Election Result ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆ, ಮುಂದಿನ ಸಿಎಂ ಯಾರು?

Published : Mar 12, 2022, 04:57 PM IST
Election Result ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆ, ಮುಂದಿನ ಸಿಎಂ ಯಾರು?

ಸಾರಾಂಶ

ಪಂಜ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಗೋವಾದಲ್ಲಿ 20 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಅತೀ ದೊಡ್ಡ ಪಕ್ಷ ಹಾಲಿ ಸಿಎಂ ಪ್ರಮೋದ್ ಸಾವಂತ್ ರಾಜೀನಾಮೆ, ಮುಂದಿ ಸಿಎಂ ಯಾರು?

ಗೋವಾ(ಮಾ.12): ಗೋವಾ ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಗೋವಾ ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮೂವರು ಫಕ್ಷೇತರು ಈಗಾಗಲೇ ಬೆಂಬಲ  ಸೂಚಿಸಿದ್ದಾರೆ. ಇದೀಗ ಬಿಜೆಪಿ ಹೊಸ ಸರ್ಕಾರ ರಚನೆ ತಯಾರಿಯಲ್ಲಿದೆ. ಪ್ರಮೋದ್ ಸಾವಂತ್ ರಾಜೀನಾಮೆ ಬೆನ್ನಲ್ಲೇ ಇದೀಗ ಗೋವಾ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆಗಳು ಜೋರಾಗಿದೆ. 

ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಗೋವಾ ವಿಧಾನಸಭಾ ಫಲಿತಾಂಶ ಕೊನೆಗೂ ಬಿಜೆಪಿ ಪರವಾಗಿದೆ. ಅತಂತ್ರ ಫಲಿತಾಂಶ ಮುನ್ಸೂಚನೆಯಿಂದ ರೆಸಾರ್ಟ್ ರಾಜಕಾರಣ ಸೇರಿದಂತೆ ಹಲವು ಬೆಳವಣಿಗೆಗೆ ಗೋವಾ ಸಾಕ್ಷಿಯಾಗಿತ್ತು. ಆದರೆ ಸಂಪೂರ್ಣ ಫಲಿತಾಂಶ ಹೊರಬಿದ್ದಾಗ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸತತ 3ನೇ ಬಾರಿ ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿದೆ.

Election Result 2022 ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

ಪ್ರಮೋದ್ ಸಾವಂತ್ ಮತ್ತೆ ಸಿಎಂ ಆಗಲಿದ್ದಾರೆ ಅನ್ನೋ ಮಾತುಗಳು ಒಂದಡೆಯಾದರೆ, ಹೈಕಮಾಂಡ್ ತೀರ್ಮಾನ ಮಾಡಲಿದೆ ಅನ್ನೋ ಮಾತುಗಳು ಮತ್ತೊಂದೆಡೆ. ಇದರ ನಡುವೆ ಸಾವಂತ್ ಬದಲು ಹೊಸ ಸಿಎಂ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಗೋವಾ ಬಿಜೆಪಿಯಲ್ಲಿ ಇದೀಗ ಸಚಿವಾಕಾಂಕ್ಷಿಗಳ ಪಟ್ಟಿ ಜೊತೆಗೆ ಸಿಎಂ ಸ್ಥಾನದ ರೇಸ್ ಕೂಡ ಜೋರಾಗಿ ನಡೆಯುತ್ತಿದೆ.

ವೈಯುಕ್ತಿಕವಾಗಿ ನನ್ನ ಗೆಲುವಿನ ಅಂತರ ಕಡಿಮೆ ಇದೆ. ಆದರೆ ಗೋವಾದಲ್ಲಿ ಪಕ್ಷ ಭರ್ಜರಿ ಅಂತರದಲ್ಲಿ ಗೆದ್ದುಕೊಂಡಿದೆ. ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ ನನಗೆ, ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತರ ಕಡಿಮೆಯಾಗಿದೆ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.

Elections 2022 Result 2 ರಾಜ್ಯದಲ್ಲಿ ರೆಸಾರ್ಟ್ ಬುಕ್ ಮಾಡಿದ ಕಾಂಗ್ರೆಸ್‌ಗೆ ನಿರಾಸೆ, ಗೋವಾದಲ್ಲಿ ಸರ್ಕಾರ ರಚಿಸುವತ್ತ ಬಿಜೆಪಿ

ಈಗಾಗಲೇ ಸಿಎಂ ಪ್ರಮೋದ್ ಸಾವಂತ್ ರಾಜೀನಾಮೆ ನೀಡಿದ್ದಾರೆ. ಮಾ.14ರಂದು ಹಾಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ. ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 40 ಸ್ಥಾನ ಬಲದ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನ ಗೆದ್ದುಕೊಂಡಿದೆ. ಬಹುಮತಕ್ಕೆ ಇನ್ನು ಕೇವಲ 1 ಸ್ಥಾನ ಬೇಕಾಗಿದೆ. ಆದರೆ ಈಗಾಗಲೇ ಮೂವರು ಪಕ್ಷೇತರರು ಮತ್ತು ಎಂಜಿಪಿ ಸಹ ಬಿಜೆಪಿಗೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಯಾವುದೇ ಅಡ್ಡಿಯಾಗದು.

ಚುನಾವಣಾ ಫಲಿತಾಂಶ: ಬಿಜೆಪಿ ಸಂಭ್ರಮಾಚರಣೆ
ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಶಿವಮೊಗ್ಗ ಬಿಜೆಪಿ ಕಾರ್ಯಾಲಯದಲ್ಲಿ ಕಾಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.ಉತ್ತರಪ್ರದೇಶ, ಉತ್ತರಾಖಂಡ್‌, ಗೋವಾ ಮತ್ತು ಮಣಿಪುರ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.

ಸಂಭ್ರಮಾಚರಣೆ ಸಂದರ್ಭ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌, ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್‌, ಗಣೇಶ್‌ ರಾವ್‌, ಸಣ್ಣ ಕೈಗಾರಿಕಾ ನಿಗಮದ ರಾಜ್ಯ ಉಪಾಧ್ಯಕ್ಷ ದತ್ತಾತ್ರಿ, ವಿಭಾಗ ಪ್ರಭಾರಿ ಗಿರೀಶ್‌ ಪಟೇಲ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವರಾಜು, ಬಿ.ಕೆ.ಶ್ರೀನಾಥ್‌, ಧರ್ಮಪ್ರಸಾದ್‌, ಮಹಾನಗರ ಪಾಲಿಕೆ ಸದಸ್ಯ ಎಸ್‌. ಎನ್‌. ಚನ್ನಬಸಪ್ಪ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ