ಲಖ್ನೋ(ಮಾ.12): ಬರೀ ಸಿನಿಮಾ ಮಂದಿಗೆ ಮಾತ್ರವಲ್ಲ ರಾಜಕಾರಣಿಗಳಿಗೂ ಅಸಂಖ್ಯಾತ ಅಭಿಮಾನಿಗಳಿರುತ್ತಾರೆ. ಅದರಲ್ಲೂ ಕೆಲವು ಅಭಿಮಾನಿಗಳಂತು ತುಂಬಾ ವಿಭಿನ್ನ. ಕೆಲವು ಅಭಿಮಾನಿಗಳ ಅಭಿಮಾನ ಊಹೆಗೂ ನಿಲುಕಲಾಗದು. ತುಂಬಾ ತೀವ್ರವಾದುದು ತನ್ನ ನೆಚ್ಚಿನ ನಾಯಕ ಗೆಲ್ಲಬೇಕು ಎಂದು ಪಣ ತೊಡುವ ಇವರು ಇದಕ್ಕಾಗಿ ಗಡ್ಡ ಬಿಡುವುದು ಕೂದಲು ಬಿಡುವುದು ನೂರೆಂಟು ದೇಗುಲಗಳಲ್ಲಿ ಹರಕೆ ಹೊರುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಹಾಗೆಯೇ ಇಲ್ಲೊಬ್ಬರು ಬಿಜೆಪಿ ಹಾಗೂ ಬಿಜೆಪಿಯ ಇಬ್ಬರು ಡಬ್ಬಲ್ ಇಂಜಿನ್ ಖ್ಯಾತಿಯ ನಾಯಕರಾದ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ಈಗ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ನಂತರವೇ ಗಡ್ಡ ಬೋಳಿಸಲು ನಿರ್ಧರಿಸಿದ್ದಾರೆ.
ಉತ್ತರಪ್ರದೇಶದ ಶಹಜಹಾನ್‌ಪುರ (Shahjahanpur) ಜಿಲ್ಲೆಯ ಸದರ್ ಬಜಾರ್ ಪ್ರದೇಶದ ಮೊಹಲ್ಲಾ ಝಂಡಾ ಕಲಾನ್ (Mohalla Jhanda Kalan) ನಿವಾಸಿಯಾಗಿರುವ ರಾಜಾರಾಂ (Rajaram) ಅವರೇ ಈ ವಿಶೇಷ ಅಭಿಮಾನಿ. ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದರು.
Interesting facts about UP elections: ಠೇವಣಿ ಕಳೆದುಕೊಂಡ 'ಕೈ'ಗಳೆಷ್ಟು
ರಾಜಾರಾಂ ಈ ಹಿಂದೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ನಂತರ ಗಡ್ಡ ಮತ್ತು ತಲೆ ಕೂದಲನ್ನು ಕತ್ತರಿಸಿದ್ದರು. ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ನಂತರವೇ ಗಡ್ಡ ಕತ್ತರಿಸಲು ನಿರ್ಧರಿಸಿದ್ದಾರೆ. ಯೋಗಿ ಮುಖ್ಯಮಂತ್ರಿಯಾದರೆ ಅವರ ದಯನೀಯ ಸ್ಥಿತಿಗೆ ಮರುಗಿ ಸರಕಾರ ವಸತಿ, ಪಿಂಚಣಿ ಮತ್ತಿತರ ಸೌಲಭ್ಯ ಕಲ್ಪಿಸಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದಾರೆ. ಬಡವರ್ಗದ ರಾಜಾರಾಂ ಚಮ್ಮಾರ (cobbler)ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಅವರ ಪತ್ನಿ ತೀರಿ ಹೋಗಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ಹಿರಿಯ ಮಗ ದೀಪು (Deepu) ವಿಕಲಚೇತನ ಆದ್ದರಿಂದಲೇ ವೃದ್ಧಾಪ್ಯ ಇವರನ್ನು ಕಾಡುತ್ತಿದ್ದರೂ ವಿಕಲಚೇತನ ಮಗನಿಗೆ ಆಸರೆಯಾಗಿದ್ದಾರೆ.
ರಾಜಾರಾಂ ಅವರ ಕಿರಿಯ ಮಗ ಪ್ರದೀಪ್(Punjab) ಪಂಜಾಬ್‌ನಲ್ಲಿ (Punjab) ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಆತನ ನೆರವಿನಿಂದಾಗಿ ಈ ತಂದೆ-ಮಗನ ಜೀವನ ನಿರ್ವಹಣೆ ಆಗುತ್ತಿದೆ. ಆದರೆ ರಾಜಾರಾಂ ಅವರು ಯಾವುದೇ ಸರ್ಕಾರದಿಂದ ಯಾವುದೇ ಯೋಜನೆಯ ಲಾಭವನ್ನು ಕೇಳಿಲ್ಲ ಅಥವಾ ಸರ್ಕಾರಿ ಯಂತ್ರವು ಯಾವುದೇ ಫಲಾನುಭವಿ ಯೋಜನೆಗೆ ಅವರನ್ನು ಆಯ್ಕೆ ಮಾಡಲಿಲ್ಲ. ಮೋದಿ ಮತ್ತೆ ಪ್ರಧಾನಿಯಾದ ನಂತರ ಗಡ್ಡ ಕತ್ತರಿಸಿದ ಅವರು ನಂತರ ಯೋಗಿ ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ ಗಡ್ಡ ತೆಗೆಯುತ್ತೇನೆ ಎಂದು ಶಪಥ ಮಾಡಿದ್ದು ಅವರ ಈ ಶಪಥ ಈಗ ಈಡೇರಲಿದೆ ಎಂದು ಹೇಳಿದರು.
Election Result 2022 ಮಾಯಾವತಿ, ಓವೈಸಿಗೆ ಪದ್ಮಭೂಷಣ, ಭಾರತ ರತ್ನ ನೀಡಿ ಎಂದ ಶಿವಸೇನೆ!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಸತತ 2ನೇ ಬಾರಿ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. 255 ಸ್ಥಾನಗಳನ್ನು ಗೆದ್ದ ಬಿಜೆಪಿ ಹೊಸ ಇತಿಹಾಸ ರಚಿಸಿದೆ. ರಾಜಭವನದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ ಆದಿತ್ಯಾಥ್, ನಿನ್ನೆ ರಾಜೀನಾಮೆ ಪತ್ರ ನೀಡಿದ್ದಾರೆ. ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ, ಈಗ ಹೊಸ ಸಂಪುಟ ರಚಿಸಲಿದ್ದಾರೆ. ಮಾ.18ರ ಹೋಳಿ ಹುಣ್ಣಿಮೆಗೂ ಮೊದಲೇ ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಮಾ.14 ಅಥವಾ 15ರಂದು ಲಖನೌದಲ್ಲಿ ದಾಖಲೆಯ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ