ಉತ್ತರ ಪ್ರದೇಶ ಮಹಿಳಾ ಆಯೋಗದ ಮುಖ್ಯಸ್ಥೆ ಬಬಿತಾ ಚೌಹಾಣ್, ಹೆಣ್ಣುಮಕ್ಕಳನ್ನು ಸಾಗಿಸುವ ಶಾಲಾ ಬಸ್‌ಗಳು ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು ಮತ್ತು ಕೋಚಿಂಗ್ ಸೆಂಟರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪ್ರಸ್ತಾಪ ಮಾಡಿದ್ದಾರೆ.
ಲಕ್ನೋ (ನ.8): ಉತ್ತರ ಪ್ರದೇಶದ ಮಹಿಳಾ ಆಯೋಗವು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೊಸ ಹೊಸ ಶಿಫಾರಸುಗಳನ್ನು ಮುಂದಿಟ್ಟಿದೆ. ಅದರಲ್ಲಿ ಪ್ರಮುಖವಾಗಿ ಇನ್ನು ಮುಂದೆ ಪುರುಷ ಟೇಲರ್‌ಗಳು ಹೆಣ್ಣು ಮಕ್ಕಳ ದೇಹದ ಅಳತೆಯನ್ನು ತೆಗೆದುಕೊಳ್ಳುವಂತಿಲ್ಲ ಎಂದು ಪ್ರಸ್ತಾಪ ಮಾಡಿದೆ. ಮಹಿಳೆಯರ ದೇಹದ ಅಳತೆಯನ್ನು ತೆಗೆದುಕೊಳ್ಳುವುದು, ಪುರುಷರು ಮಹಿಳೆಯ ಹೇರ್ ಕಟ್ ಮಾಡುವುದು, ಯೋಗ ಹಾಗೂ ಜಿಮ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಪುರುಷರು ತರಬೇತಿ ನೀಡುವುದನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪ ಮಾಡಿದೆ.ಉತ್ತರ ಪ್ರದೇಶ ಮಹಿಳಾ ಆಯೋಗದ ಮುಖ್ಯಸ್ಥೆ ಬಬಿತಾ ಚೌಹಾಣ್ ಈ ಬಗ್ಗೆ ಮಾತನಾಡಿದ್ದು, ಹೆಣ್ಣುಮಕ್ಕಳನ್ನು ಸಾಗಿಸುವ ಶಾಲಾ ಬಸ್‌ಗಳು ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು ಮತ್ತು ಕೋಚಿಂಗ್ ಸೆಂಟರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಿದ್ದಾರೆ.
ಎಲ್ಲಾ ಜಿಮ್ ತರಬೇತುದಾರರ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಅವರು ಪ್ರಸ್ತಾಪ ಮಾಡಿದ್ದಾರೆ. "ಮಹಿಳೆಯೊಬ್ಬರು ಪುರುಷ ತರಬೇತುದಾರರೊಂದಿಗೆ ತರಬೇತಿ ಪಡೆಯಲು ಬಯಸಿದರೆ, ಅವರು ಲಿಖಿತ ಒಪ್ಪಿಗೆಯನ್ನು ಒದಗಿಸಬೇಕಾಗುತ್ತದೆ" ಎಂದು ಚೌಹಾಣ್ ಹೇಳಿದರು. ಮಹಿಳೆಯರ ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ಹೊಂದಿರುವುದು ಕೂಡ ಶಿಫಾರಸುಗಳಲ್ಲಿ ಪ್ರಮುಖವಾಗಿದೆ.
undefined
ಹಿಂದಿ ನಾಡಲ್ಲೂ ಕನ್ನಡದ ಕಂಪು, ಕುಂಭಮೇಳದ ವೇಳೆ ಕನ್ನಡದಲ್ಲೂ ರೈಲ್ವೇಸ್ ಅನೌನ್ಸ್‌ಮೆಂಟ್!
ಅಕ್ಟೋಬರ್ 28 ರಂದು ನಡೆದ ಸಭೆಯಲ್ಲಿ ಮಹಿಳಾ ಆಯೋಗ ಈ ಸಲಹೆಗಳನ್ನು ನೀಡಿದೆ. ಜಿಮ್‌ಗಳಲ್ಲಿ ಕಿರುಕುಳದ ಕುರಿತು ಆಯೋಗವು ಮಹಿಳೆಯರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದೆ ಎಂದು ಚೌಹಾಣ್ ಹೇಳಿದರು.
ಬೆಂಗಳೂರಿಗೆ ಬೊಂಬಾಟ್ ನ್ಯೂಸ್, ಬ್ಯಾಟರಿ ಸೆಲ್ ಉತ್ಪಾದನೆಗೆ ಇಳಿದ MGL, ರಾಜಧಾನಿಯಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಾಣ
ಮಹಿಳೆಯರ ದೇಹದ ಅಳತೆಗಳನ್ನು ತೆಗೆದುಕೊಳ್ಳಲು ಟೈಲರ್ ಅಂಗಡಿಗಳು ಮಹಿಳಾ ಟೈಲರ್ ಹೊಂದಿರುವುದು ಕಡ್ಡಾಯವಾಗಿದೆ. ಹುಡುಗಿಯರನ್ನು ಸಾಗಿಸುವ ಶಾಲಾ ಬಸ್‌ಗಳು ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು ಎಂದು ಅವರು ಒತ್ತಿ ಹೇಳಿದರು.ಆಯೋಗವು ಎಲ್ಲ ಜಿಲ್ಲೆಗಳಿಗೂ ಪ್ರಸ್ತಾವನೆ ಕಳುಹಿಸಿದೆ.ಈ ಪ್ರಸ್ತಾವನೆಗಳ ಕಾರ್ಯಸಾಧ್ಯತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ, ಅನುಮೋದಿಸಿದ ನಂತರ, ಈ ಪ್ರಸ್ತಾವನೆಗಳ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ರೂಪಿಸುವಂತೆ ಆಯೋಗವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆ ಎಂದು ಮಹಿಳಾ ಮಂಡಳಿಯ ಸದಸ್ಯೆ ಹಿಮಾನಿ ಅಗರ್ವಾಲ್ ತಿಳಿಸಿದ್ದಾರೆ.