ಕಾಕ್‌ಪಿಟ್‌ನಲ್ಲಿ ಸಮೋಸ, ಪಾನೀಯ ಸೇವನೆ: ಇಬ್ಬರು ಪೈಲಟ್‌ಗಳ ಮನೆಗೆ ಕಳುಹಿಸಿದ ಸ್ಪೈಸ್ ಜೆಟ್

By Anusha Kb  |  First Published Mar 16, 2023, 12:44 PM IST

ವಿಮಾನದ ಕಾಕ್‌ಪಿಟ್‌ನಲ್ಲಿ ಗುಜಿಯಾ (ಸಮೋಸಾ) ತಿಂದು ಪಾನೀಯ ಸೇವಿಸಿದ  ಇಬ್ಬರು ಪೈಲಟ್‌ಗಳನ್ನು ಸ್ಪೈಸ್‌ಜೆಟ್ ಮನೆಗೆ ಕಳುಹಿಸಿದೆ.  


ನವದೆಹಲಿ: ವಿಮಾನದ ಕಾಕ್‌ಪಿಟ್‌ನಲ್ಲಿ ಗುಜಿಯಾ (ಸಮೋಸಾ) ತಿಂದು ಪಾನೀಯ ಸೇವಿಸಿದ  ಇಬ್ಬರು ಪೈಲಟ್‌ಗಳನ್ನು ಸ್ಪೈಸ್‌ಜೆಟ್ ಮನೆಗೆ ಕಳುಹಿಸಿದೆ.  ಇಬ್ಬರು ಪೈಲಟ್‌ಗಳು  ದೆಹಲಿಯಿಂದ ಗುವಹಟಿಗೆ ಹೊರಟಿದ್ದ ವಿಮಾದ ಕಾಕ್‌ಪಿಟ್‌ನಲ್ಲಿ ಕುಳಿತುಕೊಂಡು ಸಮೋಸಾ ತಿನ್ನುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಈ ಬಗ್ಗೆ ವಿಚಾರಣೆ ಬಾಕಿ ಇದೆ ಎಂದು ವಿಮಾನಯಾನದ ವಕ್ತಾರರು ಹೇಳಿದ್ದಾರೆ. 

ಕಾಕ್‌ಪಿಟ್ ವಿಮಾನದ ಅತ್ಯಂತ ಸೂಕ್ಷ್ಮ ಹಾಗೂ ನಿರ್ಣಾಯಕ ಸ್ಥಳವಾಗಿರುವುದರಿಂದ  ಇಲ್ಲಿ ಪ್ರಯಾಣಿಕರಿಗೆ ಪ್ರವೇಶವೇ ಇಲ್ಲ. ಇದರ ಜೊತೆಗೆ ಇಲ್ಲಿ ಯಾವುದೇ ದ್ರವ ಸೇರಿದಂತೆ ಆಹಾರ ತಿನಿಸುಗಳನ್ನು ಇಡುವಂತಿಲ್ಲ. ಇದು ಸುರಕ್ಷತಾ ನಿಯಮವಾಗಿದ್ದು, ವಿಮಾನದ ಪೈಲಟ್ ಸೇರಿದಂತೆ ಎಲ್ಲರಿಗೂ ಈ ಸೂಕ್ಷ್ಮತೆಯ ಅರಿವಿದೆ. ಹೀಗಿದ್ದು, ಕಾಕ್‌ಪಿಟ್‌ನಲ್ಲಿ ಸಮೋಸ ತಿಂದು ಪಾನೀಯ ಸೇವಿಸಿ ಸುರಕ್ಷತಾ ನಿಯಮವನ್ನು ಮೀರಿ ವಿಮಾನ ಪ್ರಯಾಣಿಕರ ಜೀವಕ್ಕೆ ಆತಂಕ ತಂದೊಡ್ಡುತ್ತಿದ್ದ ಹಿನ್ನೆಲೆಯಲ್ಲಿ ಸ್ಪೈಸ್‌ ಜೆಟ್ ಇಬ್ಬರೂ ಪೈಲಟ್‌ಗಳನ್ನು ವಿಮಾನದಿಂದ ಕೆಳಗಿಳಿಸಿದೆ. 

Tap to resize

Latest Videos

80 ಪೈಲಟ್‌ಗಳನ್ನು 3 ತಿಂಗಳು ವೇತನ ನೀಡದೇ ಮನೆಗೆ ಕಳುಹಿಸಲು SpiceJet ಸಿದ್ಧತೆ

ಇಬ್ಬರು ಪೈಲಟ್‌ಗಳನ್ನು ಸದ್ಯದ ಮಟ್ಟಿಗೆ ಕರ್ತವ್ಯದಿಂದ ತಡೆ ಹಿಡಿಯಲಾಗಿದ್ದು,  ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.  ಈ ಘಟನೆಗೆ ಸಂಬಂಧಿಸಿದಂತೆ ಸ್ಪೈಸ್ ಏರ್‌ಜೆಟ್ ಸಂಸ್ಥೆಯ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಾಕ್‌ಪಿಟ್ ಒಳಗೆ ಕುಳಿತು ಆಹಾರ ಸೇವಿಸುವುದಕ್ಕೆ ಸಂಬಂಧಿಸಿದಂತೆ ಶಿಸ್ತುಬದ್ಧವಾದ ನಿಯಮವಿದೆ. ಎಲ್ಲಾ ವಿಮಾನದ ಸಿಬ್ಬಂದಿ ಇದನ್ನು ಅನುಸರಿಸುತ್ತಾರೆ. ಈ ಬಗ್ಗೆ ಬಗ್ಗೆ ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಗಗನಸಖಿ ಜೊತೆ ಅಸಭ್ಯ ವರ್ತನೆ: ಪ್ರಯಾಣಿಕನನ್ನು ಕೆಳಗಿಸಿ ಹೊರಟ ಸ್ಪೈಸ್ ಜೆಟ್

ವಿಮಾನದಲ್ಲಿ ಪ್ರಯಾಣಿಸುವವರ ದುರ್ವರ್ತನೆಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ.  ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯ ಮೇಲೆ ಉದ್ಯಮಿಯೊಬ್ಬ ವಿಮಾನದಲ್ಲಿ ಮೂತ್ರ ಮಾಡಿದ ಪ್ರಕರಣ ಮಾಸುವ ಮೊದಲೇ  ಮತ್ತೊಂದು ಪ್ರಯಾಣಿಕನ ದುರ್ವರ್ತನೆ  ಪ್ರಕರಣ ಬೆಳಕಿಗೆ ಬಂದಿತ್ತು.  ಹೀಗೆ ವಿಮಾನದ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ತನ್ನ ಪ್ರಯಾಣ ಮುಂದುವರೆಸಿತ್ತು.  ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ.  ಇದರ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ.  ಆ ವಿಡಿಯೋದಲ್ಲಿ ಗಗನಸಖಿ ಮತ್ತು ವಯಸ್ಕ ಪ್ರಯಾಣಿಕರೊಬ್ಬರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿರುವುದು ಸೆರೆ ಆಗಿದೆ. 

ಸಮಸ್ಯೆ, ಆತಂಕಕ್ಕೆ ಕಾರಣವಾಗಿದ್ದ ಸ್ಪೈಸ್‌ಜೆಟ್‌ಗೆ ಶಾಕ್, ಶೇ.50 ರಷ್ಟು ವಿಮಾನ ಸಂಚಾರ ಮಾತ್ರ ಅವಕಾಶ!

ಘಟನೆಗೆ ಸಂಬಂಧಿಸಿದಂತೆ ಸ್ಪೈಸ್ ಜೆಟ್  (SpiceJet) ಏರ್‌ಲೈನ್‌ ತನ್ನ ಪ್ರಕಟಣೆ ಹೊರಡಿಸಿದ್ದು,  ವಿಮಾನದ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಓರ್ವ ಪ್ರಯಾಣಿಕನ್ನು ವಿಮಾನದಿಂದ ಇಳಿಸಲಾಗಿದೆ (Deboarded) ಎಂದು ತಿಳಿಸಿದೆ.  SG-8133 ಸಂಖ್ಯೆಯ  ಸ್ಪೈಸ್‌ಜೆಟ್ ವೆಟ್-ಲೀಸ್ಡ್ ಕೊರೆಂಡನ್ ವಿಮಾನವು  ದೆಹಲಿಯಿಂದ ಹೈದರಾಬಾದ್‌ಗೆ ಹೊರಡಲು ನಿಗದಿಯಾಗಿತ್ತು. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ ಪ್ರಯಾಣಿಕರೊಬ್ಬರು ಅಶಿಸ್ತಿನ ಜೊತೆ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಕ್ಯಾಬಿನ್ ಸಿಬ್ಬಂದಿಗೆ (crew member) ಕಿರುಕುಳ ನೀಡಿ ತೊಂದರೆ ಉಂಟು ಮಾಡಿದ್ದಾರೆ. ಸಿಬ್ಬಂದಿ ಈ ವಿಷಯವನ್ನು ಪಿಐಸಿ ಮತ್ತು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ವಿಮಾನದ ಸಿಬ್ಬಂದಿ ದುರ್ವರ್ತನೆ ತೋರಿದ ಪ್ರಯಾಣಿಕ ಹಾಗೂ ಆತನ ಜೊತೆ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಏರ್‌ಲೈನ್ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ವಿಮಾನ ಸಿಬ್ಬಂದಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸಹ ಪ್ರಯಾಣಿಕರು ವಿಮಾನದಲ್ಲಿ ಸೀಮಿತ ಜಾಗದಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರು (passengers) ನಂತರ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ವಿಮಾನ ಹಾರಿದ ನಂತರ ಏನಾದರೂ ಕಿರಿಕಿರಿ ಶುರು ಮಾಡಿದರೆ ಎಂದು ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ. 

click me!