ಸ್ವಿಮ್ಮಿಂಗ್‌ ಪೂಲ್‌ನಲ್ಲಿ 72 ವರ್ಷದ ಮುದುಕನ ಮೇಲೆ ಹಾರಿದ ಯುವಕ, ವೃದ್ಧ ಸಾವು!

By Santosh NaikFirst Published Apr 25, 2023, 5:07 PM IST
Highlights

ಸ್ವಿಮ್ಮಿಂಗ್‌ ಪೂಲ್‌ನಲ್ಲಿ ವೃದ್ಧನ ಮೇಲೆ ಯುವಕನೊಬ್ಬ ಹಾರಿದ್ದರಿಂದ 72 ವರ್ಷದ ಮುದುಕ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಮೊಮ್ಮಗನನ್ನು ಕರೆದುಕೊಂಡು ಹೋಗಲು ಬಂದಿದ್ದ ಅಜ್ಜನಿಗೆ ವ್ಯಕ್ತಿ ಡಿಕ್ಕಿ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ವೃದ್ಧ ಸಾವು ಕಂಡಿದ್ದಾನೆ ಎನ್ನಲಾಗಿದೆ.

ಮುಂಬೈ (ಏ.25): ಸ್ವಿಮ್ಮಿಂಗ್‌ ಪೂಲ್‌ನಲ್ಲಿ 20 ವರ್ಷದ ಯುವಕಮೋರ್ವ, 72 ವರ್ಷದ ಮುದುಕನ ಮೇಲೆ ಹಾರಿದ್ದರಿಂದ ವೃದ್ಧ ಸಾವು ಕಂಡ ಘಟನೆ ನಡೆದಿದೆ. ಘಟನೆಯ ಹಿನ್ನಲೆಯಲ್ಲಿ ಯುವಕರ ವಿರುದ್ಧ ಪೊಲೀಸರು ಕೇಸ್‌ ಕೂಡ ದಾಖಲು ಮಾಡಿದ್ದಾರೆ. ಗೋರೇಂಗಾಂವ್‌ ಪ್ರದೇಶದ ಓಜೋನ್‌ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮೃತ ವ್ಯಕ್ತಿಯನ್ನು ವಿಷ್ಣು ಸಮಂತ್‌ ಎಂದು ಗುರುತಿಸಲಾಗಿದೆ. ಅವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದಾಗ, 20 ವರ್ಷದ ವ್ಯಕ್ತಿಯೊಬ್ಬ ಎತ್ತರದಿಂದ ಸ್ವಿಮ್ಮಿಂಗ್‌ ಪೂಲ್‌ಗೆ ಹಾರಿದ್ದಾನೆ. ಈ ವೇಳೆ ಆತ ನೇರವಾಗಿ ಕೆಳಗಿದ್ದ ವಿಷ್ಣು ಸಮಂತ್‌ ಅವರ ಮೇಲೆ ಬಿದ್ದಿದ್ದಾನೆ. ಆತ ಬಿದ್ದ ರಭಸಕ್ಕೆ ವಿಷ್ಣು ಸಮಂತ್‌ ಅವರ ಕುತ್ತಿ ಮುರಿದು ಹೋಗಿದ್ದಲ್ಲದೆ, ದೇಹಲದ ಇತರ ಭಾಗಕ್ಕೂ ಗಂಭೀರ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ತಮಗೆ ತಿಳಿದು ಅಥವಾ ತಿಳಿಯದೆಯೋ ವೃದ್ಧನ ಪ್ರಾಣ ತೆಗೆದ ಯುವಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ವೃದ್ಧನ ಪತ್ನಿಯ ದೂರಿನ ಮೇರೆಗೆ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿದ್ದವರ ಮತ್ತು ಈಜುಕೊಳದ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ಸ್ವಿಮ್ಮಿಂಗ್ ಪೂಲ್‌ನ ವರದಿಯ ಪ್ರಕಾರ, ಸಮಂತ್ ತನ್ನ 14 ವರ್ಷದ ಮೊಮ್ಮಗ ನೀಲ್ ಅವರೊಂದಿಗೆ ಸಿದ್ಧಾರ್ಥ್ ನಗರದ ಓಝೋನ್ ಪೂಲ್‌ಗೆ ಈಜಲು ಹೋಗಿದ್ದರು. ಪ್ರತಿದಿನ ಸಂಜೆ 5 ರಿಂದ 6 ಗಂಟೆ ಸುಮಾರಿಗೆ ಅವರು ಇಲ್ಲಿ ಈಜಲು ಬರುತ್ತಿದ್ದರು. ಘಟನೆ ನಡೆದ ದಿನ ಕೂಡ ನಿಗದಿತ ಸಮಯಕ್ಕೆ ಸ್ವಿಮ್ಮಿಂಗ್‌ ಪೂಲ್‌ ತಲುಪಿ ಈಜಲು ಇಳಿದಿದ್ದರು.

ಬಾಲ್ಯದಲ್ಲಿ ನಮ್ಮನ್ನು ಅಚ್ಚರಿಗೆ ನೂಕಿದ್ದ 'ಸರ್ಕಸ್‌' ಪಿತಾಮಹ ಜೆಮಿನಿ ಶಂಕರನ್‌ ವಿಧಿವಶ!

ಈ ಹಂತದಲ್ಲಿ ಈಜುಕೊಳದ ಎತ್ತರದ ಬಾರ್‌ ಮೇಲಿಂದ ಯುವಕನೊಬ್ಬ ಸ್ವಿಮ್ಮಿಂಗ್‌ ಪೂಲ್‌ಗೆ ಡೈವ್‌ ಮಾಡುವ ಪ್ರಯತ್ನ ಮಾಡಿದ್ದಾನೆ. ಕೆಳಗೆ ನಿಂತ ವೃದ್ಧನನ್ನೂ ಈತ ಗಮನಿಸಿರಲಿಲ್ಲ. ನೇರವಾಗಿ ವೃದ್ಧನ ಕುತ್ತಿಗೆಯ ಮೇಲೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ನೀಲ್ ತನ್ನ ಅಜ್ಜಿಗೆ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವಿಷ್ಣು ಸಮಂತ್ ಅವರನ್ನು ನೋಡಿದ ಪೂಲ್ ಸಿಬ್ಬಂದಿ ಕೂಡಲೇ ಅವರನ್ನು ಕಪಾಡಿಯಾ ಆಸ್ಪತ್ರೆಗೆ ಕರೆದೊಯ್ದರು. ಇಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ಕಾನೂನು ಹೇಳೋದೇನು: ಒಬ್ಬ ವ್ಯಕ್ತಿಯು ನಿರ್ಲಕ್ಷ್ಯ ಅಥವಾ ಉದ್ಧಟತನದಿಂದ ಸಾವಿಗೆ ಕಾರಣವಾದಾಗ, ಅಂತಹ ಪ್ರಕರಣದಲ್ಲಿ ಅಪರಾಧಿಯ ವಿರುದ್ಧ ನರಹತ್ಯೆ ಅಥವಾ ಕೊಲೆಯ ಕಲಂ ಅನ್ವಯಿಸುವುದಿಲ್ಲ. ಅಂತಹ ಪ್ರಕರಣಗಳಲ್ಲಿ, ತಪ್ಪಿತಸ್ಥ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆಯಾಗುತ್ತದೆ, ಅದು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡ ವಿಧಿಸುವ ಅವಕಾಶವೂ ಇದೆ.

click me!