
ವಾಷಿಂಗ್ಟನ್ (ಜ.11): ವಿಶ್ವದ ನಂ.1 ಶ್ರೀಮಂತ ಹಾಗೂ ಇತ್ತೀಚೆಗೆ ಅಮೆರಿಕ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಎಲಾನ್ ಮಸ್ಕ್ ಮನಸಿಕ ಸ್ಥಿತಿ ಸರಿಯಿಲ್ಲ. ಶೀಘ್ರ ಅವರು ಬುದ್ಧಿಮಾಂದ್ಯ ಆಗುವ ಸಾಧ್ಯತೆ ಇದೆ ಎಂದು ಅವರ ಜೀವನ ಚರಿತ್ರೆ ಬರೆದ ಸೇಥ್ ಅಬ್ರಾಮ್ಸನ್ ಹೇಳಿದ್ದಾರೆ.
ಈ ಕುರಿತು ಮಸ್ಕ್ ಒಡೆತನದ ಎಕ್ಸ್‌ನಲ್ಲೇ ಪೋಸ್ಟ್ ಮಾಡಿರುವ ಅವರು, ‘ನಾನು ಕಳೆದ 2 ವರ್ಷಗಳಿಂದ ನಿರಂತರವಾಗಿ ಮಸ್ಕ್‌ರ ಆನ್‌ಲೈನ್ ನಡವಳಿಕೆಯನ್ನು ಗಮನಿಸುತ್ತಿದ್ದೇನೆ. ಅವರು ಅತಿಯಾಗಿ ನಶಾ ಪದಾರ್ಥ ಸೇವಿಸುತ್ತಿದ್ದು, ವಿಪರೀತ ಒತ್ತಡದಲ್ಲಿದ್ದಾರೆ’ ಎಂದಿದ್ದಾರೆ.
960 ಕೋಟಿ ಮೌಲ್ಯದ ಟೆಸ್ಲಾ ಷೇರು ಗಿಫ್ಟ್ ನೀಡಿದ ಎಲಾನ್ ಮಸ್ಕ್
ಜತೆಗೆ, ‘ಅಂತರಿಕ್ಷಯಾನ, ವಿದ್ಯುತ್ ವಾಹನ, ಸಾಮಾಜಿಕ ಮಾಧ್ಯಮ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ನಿರ್ಣಾಯಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಸ್ಕ್, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಡಿಒಜಿಇ ಮುಖ್ಯಸ್ಥರಾಗಿದ್ದಾರೆ. ಅವರ ಹುಚ್ಚುತನ ಹಾಗೂ ಹಿಂಸೆಗೆ ಪ್ರಚೋದನೆ ನಮಗೆಲ್ಲ ಅಪಾಯ ಉಂಟುಮಾಡುತ್ತದೆ. ಅಮೆರಿಕವನ್ನು ಮಸ್ಕ್‌ರಿಂದ ರಕ್ಷಿಸಿ’ ಎಂದು ಎಚ್ಚರಿಸಿದ್ದಾರೆ.
ಅತಿ ಹೆಚ್ಚು ಆಸ್ತಿ ಹೊಂದಿರುವ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ!
ಅಂತೆಯೇ, ಅಧ್ಯಕ್ಷ ಜೋ ಬೈಡೆನ್ ಅಧಿಕಾರಾವಧಿ ಸಂಪನ್ನಗೊಳ್ಳುವ ಮೊದಲೇ ಮಸ್ಕ್‌ರೊಂದಿಗಿನ ಸರ್ಕಾರದ ಎಲ್ಲಾ ಒಪ್ಪಂದಗಳನ್ನು ರದ್ದುಗೊಳಿಸಿ, ಅಸಾಂವಿಧಾನಿಕ ಹುದ್ದೆಯಾದ ಡಿಒಜಿಇ ವಿರುದ್ಧ ಮೊಕದ್ದಮೆ ಸಲ್ಲಿಸಲು ಅಬ್ರಾಮ್ಸನ್ ಸೂಚಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ