ಇಂದು ಭಕ್ತರಿಗೆ ತೆರೆಯಲಿದೆ ಅಯೋಧ್ಯೆ ರಾಮಮಂದಿರ: ಶತಮಾನಗಳ ಆಸೆ ಈಡೇರಿಸಿಕೊಳ್ಳುವ ತವಕದಲ್ಲಿ ಭಕ್ತರು

By Kannadaprabha News  |  First Published Jan 23, 2024, 8:27 AM IST

ಬಾಲರಾಮನ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ಸಂಪನ್ನಗೊಂಡ ಬೆನ್ನಲ್ಲೇ ಇಂದಿನಿಂದ ಮಂದಿರ ದರ್ಶನಕ್ಕೆ ಶ್ರೀಸಾಮಾನ್ಯ ಭಕ್ತಾದಿಗಳಿಗೆ ಅವಕಾಶ ಸಿಗಲಿದೆ. ಹೀಗಾಗಿ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಜನರು ಬಾಲರಾಮನನ್ನು ಕಣ್ತುಂಬಿಕೊಳ್ಳಲು ಮುಗಿಬೀಳುವ ನಿರೀಕ್ಷೆ ಇದೆ.


ಅಯೋಧ್ಯೆ: ಬಾಲರಾಮನ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ಸಂಪನ್ನಗೊಂಡ ಬೆನ್ನಲ್ಲೇ ಇಂದಿನಿಂದ ಮಂದಿರ ದರ್ಶನಕ್ಕೆ ಶ್ರೀಸಾಮಾನ್ಯ ಭಕ್ತಾದಿಗಳಿಗೆ ಅವಕಾಶ ಸಿಗಲಿದೆ. ಹೀಗಾಗಿ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಜನರು ಬಾಲರಾಮನನ್ನು ಕಣ್ತುಂಬಿಕೊಳ್ಳಲು ಮುಗಿಬೀಳುವ ನಿರೀಕ್ಷೆ ಇದೆ.

ಅಯೋಧ್ಯೆ ರಾಮಮಂದಿರ ಬೆಳಗ್ಗೆ 7 ರಿಂದ 11.30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ರಾತ್ರಿ 7.30ಕ್ಕೆ ಸಂಧ್ಯಾ ಆರತಿ ನಡೆಯುತ್ತದೆ. ಈ ಆರತಿಯನ್ನು ನೋಡಲು ಬಯಸುವವರು ಪಾಸ್‌ಗಳನ್ನು ಪಡೆಯಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನದಲ್ಲಿ ಪಾಸ್ ಲಭ್ಯ ಇರುತ್ತದೆ. ಶ್ರೀಕ್ಷೇತ್ರದ ವೆಬ್‌ಸೈಟ್ ಅಥವಾ ಗುರುತಿನ ಪುರಾವೆಯೊಂದಿಗೆ ಕ್ಯಾಂಪ್ ಆಫೀಸ್ ಅನ್ನು ಸಂಪರ್ಕಿಸಬಹುದು.

Tap to resize

Latest Videos

ರಾಮಲಲ್ಲಾ ಧರಿಸಿದ್ದ ಆಭರಣಗಳ ವಿಶೇಷತೆಗಳೇನು? ಇಲ್ಲಿದೆ ಡೀಟೇಲ್ಸ್‌!

ಹೋಗೋದು ಹೇಗೆ?: ಅಯೋಧ್ಯೆಗೆ ವಿಮಾನ, ರೈಲುಗಳಲ್ಲಿ ಬಂದರೆ ಎಲ್ಲ ಬಗೆಯ ವಾಹನಗಳೂ ಲಭ್ಯ ಇರುತ್ತವೆ. ಟ್ಯಾಕ್ಸಿ, ಆಟೋ ಸಿಗಲಿದೆ. ರೈಲು
ನಿಲ್ದಾಣದಿಂದ ಸೈಕಲ್‌ ರಿಕ್ಷಾಸೇವೆಯೂ ಇದೆ. ಭಕ್ತಾದಿಗಳು ತಮ್ಮ ಅನುಕೂಲಕ್ಕೆ ತಕ್ಕ ಸಾರಿಗೆ ವಿಧಾನವನ್ನು ಬಳಸಿಕೊಂಡು, ಸರಯೂ ನದಿ ದಂಡೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಹಾಗೂ ಬಾಲ ರಾಮನನ್ನು ಕಣ್ಣುಂಬಿಕೊಳ್ಳಬಹುದು.

click me!