ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್

Published : May 17, 2022, 03:34 PM IST
ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್

ಸಾರಾಂಶ

ಮ್ಯಾಟ್‌ಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಕಿತ್ತಾಡುವ ಆನೆ ಆನೆ ಮರಿಯ ಮುದ್ದಾದ ವಿಡಿಯೋ ವೈರಲ್‌ ಹಾಸಿಗೆಯಿಂದ ಏಳುವವರೆಗೂ ಬಿಡದ ಮರಿ

ಆನೆಗಳು ಮನುಷ್ಯರೊಂದಿಗೆ ಸಾಕಷ್ಟು ಸ್ನೇಹಪರ ಸಂಬಂಧವನ್ನು ಹೊಂದಿರುತ್ತವೆ. ಆದಾಗ್ಯೂ ಆನೆ ಹಾಗೂ ಮಾನವ ನಡುವಿನ ಸಂಘರ್ಷಗಳು ಒಂದು ಕಡೆ ಕಾಡಂಚಿನ ಗ್ರಾಮಗಳನ್ನು ಕಾಡುತ್ತಿವೆ. ಈ ನಡುವೆ ಆನೆ ಹಾಗೂ ಮನುಷ್ಯನ ನಡುವಿನ ಸ್ನೇಹ ಬಾಂಧವ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದೆ.

ಮಲಗುವ ಹಾಸಿಗೆಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಆನೆ ಮರಿ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಮನಸ್ಸಿಗೆ ಮುದ ನೀಡುವಂತಿದೆ. ಭಾರತೀಯ ಅರಣ್ಯ ಅಧಿಕಾರಿ ಡಾ. ಸಾಮ್ರಾಟ್ ಗೌಡ (Samrat Gowda) ಅವರು ತಮ್ಮ ಟ್ವಿಟರ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ (Twitter Account) ಸಾಕಷ್ಟು ಹೃದಯಸ್ಪರ್ಶಿ ಪ್ರಾಣಿಗಳ ವೀಡಿಯೊಗಳನ್ನು ಹಂಚಿಕೊಳ್ಳುವ ಡಾ.ಗೌಡ, 'ಹೇ ಅದು ನನ್ನ ಹಾಸಿಗೆ ಎದ್ದೇಳು' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಮರಿ ಆನೆ ಬೇಲಿ ದಾಟಲು ಹೆಣಗಾಡುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಆನೆಯ ಸ್ವಾಭಾವಿಕವಾಗಿ ದೊಡ್ಡ ಗಾತ್ರದ ಕಾರಣ, ಅವು ಜಿಗಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮರಿ ಪ್ರಾಣಿಯು ಫೆನ್ಸಿಂಗ್ ಅನ್ನು ದಾಟಲು ಹೆಣಗಾಡುತ್ತದೆ. ಅದನ್ನು ದಾಟಿದ ನಂತರ, ಅದು ನೇರವಾಗಿ ಮೃಗಾಲಯದ ಕೀಪರ್ ಮಲಗಿರುವ ಹಾಸಿಗೆಗೆ ಹೋಗಿ ಆತನನ್ನು ಹಾಸಿಗೆಯಿಂದ ಹೊರ ಹಾಕಲು ನೋಡುತ್ತಾನೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮ : ಹೆಣ್ಣು ಮರಿಗೆ ಜನ್ಮ ನೀಡಿದ ಭಾನುಮತಿ

ವಿಡಿಯೋದಲ್ಲಿ ಕಾಣಿಸುವಂತೆ ಆನೆ ಮರಿಯೊಂದು (Elephant calf) ತನ್ನ ತಾಯಿಯೊಂದಿಗೆ ಮರದ ಕೋಲುಗಳಿಂದ ಸುತ್ತಲೂ ಬೇಲಿಯಂತೆ ಕಟ್ಟಿದ ಸರಪಣಿಯೊಳಗೆ ಇರುತ್ತದೆ. ಈ ಸರಪಳಿಗೆ ಒಂದು ಗೇಟ್ ಇದ್ದು ಆ ಗೇಟ್‌ ಅನ್ನು ತೆರೆದು ಹೊರಗೆ ಬರಲು ಆನೆ ಮರಿ ಒದ್ದಾಡುತ್ತಿರುತ್ತದೆ. ಹಲವು ಪ್ರಯತ್ನಗಳ ನಂತರ ಅಲ್ಲಿಂದ ಹೊರಗೆ ಬರುವ ಆನೆ ಮರಿ ಹೊರಗೆ ಮಲಗಿದ್ದ ತನ್ನನ್ನು ನೋಡಿಕೊಳ್ಳುವವನ ಬಳಿ ಓಡಿ ಬರುತ್ತದೆ. ಬಂದವನೇ ಹಾಸಿಗೆಯಲ್ಲಿ ಮಲಗಿದ್ದ ಆತನನ್ನು ಎಳೆದು ಎಳೆದು ಹಾಸಿಗೆಯಿಂದ ಹೊರಗೆ ದೂಡಲು ಪ್ರಯತ್ನಿಸುತ್ತದೆ. ತನ್ನ ಕಾಲು ಹಾಗೂ ಸೊಂಡಿಲಿನಿಂದ ಆತನನ್ನು ದೂಡುವ ಆನೆ ಮರಿ ಆತ ಎದ್ದು ದೂರ ಹೋಗುವವರೆಗೂ ಅವನನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. 

ಹಿಮದಲ್ಲಿ ಆನೆ ಮರಿಯ ಆಟ... ಮನಮೋಹಕ ದೃಶ್ಯ ವೈರಲ್‌
ಅಲ್ಲದೇ ಮೇಲೆದ್ದ ಆತ ಮಲಗಲು ಪ್ರಯತ್ನಿಸುತ್ತಿದ್ದಂತೆ ಆನೆ ಮರಿಯೇ ಬಂದು ಆ ಹಾಸಿಗೆ ಮೇಲೆ ಮಲಗಲು ನೋಡುತ್ತಾನೆ. ಅಲ್ಲದೇ ಸಮೀಪದಲ್ಲಿದ್ದ ಮೇವಿನ ರಾಶಿ ಮೇಲೆ ತನ್ನ ಹುಸಿಗೋಪ ತೋರಿಸುತ್ತಿರುವ ಆನೆಮರಿ ಅದರ ಮೇಲೆಯೋ ಹೋಗಿ ಬಿದ್ದು ಗುದ್ದಾಡುತ್ತದೆ. ಈ ವೇಳೆ ಆನೆಯನ್ನು ನೋಡುವಾತ ಹಾಸಿಗೆ ಮೇಲೆ ಮತ್ತೆ ಮಲಗುತ್ತಾನೆ. ಆಗ ಮರಳಿ ಬಂದ ಆನೆ ಮರಿ ಮ್ಯಾಟ್ ಮೇಲೆ ಮಲಗುತ್ತದೆ. ಈ ವೇಳೆ ಆನೆ ನೋಡಿಕೊಳ್ಳುವವನು ಕೂಡ ಅದರೊಂದಿಗೆ ಆ ಹಾಸಿಗೆಯ ಪಕ್ಕದಲ್ಲಿ ಮಲಗಿಕೊಳ್ಳುತ್ತಾನೆ. ಆನೆಮರಿ ಹಾಗೂ ಆನೆ ನೋಡಿಕೊಳ್ಳುವವನ ಈ ಸುಮಧುರ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್