ಸ್ವಾರ್ಥಕ್ಕಾಗಿ ರಾಜಕೀಯ ಬೇಡ, ಗುರಿ ಸಾಧಿಸಲು ಬನ್ನಿ: ಪ್ರಧಾನಿ ಮೋದಿ!

By Kannadaprabha News  |  First Published Jan 11, 2025, 5:30 AM IST

ರಾಜಕೀಯಕ್ಕೆ ಬರುವುದು ಬೇರೆ, ರಾಜಕೀಯದಲ್ಲಿ ಯಶಸ್ವಿಯಾಗುವುದು ಬೇರೆ. ನೀವು ಒಂದು ತಂಡದ ಆಟಗಾರರಾಗಿ ಕೆಲಸ ಮಾಡಿದಾಗ ಮತ್ತು ಜನರ ಕಲ್ಯಾಣಕ್ಕೆ ಸಮರ್ಪಿತರಾದಾಗ ಮಾತ್ರ ಯಶಸ್ವಿ ರಾಜಕಾರಣಿ ಆಗುತ್ತೀರಿ: ಪ್ರಧಾನಿ ನರೇಂದ್ರ ಮೋದಿ


ನವದೆಹಲಿ(ಜ.11):  'ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಅಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಶುಕ್ರವಾರ ಕನ್ನಡಿಗ ಉದ್ಯಮಿ ನಿಖಿಲ್ ಕಾಮತ್ ಅವರ 'ಡಬ್ಲ್ಯುಟಿಎಫ್' ಪೋಡ್‌ಕಾಸ್ಟ್‌ನಲ್ಲಿ ಮೋದಿ 2 ತಾಸು ಕಾಲ ಆನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದು ಮೋದಿ ಅವರ ಮೊದಲ ಪೋಡ್‌ಕಾಸ್ಟ್‌ ಕೂಡ ಹೌದು. 'ರಾಜಕೀಯಕ್ಕೆ ಬರುವುದು ಬೇರೆ, ರಾಜಕೀಯದಲ್ಲಿ ಯಶಸ್ವಿಯಾಗುವುದು ಬೇರೆ. ನೀವು ಒಂದು ತಂಡದ ಆಟಗಾರರಾಗಿ ಕೆಲಸ ಮಾಡಿದಾಗ ಮತ್ತು ಜನರ ಕಲ್ಯಾಣಕ್ಕೆ ಸಮರ್ಪಿತರಾದಾಗ ಮಾತ್ರ ಯಶಸ್ವಿ ರಾಜಕಾರಣಿ ಆಗುತ್ತೀರಿ. ಜನರು ಯಾವುದೋ (ಸ್ವಾರ್ಥ) ಉದ್ದೇಶ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಸ್ವಾರ್ಥಿ ರಾಜಕಾರಣಿಗಳಿಗೆ ಉಳಿಗಾಲವಿಲ್ಲ' ಎಂದರು.

Tap to resize

Latest Videos

ಜಾರ್ಜಿಯಾ ಮೆಲೋನಿ ಜೊತೆಗಿನ ಮೀಮ್ಸ್‌ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮೋದಿ

ನಾನು ವಿವಿಐಪಿ ಅಲ್ಪ, ಜನಸಾಮಾನ: ಮೋದಿ

ನವದೆಹಲಿ: 'ನಾನು ವಿಐಪಿ ಅಲ್ಲ, ಜನಸಾಮಾನ್ಯ ಎಂದು ನನ್ನ ಭದ್ರತಾ ಸಿಬ್ಬಂದಿಗೆ ಗುಜರಾತ್ ಸಿಎಂ ಆದಾಗಲೇ ಹೇಳಿದ್ದೆ' ಎಂದು ಪ್ರಧಾನಿನರೇಂದ್ರ ಮೋದಿಸ್ಥರಿಸಿದರು, ಶುಕ್ರವಾರ ಕನ್ನಡಿಗ ಉದ್ಯಮಿ ನಿಖಿಲ್ ಕಾಮತ್ ಅವರ 'ಡಬ್ಲ್ಯುಟಿಎಫ್' ಪೋಡ್‌ಕಾಸ್ಟ್‌ನಲ್ಲಿ ಮೋದಿ 2 ತಾಸು ಕಾಲ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದು ಮೋದಿ ಅವರ ಮೊದಲ ಪೋಡ್ಕಾಸ್ಟ್ ಕೂಡ ಹೌದು. 

'ನಾನು ಗುಜರಾತ್ ಸಿಎಂ ಆಗಿದ್ದಾಗ 2002 ರಲ್ಲಿ ಗೋಧ್ರಾದಲ್ಲಿನ ದೃಶ್ಯಗಳನ್ನು ನೋಡಿದಾಗ ನನಗೆ ನೋವು ಉಂಟಾಯಿತು. ಆಗ ನಾನು ಹೆಲಿಕಾಪ್ಟರ್ ಮೂಲಕ ಗೋಧಾಗೆ ಹೋಗಲು ಬಯಸಿದೆ. ಒಂದೇ ಇಂಜಿನ್ ಹೆಲಿಕಾಪ್ಟರ್‌ ಇದೆ.ಇದು ವಿಐಪಿಗಳಿಗೆ ಅಲ್ಲ. ಹೋಗಬೇಡಿ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಆದರೆ 'ನಾನು ವಿಐಪಿ ಅಲ್ಲ, ಸಾಮಾನ್ಯ ಮನುಷ್ಯ.. ಏನೇ ಸಂಭವಿಸಿ ದರೂ ನಾನೇ ಹೊಣೆ ಎಂದು ಬರೆದುಕೊಡುವೆ' ಎಂದೆ. ಕೊನೆಗೆ ಗೋದ್ರಾಗೆ ಹೋಗಿ ನೋವಿನ ದೃಶ್ಯ ನೋಡಿದೆ. ಆಗ ನನ್ನಲ್ಲಿ ಭಾವನೆಗಳು ಉಕ್ಕಿ ಬಂದರೂ ಸುಮ್ಮನಿದ್ದೆ. ಏಕೆಂದರೆ ರಾಜ್ಯದನಾಯಕನಾಗಿ ನನ್ನ ಭಾವನೆ ಹತ್ತಿಕ್ಕಿಕೊ ಳ್ಳಬೇಕು. ಸಮಚಿತ್ತದಿಂದ ಇರಬೇಕು' ಎಂದರು.

'ಮೆಲೋನಿ ಜತೆಗಿನ ಮೀಮ್ ನೋಡಿದ್ದೇನೆ' 

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆಗಿನ ಆತ್ಮೀಯತೆ ಕುರಿತ ಮೀಮ್ ನೋಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನಗುತ್ತಾ ಪ್ರತಿಕ್ರಿ ಕ್ರಿಯೆ ನೀಡಿದ ಮೋದಿ, 'ಕೋಚಲತಾರೆಹ್ರಾ ಹೈ' (ಅದು ಹೀಗೆಯೇ ನಡೆಯುತ್ತದೆ) ಎಂದು ಚಟಾಕಿ ಹಾರಿಸಿದರು.

2002ರ ಗುಜರಾತ್ ಚುನಾವಣೆ ನನ್ನ ಅಗ್ನಿಪರೀಕ್ಷೆ 

ಇಡೀ ಮತ ಎಣಿಕೆಯ ವೇಳೆ ನಾನು ಟೀವಿಯನ್ನೇ ನೋಡಿರಲಿಲ್ಲ ಗೋಧ್ರಾ ಗಲಭೆ ನಡೆದ ವರ್ಷವೇ ಜರುಗಿದ 2002ರ ಗುಜರಾತ್ ಚುನಾವಣೆ ನನ್ನ ಜೀವನದ ದೊಡ್ಡ ಪರೀಕ್ಷೆ. ಆ ಚುನಾವಣೆಗಳಲ್ಲಿ ಮತ ಎಣಿಕೆ ವೇಳೆ ನಾನು ಟೀವಿ ನೋಡಲೇ ಇಲ್ಲ. ಮಧ್ಯಾಹ್ನದವರೆಗೆ ಮಾಹಿತಿ ನೀಡಬೇಡಿ ಎಂದು ಜನರಿಗೆ ಹೇಳಿದ್ದೆ. ನನ್ನ ಮನೆ ಹೊರಗೆ ಮಧ್ಯಾಹ್ನದ ಸುಮಾರಿಗೆ, ಡೋ ಲ್ ಶಬ್ದ ಕೇಳಿದೆ. ನಂತರ ನನ್ನ ಆಪರೇಟರ್, ನಾವು ಗೆದ್ದೆವೆಂದು ಹೇಳಿದ ಎಂದು ಮೋದಿಸ್ಥರಿಸಿದರು. ಗಾಂಧಿ ಸ್ಮರಣೆ: 'ಗಾಂಧಿ ಎಂದೂ ಟೋಪಿ ಧರಿಸಲಿಲ್ಲ. ಆದರೆ ಈಗ ಗಾಂಧಿ ಟೋಪಿಯನ್ನು ವಿಶ್ವವೇ ಸ್ಮರಿಸುತ್ತದೆ. ಅದೇ ನಿಜವಾದ ನಾಯಕತ್ವ ಹಾಗೂ ಸಂವಹನದ ನೈಜ ಶಕ್ತಿ' ಕ್ರಿ' ಎಂದು ಮೋದಿ ಬಣ್ಣಿಸಿದರು.

ನಾನೂ ಹಿಂದಿ ಭಾಷಿಕನಲ್ಲ: ಮೋದಿ 

ಹಿಂದಿ ವರ್ಸಸ್ ಸ್ಥಳೀಯ ಭಾಷೆ ಯುದ್ಧವು ದೇಶದಲ್ಲಿ ನಡೆದಿರುವ ನಡುವೆಯೇ 'ನಾನೂ ಹಿಂದಿ ಭಾಷಿಕನಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂದರ್ಶಕ ನಿಖಿಲ್ ಕಾಮತ್ ಅವರು, 'ನನ್ನ ತಾಯಿ ಮೈಸೂರಿನವರು. ನನ್ನ ತಂದೆಮಂಗಳೂರವರು. ನನಗೆ ಅಷ್ಟು ಚೆನ್ನಾಗಿ ಹಿಂದಿ ಬರಲ್ಲ. ಅನ್ಯಥಾ ಭಾವಿಸಬೇಡಿ' ಎಂದು ಮೋದಿಗೆ ಕೋರಿದರು. ಆಗ ಮೋದಿ, 'ನಾನೂ ನಿಮ್ಮ ರೀತಿಯೇ. ನನ್ನದು ಗುಜರಾತ್. ನಾನೂ ಹಿಂದಿ ಭಾಷಿಕನಲ್ಲ' ಎಂದರು.

ನಾನು ಬಟ್ಟೆ ಒಗೀತಿದ್ದೆ 

'ಚಿಕ್ಕಂದಿನಲ್ಲಿ ನನ್ನ ಹಳ್ಳಿಯಲ್ಲಿ ಮನೆಯವರ ಎಲ್ಲ ಬಟ್ಟೆಯನ್ನು ನಾನು ಒಗೆಯುತ್ತಿದ್ದೆ. ಹೀಗಾಗಿ ನನಗೆ ಕೆರೆಗೆ ಹೋಗಲು ಅವಕಾಶ ಸಿಗುತ್ತಿತ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟೂರು ವಡ್‌ನಗರದಲ್ಲಿನ ಜೀವನದ ಬಗ್ಗೆ ಕುತೂಹಲದ ಮಾಹಿತಿ ಬಿಚ್ಚಿಟ್ಟರು.

ನಿಖಿಲ್‌ ಕಾಮತ್‌ ಪಾಡ್‌ಕಾಸ್ಟ್‌ನಲ್ಲಿ 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ ಮೋದಿ ಮಾತು!

ಚಂದ್ರಯಾನ-2 ವಿಫಲವಾದರೆ ನಾನು ಹೊಣೆ ಎಂದಿದ್ದೆ 

ಈ ಹಿಂದೆ ಚಂದ್ರಯಾನ-2 ಉಡ್ಡಯನ ವೀಕ್ಷಿಸಲು ನಾನು ಬೆಂಗಳೂರು ಇಸ್ರೋ ಕಚೇರಿಗೆ ಬಂದಿದ್ದೆ. ಆದರೆ ಯಾನ ವಿಫಲ ಆದರೆ ಮುಜುಗರ ಆಗಬಹುದು ಬರಬೇಡಿ ಎಂದು ನನಗೆ ಕೆಲವರು ಸಲಹೆ ನೀಡಿದ್ದರು. ಆಗ ನಾನು. 'ವಿಫಲವಾದರೆ ನಾನು ಹೊಣೆ ಹೊರುವೆ. ವಿಜ್ಞಾನಿಗಳಿಗೆ ಧೈರ್ಯ ತುಂಬುವೆ' ಎಂದು ಬಂದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದರು.

ಶಾಲೆಯಲ್ಲಿ ನಾನು 'ಆರ್ಡಿನರಿ' ವಿದ್ಯಾರ್ಥಿ 

ನಾನು ಚಿಕ್ಕಂದಿನಲ್ಲಿ ಆರ್ಡಿನರಿ (ಸಾಮಾನ್ಯ) ವಿದ್ಯಾರ್ಥಿ ಆಗಿದ್ದೆ. ಪ್ರತಿಭೆ ಇದ್ದರೂ ಓದಿನ ಕಡೆ ಗಮನ ಹರಿಸಲ್ಲ ಎಂದು ಶಿಕ್ಷಕರು ನನ್ನ ತಂದೆಗೆ ನನ್ನ ಬಗ್ಗೆ ದೂರಿದ್ದರು. ಆದರೆ ಪತ್ಯೇ ತರ ಚಟುವಟಿಕೆಯಲ್ಲಿ ಜೋರಾಗಿದ್ದೆ ಎಂದು ಮೋದಿ ಬಾಲ್ಯದ ದಿನಗಳನ್ನು ಸ್ಮರಿಸಿದರು.

click me!