
ಶಿಮ್ಲಾ: ಅಟ್ಟಿಸಿಕೊಂಡು ಬಂದ ಮಂಗಗಳಿಂದ ತಪ್ಪಿಸಿಕೊಂಡು ಓಡುವ ವೇಳೆ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ. 19 ವರ್ಷದ ಹಿಮಾಂಶಿ ಮೃತ ಯುವತಿ. ಈಕೆ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ಹೋಗಿದ್ದಾಳೆ. ಈ ವೇಳೆ ಆಕೆಯನ್ನು ಮಂಗಗಳು ಅಟ್ಟಿಸಿಕೊಂಡು ಬಂದಿದ್ದು, ಮಂಗಗಳಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ಅಚಾನಕ್ ಆಗಿ ಮನೆಯ ಮೂರನೇ ಮಹಡಿಯಿಂದ ಹಿಮಾಂಶು ಕೆಳಗೆ ಬಿದ್ದಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಐಜಿಎಂಸಿ (IGMC) ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು, ವೈದ್ಯರು ಆಕೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದರು. ಶಿಮ್ಲಾ ನಗರದ ಹೊರವಲಯದ ದಂಡಾ ಎಂಬಲ್ಲಿ ಈ ಅನಾಹುತ ನಡೆದಿದೆ.
ಈ ಪ್ರದೇಶದಲ್ಲಿ ಮಂಗಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದ್ದು, ಜನ ಓಡಾಡಲು ಕಷ್ಟಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಅರಣ್ಯ ಇಲಾಖೆ ಹಾಗೂ ಶಿಮ್ಲಾ (Shimla) ಮುನ್ಸಿಪಲ್ ಮಂಗಗಳ ಹಿಡಿಯುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನ ದೂರಿದ್ದಾರೆ.
ಮನೆಯಲ್ಲಿ ಸಾಕಿದ್ದ ನಾಯಿ, ಬೆಕ್ಕುಗಳನ್ನೇ ಕೊಲ್ಲುವ ವಾನರ ಸೇನೆ:
ಕೊಡಗಿನ ಕೂಡಿಗೆ ವ್ಯಾಪ್ತಿಯಲ್ಲಿ ಮಂಗಗಳ ಗುಂಪಿನ ಕಾಟಕ್ಕೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನರಕ ಯಾತನೆ ಅನುಭವಿಸುವಂತೆ ಆಗಿದೆ. ಪ್ರತಿನಿತ್ಯ ಇಲ್ಲಿನ ಮುಖ್ಯ ರಸ್ತೆಯಲ್ಲಿ ಅಡ್ಡಾಡುವ ಮಂಗಗಳ ಗುಂಪು ಕೂಡಿಗೆ ಸರ್ಕಲ್ ವ್ಯಾಪ್ತಿಯಲ್ಲಿನ ಹೋಟೆಲ್, ದಿನಸಿ ಅಂಗಡಿ ಹಾಗೂ ಬೇಕರಿಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಬೇಕರಿಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಓಡುತ್ತವೆ. ಕೈಗೆ ಸಿಕ್ಕ ವಸ್ತುಗಳ ಎತ್ತಿಕೊಂಡು ಓಡಿದರೆ ಪರವಾಗಿಲ್ಲ. ಅಂಗಡಿ ಮುಂಗಟ್ಟುಗಳ ಮುಂಭಾಗ ನಿಂತ ಸಾರ್ವಜನಿಕರ ಮೇಲೂ ದಾಳಿ ಮಾಡಿ, ಕಚ್ಚಿ ಗಾಯಗೊಳಿಸುತ್ತಿವೆ. ಜೊತೆಗೆ ವಾಸದ ಮನೆಗಳಿಗೂ ನುಗ್ಗುವ ಅವುಗಳು ಜನರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿವೆ. ಇವುಗಳನ್ನು ಓಡಿಸಲು ಪ್ರಯತ್ನಿಸುವ ಜನರ ಮೇಲೆ ಅಪಾಯಕಾರಿಯಾಗಿ ಅಟ್ಯಾಕ್ ಮಾಡುತ್ತಿವೆ. ಅಲ್ಲದೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೂ ದಾಳಿ ಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡುವುದು ದುಸ್ಥರ ಎನ್ನುವಂತಾಗಿದೆ.
ಮದುವೆ ಶಾಸ್ತ್ರ ನಡೀತಿದ್ದಾಗ 'ಕಪಿಚೇಷ್ಟೆ', ವಾನರನ ದಾಂಧಲೆಗೆ ವಧು-ವರರು ಸುಸ್ತೋ ಸುಸ್ತು!
ಆಂಧ್ರಪ್ರದೇಶದಲ್ಲಿ ನಡೆದ ಮದುವೆ (Marriage)ಯೊಂದರಲ್ಲಿ ಮದ್ವೆ ಶಾಸ್ತ್ರಗಳಿಗೆ ಅಡ್ಡಿಯಾಗಿದ್ದು ಸ್ನೇಹಿತರು, ಸಂಬಂಧಿಕರು ಯಾರೂ ಅಲ್ಲ. ಬದಲಿಗೆ ಒಂದು ಕಪಿ (Monkey). ಹೌದು ಅಚ್ಚರಿ ಅನಿಸಿದರೂ ಇದು ನಿಜ. ಮಂಟಪದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ಕೋತಿಯೊಂದು ವರ ಮತ್ತು ವಧುವಿನ ತಲೆಯ ಮೇಲೆ ಹಾರಿ ಹೋಗಿದೆ. ಎಲ್ಲಿಂದಲೋ ಎಂಟ್ರಿ ಕೊಟ್ಟ ಕೋತಿ ಮದುವೆಯ ಸಂಭ್ರಮವನ್ನೇ ಹಾಳು ಮಾಡಿದೆ. ಸದ್ಯ ಕಪಿಚೇಷ್ಟೆಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ.
Viral Video: ನಿತ್ಯ ಬಾಳೆಹಣ್ಣು ಕೊಡುತ್ತಿದ್ದ ವೃದ್ಧ ಸಾವು; ಮೃತದೇಹಕ್ಕೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಮಂಗ!
ಮಂಟಪದಲ್ಲಿ ವಧು-ವರರು (Bride-bridegroom) ಪರಸ್ಪರ ಎದುರು-ಬದುರು ಕುಳಿತಿರುತ್ತಾರೆ. ಇಬ್ಬರೂ ತಲೆಯ ಮೇಲೆ ಪರಸ್ಪರ ಅಕ್ಷತೆಯನ್ನು ಹಾಕಿಕೊಳ್ಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೋತಿ ವಧು-ವರರ ಇಬ್ಬರ ತಲೆಯ (Head) ಮೇಲೆ ಹಾರಿ ಹೋಗುತ್ತದೆ. ಕೋತಿಯ ಹಠಾತ್ ದಾಳಿಗೆ ಇಬ್ಬರೂ ದಂಗಾಗುತ್ತಾರೆ. ಅದರಲ್ಲೂ ವರನು ಒಮ್ಮೆಗೇ ಕಕ್ಕಾಬಿಕ್ಕಿಯಾಗುತ್ತಾನೆ. ಕೋತಿಯ ದಿಢೀರ್ ಆಗಮನದಿಂದ ವಧು-ವರರು ಇಬ್ಬರೂ ಗಾಬರಿಯಾಗುವುದನ್ನು ವೀಡಿಯೋದಲ್ಲಿ ನೋಡಬಹುದು. ಇಬ್ಬರ ತಲೆಗೂ ಹಾರಿ ಕೋತಿ ಅಕ್ಕಿಯನ್ನು ಹೆಕ್ಕಿ ಕೋತಿ ಅಲ್ಲಿಂದ ಹೊರಟು ಹೋಗುತ್ತದೆ.
ಬೀದಿ ನಾಯಿಗಳಿಂದ ನಾಯಿಮರಿ ರಕ್ಷಿಸಿ ಮಗುವಂತೆ ಸಲಹುವ ಕೋತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ