ಇಂದಿನಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ: 400 ಋತ್ವಿಜರಲ್ಲಿ 360 ಮಂದಿ ಕನ್ನಡಿಗರು

Published : Jan 23, 2024, 08:02 AM ISTUpdated : Jan 23, 2024, 08:09 AM IST
ಇಂದಿನಿಂದ  48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ: 400 ಋತ್ವಿಜರಲ್ಲಿ 360 ಮಂದಿ ಕನ್ನಡಿಗರು

ಸಾರಾಂಶ

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಇದರಲ್ಲಿ 360 ಮಂದಿ ಕನ್ನಡಿಗರೇ ಇದ್ದಾರೆ.

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಇದರಲ್ಲಿ 360 ಮಂದಿ ಕನ್ನಡಿಗರೇ ಇದ್ದಾರೆ.

ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ-ವಿಧಾನಗಳು ಇಂದು ಬೆಳಗ್ಗೆ 6ರಿಂದಲೇ ಆರಂಭವಾಗಿದ್ದು ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ಮತ್ತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.  ಇದಕ್ಕೆ ಪೂರಕವಾಗಿ ಬೆಳಗ್ಗೆ ಅರಣಿ ಮಥನದೊಂದಿಗೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಜೆ ನಿರಾಕರಿಸಿದ ಮ್ಯಾನೇಜರ್‌, ರಾಜೀನಾಮೆ ನೀಡಿ ಹೊರಬಂದ ರಾಮಭಕ್ತ!

ಮೊದಲ ದಿನ ಗಣಪತಿ ಹವನ, ಪೂಜೆ ಬಳಿಕ ತತ್ವ ಹವನ ನಡೆಯಲಿದೆ. ತತ್ವಕಲಶ ಪ್ರತಿಷ್ಠಾಪಿಸಿ, ಬೆಳಗ್ಗೆ 10ಕ್ಕೆ ಸ್ವತಃ ಪೇಜಾವರ ಶ್ರೀಗಳು ರಾಮಲಲ್ಲಾನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ದಿನಂಪ್ರತಿ 4 ದಿನಗಳ ಕಾಲ ತಲಾ 2 ಕುಂಡಗಳಲ್ಲಿ ತತ್ವ ಹವನ ನಡೆಯಲಿದೆ. ಜ.24 ರಿಂದ ಪ್ರತಿದಿನ ವಿವಿಧ ತಂತ್ರಗ್ರಂಥಗಳ ಮಹಾಹವನ ನೆರವೇರಲಿದೆ. ನವಗ್ರಹ, ಭೂವರಾಹ ಮಂತ್ರ, ಅಷ್ಟ ಮಹಾಮಂತ್ರ ಸೇರಿ 48 ದಿನ ವಿವಿಧ ಹವನಗಳು ನಡೆಯುತ್ತವೆ.

ಕೊನೆ 5 ದಿನ ಮಹತ್ವ: ಬ್ರಹ್ಮಕಲಶಾಭಿಷೇಕ ಮಾ.10ರ ವರೆಗೆ 48 ದಿನ ನಿರಂತರವಾಗಿ ನಡೆಯಲಿದೆ. ಆದರೆ ಕೊನೇ 5 ದಿನ ಮಹತ್ವದ್ದಾಗಿದ್ದು, ಮಾ.6 ರಿಂದ 10ರವರೆಗೆ ಪ್ರತಿದಿನ 250 ಕಲಶಗಳ ಪ್ರತಿಷ್ಠೆಯಾಗಿ ಅಭಿಷೇಕ ನಡೆಯಲಿದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಯೋಧ್ಯೆಯಿಂದ ಮಾಹಿತಿ ನೀಡಿದ್ದಾರೆ.  ತಿಳಿಸಿದರು.

ರಾಮಲಲ್ಲಾ ಧರಿಸಿದ್ದ ಆಭರಣಗಳ ವಿಶೇಷತೆಗಳೇನು? ಇಲ್ಲಿದೆ ಡೀಟೇಲ್ಸ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ