ತಾರೆ. ಹೀಗಾಗಿ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ ಎಂದು ಹಲವರು ಸೂಚಿಸಿದ್ದಾರೆ. ಬ್ರೇಕ್ ಅಪ್ ಸೇರಿದಂತೆ ಮಾನಸಿಕವಾಗಿ ಕುಗ್ಗಿ ಹೋಗುವ ವಿಚಾರಗಳಿಗೆ ರಜೆ ಅತ್ಯವಶ್ಯಕ. ಆತನ ಮತ್ತೆ ಬದುಕಿನ ಸಹಜ ದಾರಿಗೆ ಬರಬೇಕಿದೆ. ಹೀಗಾಗಿ ಮ್ಯಾನೇಜರ್ ಈ ಕುರಿತು ಗಮನಹರಿಸಬೇಕು ಎಂದು ಹಲವರು ಸೂಚಿಸಿದ್ದಾರೆ.

ಪೈಲ್ಸ್ ಸಮಸ್ಯೆಗೆ ರಜೆ ನೀಡಲು ಉದ್ಯೋಗಿ ಮನವಿ, ದಾಖಲೆ ಕೇಳಿದ ಮ್ಯಾನೇಜರ್‌ಗೆ ಶುರುವಾಯ್ತು ವಾಂತಿ!
 

click me!