Election 2022 ಪಂಚ ರಾಜ್ಯ ಸೋಲಿನ ಹೊಣೆ ಹೊತ್ತು ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ಸಾಧ್ಯತೆ, ಕಾಂಗ್ರೆಸ್ ಗರಂ!

Published : Mar 12, 2022, 04:27 PM ISTUpdated : Mar 12, 2022, 09:02 PM IST
Election 2022 ಪಂಚ ರಾಜ್ಯ ಸೋಲಿನ ಹೊಣೆ ಹೊತ್ತು ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ಸಾಧ್ಯತೆ, ಕಾಂಗ್ರೆಸ್ ಗರಂ!

ಸಾರಾಂಶ

ಪಂಜ ರಾಜ್ಯ ಚುನಾವಣೆಯಲ್ಲಿ ಹೀನಾ ಸೋಲು ಕಂಡ ಕಾಂಗ್ರೆಸ್ ಮಾ.13ಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಭೆ, ಮಹತ್ವದ ನಿರ್ಧಾರ ಕಾಂಗ್ರೆಸ್ ನಾಯಕತ್ವ ಕೊರತೆ ನೀಗಿಸುವ ಕುರಿತು ಚರ್ಚೆ  

ನವದೆಹಲಿ(ಮಾ.12): ಪಂಚ ರಾಜ್ಯಗಳ ಚುನಾವಣೆಯಲ್ಲಿ(Five State Election 2022) ಬಿಜೆಪಿ ನಾಲ್ಕು ರಾಜ್ಯ ಗೆದ್ದುಕೊಂಡರೆ, ಆಮ್ ಆದ್ಮಿ ಪಾರ್ಟಿ ಹೊಸದಾಗಿ ಮತ್ತೊಂದು ರಾಜ್ಯಕ್ಕೆ ವಿಸ್ತರಣೆಯಾಗಿದೆ. ಆದರ ಕಾಂಗ್ರೆಸ್(Congress) ಇದ್ದ ಅಧಿಕಾರವನ್ನೂ ಕಳೆದುಕೊಂಡಿತು, ಇನ್ನುಳಿದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತಾಯಿತು. ಈ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕರು ನಾಳೆ(ಮಾ.13) ಸಭೆ ಸೇರಿ ಸೋಲಿನ ಕುರಿತು ಮಹತ್ವದ ಚರ್ಚೆ ನಡೆಸಲು ನಿರ್ಧರಿಸಿದೆ. ಪಂಚ ರಾಜ್ಯಗಳ ಸೋಲಿನ ಹೊಣೆ ಹೊತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.

ಮಾರ್ಚ್ 13ರ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕಾಂಗ್ರೆಸ್ ಹಿರಿಯ ನಾಯಕರನ್ನೊಳಗೊಂಡ ಸಮಿತಿ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi), ನಾಯಕ ರಾಹುಲ್ ಗಾಂಧಿ(Rahul Gandhi) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2019ರಲ್ಲಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಸೋಲಿನ ಹೊಣೆ ಹಾಗೂ ಗಾಂಧಿ ನಾಯಕತ್ವ ವಿರುದ್ಧ ಅಸಮಾಧಾನ ಕಾರಣ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂದಿ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಊಹಾಪೋಹಗಳನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ನಿರಾಕರಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ರಾಜೀನಾಮೆ ಸುದ್ದಿ ಆಧಾರ ರಹಿತವಾಗಿದೆ. ಈ ರೀತಿ ಯಾವುದೇ ನಿರ್ಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

ವ್ಯಕ್ತಿಯ ವಿಶಿಷ್ಠ ಶಪಥ: ಯೋಗಿ ಮತ್ತೆ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಗಡ್ಡಕ್ಕೆ ಕತ್ತರಿ

ಪಂಚ ರಾಜ್ಯಗಳ ಚುನಾವಣೆಗಳ ಸೋಲಿನ ಕಾರಣ, ಅದರಲ್ಲೂ ಮುಖ್ಯವಾಗಿ ಪಂಜಾಬ್ ಕಳೆದುಕೊಳ್ಳಲು ಕಾರಣವನ್ನು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ರಾಜಕೀಯ ಪಂಡೀತರು, ಜನಸಾಮಾನ್ಯರು ಸೇರಿದಂತೆ ಬಹುತೇಕರು ಕಾಂಗ್ರೆಸ್ ನಾಯಕತ್ವ ಕೊರತೆ ಎದುರಿಸುತ್ತಿದೆ ಎಂದಿದ್ದಾರೆ. ಹೀಗಾಗಿ ಮುಂಬರವು ಚುನಾವಣೆಗಳಲ್ಲಿ ಕಾಂಗ್ರೆಸ್ ಎದರಿಸಲು ಸೂಕ್ತ ನಾಯಕತ್ವ ನೀಡುವ ಕುರಿತು ಚರ್ಚೆಯಾಗಲಿದೆ.

ಉತ್ತರ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಪ್ರಿಯಾಂಕಾ ವಾದ್ರಾ 403 ಸ್ಥಾನಗಳ ಪೈಕಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಶೇಕಡಾ 2.4 ರಷ್ಟು ಮತಗಳಿಕೆ ಪಡೆದಿದೆ. ಈ ಎಲ್ಲಾ ಅಂಶಗಳನ್ನು ಕಾಂಗ್ರೆಸ್ ಚರ್ಚಿಸಲಿದೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಹಿರಿಯ ನಾಯಕರ ಗುಂಪು ಮತ್ತೆ ನಾಯಕತ್ವ ಬದಲಾವಣೆಗೆ ಸೂಚನೆ ನೀಡಿದೆ. ಹೀಗಾಗಿ ಗಾಂಧಿ ಪರಿವಾರ ಹೊರತು ಮತ್ತೊಬ್ಬ ಸೂಕ್ತ ನಾಯಕನಿಗೆ ಪಟ್ಟ ಕಟ್ಟುವ ಕುರಿತು ಕಾಂಗ್ರೆಸ್ ಚರ್ಚೆ ನಡೆಸಲಿದೆ.

Interesting facts about UP elections: ಠೇವಣಿ ಕಳೆದುಕೊಂಡ 'ಕೈ'ಗಳೆಷ್ಟು

ಪಂಚ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಬಂಡಾಯ ನಾಯಕರ ತುರ್ತು ಸಭೆ
ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋತ ಬೆನ್ನಲ್ಲೇ, ಗುಲಾಂ ನಬೀ ಆಜಾದ್‌ ನಿವಾಸದಲ್ಲಿ ಪಕ್ಷದ ಹಿರಿಯ ಭಿನ್ನಮತೀಯ ನಾಯಕರು ಶುಕ್ರವಾರ ಸಭೆ ಸೇರಿದ್ದಾರೆ. ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌, ಮನೀಶ್‌ ತಿವಾರಿ ಆಜಾದ್‌ ನಿವಾಸಕ್ಕೆ ಆಗಮಿಸಿದ್ದರು. ಜೊತೆಗೆ ಆನಂದ ಶರ್ಮಾ ಕೂಡಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2 ವರ್ಷಗಳ ಹಿಂದೆಯೇ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್‌ ಪಕ್ಷ ಬಲಪಡಿಸಲು ಪೂರ್ಣಪ್ರಮಾಣದ ನಾಯಕತ್ವ ಹಾಗೂ ವ್ಯಾಪಕ ಸಾಂಸ್ಥಿಕ ಬದಲಾವಣೆ ತರುವಂತೆ ಇವರು ಪತ್ರ ಬರೆದಿದ್ದರು. ಉತ್ತರಪ್ರದೇಶದಲ್ಲಿ ಹೈವೋಲ್ಟೇಜ್‌ ಪ್ರಚಾರ ನಡೆಸಿಯೂ ಪ್ರಿಯಾಂಕಾ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಭಿನ್ನಮತೀಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪಂಚ ರಾಜ್ಯ​ಗಳ ಚುನಾ​ವಣಾ ಫಲಿ​ತಾಂಶ​ಗ​ಳಿಂದ ಕಾಂಗ್ರೆಸ್‌ ಕುಗ್ಗಿದೆ ಎಂಬುದು ಸುಳ್ಳು. ಕಾಂಗ್ರೆಸ್‌ ಮೇಲೆ ದೇಶದ ಜನರ ವಿಶ್ವಾಸ ಕಡಿಮೆ ಆಗು​ತ್ತಿ​ರುವ ಬಗ್ಗೆ ಪಕ್ಷದ ನಾಯ​ಕರು ಚರ್ಚೆ ಮಾಡು​ತ್ತಾರೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಕ್ರಿಯೆ ನೀಡಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪಂಚ​ ರಾ​ಜ್ಯ​ಗ​ಳಲ್ಲಿ ಕಾಂಗ್ರೆಸ್‌ಗೆ ಹಿನ್ನೆ​ಡೆ​ಯಾ​ಗಿರುವುದು ನಿಜ. ಈ ಫಲಿ​ತಾಂಶ 2023ರ ಚುನಾ​ವ​ಣೆಯ ಮೇಲೆ ಪರಿ​ಣಾಮ ಬೀರು​ವು​ದಿಲ್ಲ. ಆದರೆ, 2024ರ ಚುನಾ​ವ​ಣೆ​ಯಲ್ಲಿ ಜನತೆ ಬದ​ಲಾ​ವ​ಣೆ​ಯನ್ನು ಬಯ​ಸ​ಲಿ​ದ್ದಾರೆ ಎಂಬ ಮುನ್ಸೂ​ಚನೆ ನನೆಗೆ ಕಾಣಿ​ಸು​ತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!