ಅದ್ಭುತ ಪುನರ್ಮಿಲನ: ಒಂದೇ ಶಾಲೆಯ ಬೆಂಚ್‌ಮೇಟ್‌ಗಳು ಈಗ ಸೇನೆಯ ಉನ್ನತ ಹುದ್ದೆಯಲ್ಲಿರುವವರು

Published : Jul 23, 2025, 06:12 PM IST
friends proved school friendships don’t fade

ಸಾರಾಂಶ

ಒಂದೇ ಶಾಲೆಯಲ್ಲಿ ಕಲಿತ ನಾಲ್ವರು ಸ್ನೇಹಿತರು ದಶಕಗಳ ನಂತರ ಸೇನೆಯ ವಿವಿದ ಉನ್ನತ ಹುದ್ದೆಯ ಅಧಿಕಾರಿಗಳಾಗಿ  ತಮ್ಮ ಶಾಲೆಗೆ ಭೇಟಿ ನೀಡಿದರು. ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ಈ ಸ್ನೇಹಿತರು ಈಗ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಒಂದೇ ಕಡೆ ಒಂದೇ ಶಾಲೆಯಲ್ಲಿ ಬಾಲ್ಯ ಕಲಿತವರು ಕೆಲಸದ ಸ್ಥಳದಲ್ಲೂ ಒಟ್ಟಿಗೆ ಸೇರುವುದು ಬಹಳ ಅಪರೂಪ,. ಒಂದೇ ಊರಿನ ನಿವಾಸಿಗಳಾಗಿದ್ದಲ್ಲಿ ಮಾತ್ರ ಕೆಲವರು ಸಂಪರ್ಕಕ್ಕೆ ಬರುತ್ತಾರೆ. ಆದರೆ ಇಲ್ಲೊಂದು ಕಡೆ ಅಪರೂಪದ ಸಮ್ಮಿಲನವಾಗಿದೆ. ಒಂದೇ ಶಾಲೆಯಲ್ಲಿ ಹಿಂದೆ ಹಾಗೂ ಮುಂದಿನ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ಹುಡುಗರು ಇಂದು ದೇಶ ಸೇವೆಯ ಕಾಯಕದಲ್ಲಿ ಒಂದಾಗಿದ್ದಾರೆ. ಹಾಗೂ ಅವರು ಮತ್ತದೇ ತಮ್ಮ ಹೆಮ್ಮೆಯ ಶಾಲೆಗೆ ಭೇಟಿ ನೀಡಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

40 ವರ್ಷದ ಬಳಿಕ ತಾವು ಕಲಿತ ಶಾಲೆಗೆ ಬಂದ ವಿದ್ಯಾರ್ಥಿಗಳು

40 ವರ್ಷದ ಬಳಿಕ ನಿಮ್ಮ ಬಾಲ್ಯದ ಬೆಂಚ್‌ಮೇಟ್ ಒಬ್ಬರು ಸೇನಾ ನಾಯಕನಾಗಿ ನಿಮ್ಮ ಪಕ್ಕ ನಿಂತಿದ್ದರೆ ಹೇಗಿರುತ್ತದೆ. ಅದು ನಿಜಕ್ಕೂ ಒಂದು ಖುಷಿಯ ಕ್ಷಣ., ಅದೇ ರೀತಿ ಈಗ ಕೇರಳದ ತಿರುವನಂತಪುರದ ಕಝಕೂಟಂ ಸೈನಿಕ ಶಾಲೆಯ ನಾಲ್ವರು ಸ್ನೇಹಿತರು ಸ್ನೇಹ ಅಳಿಸಿ ಹೋಗುವುದಿಲ್ಲ, ಅವು ಕಾಲದ ಪರೀಕ್ಷೆಯಲ್ಲಿ ಮುನ್ನಡೆಯುತ್ತಾ ಸಾಗುತ್ತಿರುತ್ತವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದಶಕಗಳ ಕಾಲ ಬೆಂಚುಗಳು ಮತ್ತು ಕನಸುಗಳನ್ನು ಖುಷಿಯನ್ನು ಜೊತೆಯಾಗಿ ಹಂಚಿಕೊಂಡು ಬೇರೆ ಬೇರೆ ಹಾದಿಯಲ್ಲಿ ಸಾಗಿದ ಹಲವು ದಶಕಗಳ ನಂತರ ಲೆಫ್ಟಿನೆಂಟ್ ಜನರಲ್ ವಿಜಯ್ ಬಿ ನಾಯರ್, ಮೇಜರ್ ಜನರಲ್ ವಿನೋದ್ ಮ್ಯಾಥ್ಯೂ, ಮೇಜರ್ ಜನರಲ್ ಹರಿ ಪಿಳ್ಳೈ ಮತ್ತು ಏರ್ ವೈಸ್ ಮಾರ್ಷಲ್ ಸುರೇಂದ್ರನ್ ನಾಯರ್ ತಮ್ಮ ಶಾಲೆಗೆ ಜೊತೆಯಾಗಿ ಮರಳಿ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಅವರು ಬಂದಿರುವುದು ವಿದ್ಯಾರ್ಥಿಗಳಾಗಿ ಅಲ್ಲ ಬದಲಾಗಿ ಸೇನಾ ಸಮವಸ್ತ್ರ ಧರಿಸಿದ ದೇಶದ ಗೌರವಯುತ ಸೇನೆಯ ನಾಯಕರಾಗಿ.

ಆಗ ವಿದ್ಯಾರ್ಥಿಗಳಾಗಿದ್ದವರು ಈಗ ಏನಾಗಿದ್ದಾರೆ?

ಈ ಶಾಲೆಯಲ್ಲಿ ಕಲಿತ ಲೆಫ್ಟಿನೆಂಟ್ ಜನರಲ್ ವಿಜಯ್ ನಾಯರ್ ಈಗ ಭಾರತದ ನಾರ್ತರ್ನ್‌ ಆರ್ಮಿಯ ನೇತೃತ್ವ ವಹಿಸಿದ್ದಾರೆ. ಕಾಶ್ಮೀರ ಮತ್ತು ಅದರಾಚೆಗೆ ನಿರ್ಣಾಯಕ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ಹಾಗೆಯೇ ಮೇಜರ್ ಜನರಲ್ ವಿನೋದ್ ಮ್ಯಾಥ್ಯೂ ಕರ್ನಾಟಕ ಮತ್ತು ಕೇರಳದಾದ್ಯಂತ ರಕ್ಷಣಾ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯದ ಪ್ರಮುಖ ರಕ್ಷಣಾ ಮತ್ತು ದಂಗೆ ನಿಗ್ರಹ ಕಾರ್ಯಾಚರಣೆಗಳನ್ನು ಅವರು ಮುನ್ನಡೆಸಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿ ಮೇಜರ್ ಜನರಲ್ ಹರಿ ಪಿಳ್ಳೈ ಅವರು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ವರ್ಷಗಳ ಸೇವೆಯ ನಂತರ ಬೆಂಗಳೂರಿನಲ್ಲಿ ಈಗ ಸೇನಾ ನೇಮಕಾತಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಹಾಗೆಯೇ 4ನೇ ವಿದ್ಯಾರ್ಥಿ ಏರ್ ವೈಸ್ ಮಾರ್ಷಲ್ ಸುರೇಂದ್ರನ್ ನಾಯರ್, ಮಿಗ್‌ಗಳು ಮತ್ತು ಸುಖೋಯ್‌ಗಳನ್ನು ಹಾರಿಸಿ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಈಗ ಭಾರತದ ಮುಂದಿನ ಪೀಳಿಗೆಯ ಯುದ್ಧ ಪೈಲಟ್‌ಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ಇವರೆಲ್ಲರೂ ತಾವು ಕಲಿತ ಶಾಲೆಗೆ ಜೊತೆಯಾಗಿ ಬಂದು ತಮ್ಮ ಕನಸುಗಳು ರೂಪುಗೊಂಡ ಅದೇ ಕಾರಿಡಾರ್‌ಗಳಲ್ಲಿ ನಡೆದ ಹೋದರು. ಅವರು ಅಂದು ಕುಳಿತಿದ್ದ ಸ್ಥಳದಲ್ಲಿ ಇಂದು ಕುಳಿತ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರು.

ಈ ಸೈನಿಕ ಶಾಲೆಗೆ ಹಿಂದೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿ ವಿದ್ಯಾರ್ಥಿಗಳಾಗಿದ್ದ ತಮಗೆ ಸಮವಸ್ತ್ರ ಧರಿಸುವ ಕನಸು ಕಾಣುವಂತೆ ಪ್ರೇರೇಪಿಸಿದರು ಇಂದು ನಾವು ಅದೇ ಕನಸನ್ನು ಇನ್ನೂ ಅನೇಕರಲ್ಲಿ ಹುಟ್ಟುಹಾಕಲು ಬಯಸುತ್ತೇವೆ. ಏಕೆಂದರೆ ಕೆಲವು ಸ್ನೇಹಗಳು ಕೇವಲ ಬೆಳೆಯುವುದಿಲ್ಲ ಆ ಸ್ನೇಹ ಒಟ್ಟಿಗೆ ರಾಷ್ಟ್ರ ಸೇವೆಗೆ ಸಿದ್ಧಗೊಳ್ಳುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಈ ಸೈನಿಕ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಈ ನಾಲ್ವರು ಸೇನಾ ಅಧಿಕಾರಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ