ರೇಪ್ ಆರೋಪಿ, ಸಂಸದನಿಗೆ ಪ್ರಮಾಣವಚನಕ್ಕೆ ಸಿಕ್ತು 2 ದಿನದ ಪರೋಲ್!

By Suvarna NewsFirst Published Jan 24, 2020, 3:54 PM IST
Highlights

ಪ್ರಮಾಣ ವಚನ ಸ್ವೀಕರಿಸಲು ಸಂಸದನಿಗೆ ಸಿಕ್ತು ಎರಡು ದಿನದ ಪರೋಲ್!| ಪರೋಲ್ ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್| ಜನವರಿ 29ರಂದು ಅಂಸತ್ತು ಪ್ರವೇಶಿಸ್ತಾರೆ ಅತುಲ್ ರೈ

ಅಲಹಾಬಾದ್[ಜ.24]: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ BSP ಸಂಸದ ಅತುಲ್ ರಾಯ್‌ಗೆ ಅಲಹಾಬಾದ್ ಹೈಕೋರ್ಟ್ ಎರಡು ದಿನಗಳ ಪರೋಲ್ ಮಂಜೂರು ಮಾಡಿದೆ. ಅತುಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಮೇಶ್ ಸಿನ್ಹಾ ಜನವರಿ 29ರಂದು ಪೊಲೀಸ್ ಭದ್ರತೆಯೊಂದಿಗೆ ದೆಹಲಿಗೆ ತೆರಳಿ, ಬಳಿಕ 31 ಜನವರಿಯಂದು ಪ್ರಮಾಣ ವಚನ ಸ್ವೀಕರಿಸಿ ಬಳಿಕ ಮರಳಿ ಜೈಲಿಗೆ ಬರಬೇಕೆಂದು ಆದೇಶಿಸಿದ್ದಾರೆ. 

ಪರೋಲ್ ಜಾರಿಗೊಳಿಸಿರುವನ ಹೈಕೋರ್ಟ್ ಸಂಸದ ಅತುಲ್ ರಾಯ್ ಗೆ ಸಂಸತ್ತು ಪ್ರವೇಶಿಸಲು ಹಾಗೂ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಿದೆ. ಇದಕ್ಕೂ ಮೊದಲು ವಿಶೇಷ ನ್ಯಾಯಾಲಯ MPMAL ಅವರ ಮನವಿಯನ್ನು ವಜಾಗೊಳಿತ್ತು ಎಂಬುವುದು ಉಲ್ಲೇಖನೀಯ.

'ರಾಜ್ಯಸಭೆ, ಲೋಕಸಭೇಲಿ ಬ್ರಾಹ್ಮಣರಿಗೆ ನಾಯಕತ್ವ'

ಸಂಸದ ಅತುಲ್ ರಾಯ್ ವಿರುದ್ಧ ವಾರಾಣಸಿಯ ಲಂಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ಅಲಹಾಬಾದ್ ನ MPMAL ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. 2019ರ ಮೇಯಲ್ಲಿ ಅತುಲ್ ರಾಯ್ ವಿರುದ್ಧ FIR ದಾಖಲಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದಾರೆ. ಅವರು ಜೈಲಿನಲ್ಲಿದ್ದುಕೊಂಡೇ 2019ರ ಮೇ 19 ರಂದು ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಘೋಸಿ ಕ್ಷೇತ್ರದಿಂದ BSP ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಹಾಗೂ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಜಾಮೀನು ಸಿಗದ ಹಿನ್ನೆಲೆ ಅವರು ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

BSP ಸಂಸದ ಅತುಲ್ ರಾಯ್ ವಿರುದ್ಧ ಬಲಿಯಾ ಜಿಲ್ಲೆಯ ಯುವತಿಯೊಬ್ಬಳು ಬನಾರಸ್ ನ ಲಂಕಾ ಠಾಣೆಯಲ್ಲಿ ಅತ್ಯಾಚಾರ ಹಾಗೂ ಬೆದರಿಕೆ ಹಾಕಿರುವ ಆರೋಪದಡಿ ದೂರು ನೀಡಿದ್ದಳು. ಅತುಲ್ ರಾಯ್ ಆಮಿಷವೊಡ್ಡಿ ತನ್ನನ್ನು ಅಪಾರ್ಟ್ ಮೆಂಟ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದರೆಂದು ಆರೋಪಿಸಿದ್ದಳು.

ಹೈದರಾಬಾದ್ ಪೊಲೀಸರನ್ನು ನೋಡಿ ಕಲಿರಿ: ಯುಪಿ ಪೊಲೀಸರಿಗೆ ಮಾಯಾವತಿ ಸಲಹೆ!
 

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!