ಮದುವೆಯಲ್ಲಿ ವೃದ್ಧ ಸಹೋದರರ ಕಮಾಲ್: ಬಡೇ ಮಿಯಾ ಚೋಟ ಮೀಯಾ ವೈರಲ್

Published : Jan 18, 2023, 12:16 PM ISTUpdated : Jan 18, 2023, 12:21 PM IST
ಮದುವೆಯಲ್ಲಿ ವೃದ್ಧ ಸಹೋದರರ ಕಮಾಲ್:  ಬಡೇ ಮಿಯಾ ಚೋಟ ಮೀಯಾ ವೈರಲ್

ಸಾರಾಂಶ

ಹಿರಿಯ ವಯಸ್ಸಿನ ಸಹೋದರರಿಬ್ಬರು ಮದುವೆ ಮನೆಯಲ್ಲಿ ಸಖತ್ ಆಗಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೋಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನವದೆಹಲಿ: ಮದುವೆ ಮನೆಯಲ್ಲಿ ಡಾನ್ಸ್ ಮಾಡುವುದೇ ಇತ್ತೀಚಿಗಿನ ದೊಡ್ಡ ಟ್ರೆಂಡ್ ಎನಿಸಿದೆ. ವರ ವಧುವಿನಿಂದ ಆರಂಭಿಸಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ಅಜ್ಜಿ ತಾತ, ಹಾಗೆಯೇ ಹೊಸ ತಲೆಮಾರಿನ ಮಕ್ಕಳು ಮರಿಗಳು ಎಲ್ಲರೂ ಸೇರಿ ಕುಣಿಯುವುದೇ ಈಗ ದೊಡ್ಡ ಸಂಭ್ರಮ ಎನಿಸಿದೆ.  ಇದಕ್ಕಾಗಿ ಡಾನ್ಸರ್‌ಗಳಿಂದ ಕೊರಿಯೋಗ್ರಾಪಿ ಮಾಡಿಸುವುದು ಕೂಡ ಈಗ ಸಾಮಾನ್ಯ. ಹೀಗೆ ಮದುವೆ ಮನೆಯಲ್ಲಿ ಡಾನ್ಸ್ ಮಾಡಿ ಎಲ್ಲರೂ ಸಂಭ್ರಮಿಸುವ ಹಲವರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ.  ಒಮ್ಮೊಮ್ಮೆ ವಧುವರರ ಡಾನ್ಸ್‌ಗಳು ವೈರಲ್ ಆದರೆ ಮತ್ತೆ ಕೆಲವೊಮ್ಮೆ ಹಿರಿಜೀವಗಳ ಡಾನ್ಸ್ ಕೂಡ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇಲ್ಲಿ ಹಿರಿಯ ವಯಸ್ಸಿನ ಸಹೋದರರಿಬ್ಬರು ಮದುವೆ ಮನೆಯಲ್ಲಿ ಸಖತ್ ಆಗಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೋಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

1998ರ ಬಾಲಿವುಡ್ ಸಿನಿಮಾ (Bollywood movie) 'ಬಡೇ ಮಿಯಾ ಚೋಟೆ ಮೀಯಾ' ಸಿನಿಮಾದ ಬಡೇ ಮಿಯಾ ಚೋಟೆ ಮೀಯಾದ ಹಾಡಿಗೆ ಈ ಹಿರಿಯ ಸಹೋದರರಿಬ್ಬರು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಇವರ ಡಾನ್ಸ್ ನೋಡಿದರೆ ವಯಸ್ಸು ಕೇವಲ ನಂಬರ್ ಮಾತ್ರ  ಎಂಬುದು ಸಾಬೀತಾಗುತ್ತಿದೆ.  ಇವರ ಡಾನ್ಸ್‌ ನೋಡಿದರೆ ನೋಡುಗರಿಗೂ ಹೀಗೆ ಡಾನ್ಸ್ ಮಾಡಬೇಕೆನಿಸುತ್ತಿದೆ. ಸಂಗೀತ್ ಹಾಗೂ ಸಾಲ್ವಿ ಎಂಬುವವರು ಈ ವಿಡಿಯೋವನ್ನು ಡಿಸೆಂಬರ್ 9 ರಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು,  ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಹಿರಿಯ ಸಹೋದರರು ಸನ್ ಗ್ಲಾಸ್ ಹಾಕಿಕೊಂಡು ಒಬ್ಬರ ಹೆಗಲಿಗೊಬ್ಬರು ಕೈ ಹಾಕಿಕೊಂಡು ಯುವ ಹೀರೋಗಳಿಗೆ ಕಡಿಮೆ ಇಲ್ಲದಂತೆ ಬಹಳ ಜೋಶ್‌ನಲ್ಲಿ ಬಡೇ ಮಿಯಾ ಚೋಟೆ ಮೀಯಾ (Bade Miyan Chote Miyan) ಜಬರ್ದಸ್ತ್ ಆಗಿ ಡಾನ್ಸ್ ಮಾಡಿದ್ದಾರೆ. 

ಇವಳೇನು ಅರ್ಜುನನ ತಂಗಿಯೇ... ಬಿಲ್ಲಿನಂತೆ ಬಾಗಿ ಕಾಲಿನಲ್ಲೇ ಯುವತಿಯ ಬಿಲ್ಗಾರಿಕೆ

ಈ ವಿಡಿಯೋ ಪೋಸ್ಟ್ ಆದಾಗಿನಿಂದ 1. 4 ಮಿಲಿಯನ್ ಜನ ವೀಕ್ಷಿಸಿದ್ದಾರೆ.  ವಿಡಿಯೋ ನೋಡಿದ ಅನೇಕರು ವಯಸ್ಸು ಕೇವಲ ನಂಬರ್ ಅಷ್ಟೇ ಎಂದು ಕಾಮೆಂಟ್ ಮಾಡಿದ್ದಾರೆ.  ಈ ವಿಡಿಯೋ ನನ್ನ ದಿನವನ್ನು ಉತ್ತಮಗೊಳಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಹೃದಯದ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. 

ಬೀದಿ ನಾಯಿಗಾಗಿ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡ ನಾರಿಯರು... ವಿಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್