ಗಣ್ಯರ ಪೈಕಿ, ಉದ್ಯಮಿಗಳಿಗೆ ಒಂದು ಕಡೆ, ರಾಜಕಾರಣಿಗಳಿಗೆ ಮತ್ತೊಂದು ಕಡೆ, ಚಿತ್ರ ನಟ-ನಟಿಯರಿಗೆ ಒಂದು ನಿರ್ದಿಷ್ಟ ಭಾಗದಲ್ಲಿ, ಕ್ರಿಕೆಟಿಗರಿಗೆ ಇನ್ನೊಂದು ಭಾಗದಲ್ಲಿ - ಹೀಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಅಯೋಧ್ಯೆ (ಜನವರಿ 23, 2024): ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಗಣ್ಯರು, ನಟ-ನಟಿಯರು, ಕ್ರಿಕೆಟ್ ಪಟುಗಳು, ಇತರ ಕ್ರೀಡಾಪಟುಗಳು, ಸಾಧು ಸಂತರು, ರಾಜಕಾರಣಿಗಳು - ಹೀಗೆ ತರಹೇವಾರಿ ಪ್ರಮುಖರು ಸೋಮವಾರ ಅಯೋಧ್ಯೆಗೆ ಭೇಟಿ ನೀಡಿದ್ದರು. ಸುಮಾರು 8 ಸಾವಿರ ಗಣ್ಯರು ನಗರದಲ್ಲಿದ್ದು. ಆದರೆ ಯಾವುದೇ ಅವ್ಯವಸ್ಥೆಗೆ ಆಸ್ಪದ ಸಿಗದ ರೀತಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಾಣಪ್ರತಿಷ್ಠಾಪನೆ ವೇಳೆ ಮಂದಿರದ ಆವರಣದಲ್ಲಿ ಕುರ್ಚಿಗಳನ್ನು ಹಾಕಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಮೋದಿ ಅವರು ರಾಮನ ಪ್ರತಿಷ್ಠಾಪನೆ ಮಾಡುತ್ತಿರುವಾಗ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ನೇರಪ್ರಸಾರ ಮಾಡಲಾಯಿತು. ಗಣ್ಯರ ಪೈಕಿ, ಉದ್ಯಮಿಗಳಿಗೆ ಒಂದು ಕಡೆ, ರಾಜಕಾರಣಿಗಳಿಗೆ ಮತ್ತೊಂದು ಕಡೆ, ಚಿತ್ರ ನಟ-ನಟಿಯರಿಗೆ ಒಂದು ನಿರ್ದಿಷ್ಟ ಭಾಗದಲ್ಲಿ, ಕ್ರಿಕೆಟಿಗರಿಗೆ ಇನ್ನೊಂದು ಭಾಗದಲ್ಲಿ - ಹೀಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸಾಧು ಸಂತರು, ಸ್ವಾಮೀಜಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾರಂಭ ಮುಗಿದ ನಂತರ ಎಲ್ಲರಿಗೂ ಶುಚಿ-ರುಚಿಯಾದ ಊಟ ಉಣಬಡಿಸಲಾಯಿತು ಹಾಗೂ ರಾಮನ ಪ್ರಸಾದವನ್ನು ನೀಡಲಾಯಿತು.
ಇದನ್ನು ಓದಿ: ರಾಮ ಬಂದಾಗಿದೆ, ಇನ್ನು ಎಲ್ಲ ವಿವಾದಗಳಿಗೂ ಅಂತ್ಯ ಹಾಡಿ; ನವಭಾರತ ಉದಯವಾಯ್ತು: ಮೋಹನ್ ಭಾಗವತ್
ಇನ್ನು ಬಹುತೇಕ ಗಣ್ಯರು ಮಂಗಳವಾರವೇ ಅಯೋಧ್ಯೆಗೆ ಲಗ್ಗೆ ಇಟ್ಟಿದ್ದರು. ಮೊದಲೇ ಅವರು ಬರುವುದನ್ನು ಖಚಿತಪಡಿಸಿಕೊಂಡು ಎಲ್ಲರಿಗೂ ಸ್ಟಾರ್ ಹೋಟೆಲ್‌ಗಳಲ್ಲಿ ರೂಂ ಬುಕ್ ಮಾಡಲಾಗಿತ್ತು. ಹೋಟೆಲ್‌ನಿಂದ ಮಂದಿರಕ್ಕೆ ಬರಲು ಕಾರುಗಳನ್ನು ನೀಡಲಾಗಿತ್ತು.
ಹೊತ್ತು ತಂದ ಚಾರ್ಟರ್ಡ್ ವಿಮಾನಗಳಿಗೆ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಹುಹೊತ್ತು ನಿಲ್ಲಲು ಸ್ಥಳಾಭಾವ ಇತ್ತು. ಹೀಗಾಗಿ ಸಮೀಪದ ವಾರಾಣಸಿ, ಲಖನೌ, ಆಗ್ರಾ.. ಹೀಗೆ ಮೊದಲಾದ ಏರ್‌ಪೋರ್ಟ್‌ಗಳಲ್ಲಿ ವಿಮಾನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದನ್ನು ಓದಿ: ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಜೆ ನಿರಾಕರಿಸಿದ ಮ್ಯಾನೇಜರ್, ರಾಜೀನಾಮೆ ನೀಡಿ ಹೊರಬಂದ ರಾಮಭಕ್ತ!