ಕೇರಳ ಕಡಲ ತೀರಕ್ಕೆ ತನ್ನಷ್ಟಕ್ಕೆ ಬಂದು ಬಿದ್ದ ಲಕ್ಷಾಂತರ ಮೀನುಗಳು: ಇದು ಸುನಾಮಿ ಮುನ್ಸೂಚನೆಯೇ ?

Published : Mar 06, 2025, 11:52 AM ISTUpdated : Mar 06, 2025, 01:04 PM IST
ಕೇರಳ ಕಡಲ ತೀರಕ್ಕೆ ತನ್ನಷ್ಟಕ್ಕೆ ಬಂದು ಬಿದ್ದ ಲಕ್ಷಾಂತರ ಮೀನುಗಳು: ಇದು ಸುನಾಮಿ  ಮುನ್ಸೂಚನೆಯೇ ?

ಸಾರಾಂಶ

ಕೇರಳದ ಕಡಲತೀರದಲ್ಲಿ ಲಕ್ಷಾಂತರ ಮೀನುಗಳು ತೇಲಿ ಬಂದಿದ್ದು, ಈ ವಿದ್ಯಮಾನದ ಫೋಟೋಗಳು ವೈರಲ್ ಆಗಿವೆ.ಕೆಲವರು ಇದನ್ನು ಸುನಾಮಿ ಅಥವಾ ಭೂಕಂಪದ ಮುನ್ಸೂಚನೆ ಎಂದು ಬಣ್ಣಿಸಿದ್ದಾರೆ.

ದೇವರ ನಾಡು ಕೇರಳ ಅಪರೂಪದ ಪ್ರಾಕೃತಿಕ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಮೀನುಗಳು ತಮ್ಮಷ್ಟಕ್ಕೆ ತಾವೇ ಸಮುದ್ರ ತೀರಕ್ಕೆ ತೇಲಿಬಂದು ಬಿದ್ದಿದ್ದು, ಇದರ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅಚ್ಚರಿ ಪಟ್ಟಿದ್ದಾರೆ. 

ಈ ವಿದ್ಯಮಾನದ ಹೆಸರೇನು?
ಕೇರಳದ ಕೊಚ್ಚಿಯ ಕಡಲತೀರ ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು, ಸ್ಥಳೀಯರು ಹೀಗೆ ಅಪರೂಪಕ್ಕೆ ಸಿಕ್ಕ ಮೀನುಗಳನ್ನು ತೀರದಿಂದ ಹೆಕ್ಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ಪ್ರಕೃತಿ ವೈಚಿತ್ರ್ಯಕ್ಕೆ ಜನ ಅಚ್ಚರಿ ಪಡುತ್ತಿದ್ದಾರೆ.  ಈ ವಿದ್ಯಮಾನಕ್ಕೆ ಚಕರ ಎಂದು ಕರೆಯಲಾಗುತ್ತಿದ್ದು, ಸಂಭವನೀಯ ಪರಿಸರ ಬದಲಾವಣೆಗಳಿಂದ ಈ ನೈಸರ್ಗಿಕ ವಿದ್ಯಮಾನ ಉಂಟಾಗಿದೆ ಎಂದು ನಂಬಲಾಗಿದೆ. 

ಘಟನೆಗೆ ಕಾರಣ ಏನು?
ಸ್ಥಳೀಯರು ಈ  ವೈಚಿತ್ರ್ಯಕ್ಕೆ 'ಚಕರ' ಎಂಬ ನೈಸರ್ಗಿಕ ವಿದ್ಯಮಾನ ಕಾರಣವೆಂದು ಹೇಳುತ್ತಾರೆ, ಅಲ್ಲಿ ಪೌಷ್ಟಿಕಯತೆಯಿಂದ ಸಮೃದ್ಧವಾದ ನೀರು ಕರಾವಳಿಯ ಬಳಿ ಮೀನುಗಳ ದೊಡ್ಡ ಗುಂಪುಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಅವು ಅನಿರೀಕ್ಷಿತವಾಗಿ ದೊಡ್ಡ ಪ್ರಮಾಣದಲ್ಲಿ ದಡಕ್ಕೆ ಹಾರುತ್ತವೆ. ಈ ಘಟನೆಯು ಸ್ಥಳೀಯರು ಮತ್ತು ಪರಿಸರ ತಜ್ಞರಿಬ್ಬರನ್ನೂ ಅಚ್ಚರಿಗೊಳಿಸಿದೆ.

ತೀರದತ್ತ ಬರುತ್ತಿದೆ ದೈತ್ಯ ಗಾತ್ರದ ಮಂಜುಗಡ್ಡೆ: ಕ್ಯಾಮರಾದಲ್ಲಿ ಸೆರೆ ಆಯ್ತು ಅಪರೂಪದ ದೃಶ್ಯ

ಮೀನು ಸಂಗ್ರಹಿಸುವ ಮಾರಾಟ ಮಾಡುವ ಕೆಲವು ಸ್ಥಳೀಯರು ಈ ಹಠಾತ್ ಮೀನುಗಳ ಒಳಹರಿವನ್ನು ಒಂದು ವರದಾನವೆಂದು ಪರಿಗಣಿಸಿದ್ದಾರೆ. ಆದರೆ  ಇತರರು ಇಂತಹ ಪ್ರಾಕೃತಿಕ ವೈಚಿತ್ರ್ಯವೂ ಮುಂದೆ ನಡೆಯಲಿರುವ ಸಂಭಾವನೀಯ ಪ್ರಕೃತಿ ವಿಕೋಪದ ಮುನ್ಸೂಚನೆ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ.

ಆದರೆ ಈ ಘಟನೆಯ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿ ಈ ಘಟನೆಯನ್ನು ಬಣ್ಣಿಸಿದ್ದಾರೆ. ಏನೋ ಭಯಾನಕವಾದುದು ಶೀಘ್ರದಲ್ಲೇ ಸಂಭವಿಸಲಿದೆ ಎಂದು ಒಬ್ಬರು ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ವಿದ್ಯಮಾನ ಜಪಾನ್‌ನಲ್ಲೂ ಆಗಿತ್ತು. ಜಪಾನಿ ಸಂಸ್ಕೃತಿಯಲ್ಲಿ ಈ ರೀತಿ ಘಟನೆಗಳು ಕಂಡು ಬಂದರೆ ಅದನ್ನು ಸುನಾಮಿ ಅಥವಾ ಭೂಕಂಪನದ ಮುನ್ಸೂಚನೆ ಎಂದು ನಂಬಲಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಇದಕ್ಕೆ ಕಾರಣ ಏನಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಮೆಕ್ಸಿಕೋದಲ್ಲೂ ಕೂಡ ಇದೇ ರೀತಿ ಪ್ರಾಕೃತಿಕ ವಿಕೋಪ ಸಂಭವಿಸುವ ಮುನ್ಸೂಚನೆ ಎಂದು ನಂಬುತ್ತಾರೆ ಎಂದು ಹೇಳಿದ್ದಾರೆ. 

Sun Halo: ಸೂರ್ಯನ ಸುತ್ತ ಉಂಗುರ ಸಂಭವಿಸೋದೇಕೆ? ಅಪರೂಪದ ವಿದ್ಯಮಾನದ ಬಗ್ಗೆ ಇಲ್ಲಿದೆ ವಿವರ..

ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ..

 

ಆದರೆ ಕೆಲ ಮೂಲಗಳ ಪ್ರಕಾರ ಇದು ಹಳೆ ವೀಡಿಯೋ ಎನ್ನಲಾಗುತ್ತಿದ್ದು, ಈಗ ಮತ್ತೆ ವೈರಲ್ ಆಗುತ್ತಿದೆ. ಕೆಲವರು ಇದು ಈಗ ನಡೆದಿದೆ ಎಂದು ಭಾವಿಸಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ