
ನವದೆಹಲಿ(ಜ.24): ದೆಹಲಿ ವಿಧಾನಸಭೆ ಚುನಾವಣೆಯನ್ನು ಭಾರತ(ಬಿಜೆಪಿ) ಪಾಕಿಸ್ತಾನ(ಆಪ್) ನಡುವಿನ ಕದನ ಎಂದು ಬಣ್ಣಿಸಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಪಿಲ್ ಮಿಶ್ರಾ ಟ್ವೀಟ್ ವಿರುದ್ಧ ಆಮ್ ಆದ್ಮಿ ಪಾರ್ಟಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್'ನ್ನು ಡಿಲೀಟ್ ಮಾಡುವಂತೆ ಟ್ವಿಟ್ಟರ್‌ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ದೆಹಲಿ ಮುಖ್ಯ ಚುನಾವಣಾಧಿಕಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕಪಿಲ್ ಮಿಶ್ರಾ ಟ್ವೀಟ್ ವಿವಾದಾತ್ಮಕವಾಗಿದೆ ಎಂದು ಹೇಳಿದ್ದರು. ಬಳಿಕ ಈ ಟ್ವೀಟ್'ನ್ನು ಡಿಲೀಟ್ ಮಾಡಿ ಎಂದು ಚುನಾವಣಾ ಆಯೋಗ ಟ್ವಿಟ್ಟರ್‌ಗೆ ಆದೇಶ ನೀಡಿದೆ.
ಕೇಜ್ರಿ ವಿರುದ್ಧ ‘ಚಕ್ ದೇ ಇಂಡಿಯಾ’ ಖ್ಯಾತಿಯ ನಟ ಕಣಕ್ಕೆ: ಒಟ್ಟು 92 ಅಭ್ಯರ್ಥಿಗಳು!
ಅಷ್ಟೇ ಅಲ್ಲದೇ ಮುಖ್ಯ ಚುನಾವಣಾಧಿಕಾರಿಗಳು ಮಾಡೆಲ್ ಟೌನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಪಿಲ್ ಮಿಶ್ರಾಗೆ ಶೋಕಾಸ್ ನೋಟಿಸ್ ಕೂಡ ನೀಡಿದ್ದಾರೆ.
ದೆಹಲಿಯ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಣ ಸ್ಪರ್ಧೆಗೆ ಹೋಲಿಸಿ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ