ಜಾಗತಿಕ ಉದ್ವಿಗ್ನತೆಗೆ ಕಾರಣ ಯಾರು? ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಎಸ್ ಜೈಶಂಕರ್ ಮಹತ್ವದ ಹೇಳಿಕೆ!

Published : Nov 14, 2026, 03:16 PM IST
EAM S Jaishankar on india US Trade deal

ಸಾರಾಂಶ

EAM S Jaishankar ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಹತ್ವದ ಹೇಳಿಕೆ ನೀಡಿದ್ದು, ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಭಾರತ-ಅಮೆರಿಕ ಸಂಬಂಧ ಮತ್ತೆ ಮಹತ್ವ ಪಡೆದುಕೊಂಡಿದೆ. ಯುಎಸ್‌-ಭಾರತ ನಡುವಿನ ವ್ಯಾಪಾರ ಒಪ್ಪಂದ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ ಪೂರ್ಣಗೊಳ್ಳುತ್ತೆ?

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದು, ಒಪ್ಪಂದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಆದರೆ ಇನ್ನುಳಿದ ಸಮಸ್ಯೆಗಳು ಭಾರತದ ಕಡೆಗಿಂತ ಅಮೆರಿಕದ ಕಡೆಗೆ ಹೆಚ್ಚು ಇವೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ ಟೈಮ್ಸ್ ವರದಿ ಪ್ರಕಾರ, ಭಾರತ-ಅಮೆರಿಕ ಎರಡೂ ದೇಶಗಳು ಪರಸ್ಪರ ವ್ಯಾಪಾರ ಸಂಬಂಧ ಒಪ್ಪಂದಗಳ ಬಗ್ಗೆ ಉತ್ತಮವಾಗಿ ಪ್ರತಿಕ್ರಿಯಿಸಿವೆ. ಈ ಮಾತುಕತೆಗಳೆಲ್ಲ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿವೆ. ಅಲ್ಲದೆ ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ರಹಸ್ಯವೇನಲ್ಲ ಈ ಬಗ್ಗೆ ನಾವು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ನನಗೆ ತಿಳಿದಿರುವಂತೆ ನಾವು(ಭಾರತ) ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಕೆಲವು ವಿಷಯಗಳು ಮಾತ್ರ ಅಂತಿಮಗೊಳಿಸುವುದು ಬಾಕಿಯಿದೆ ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಗಳಲ್ಲಿನ ಸಮಸ್ಯೆಗಳು ನಮ್ಮ ಕಡೆಯಿಂದ ಕಡಿಮೆ ಇವೆ. ಭಾರತಕ್ಕಿಂತ ಅಮೆರಿಕದ ಕಡೆಗಿನ ಸಮಸ್ಯೆಗಳೇ ಹೆಚ್ಚಿವೆ. ಹೀಗಾಗಿ ಈ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಲು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಮುಂದುವರಿದು ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿದಾಗಲೆಲ್ಲ ಎಲ್ಲರೂ ಅಸಹನೆ ತೋರುತ್ತಾರೆ. ಯಾವ ಸಮಸ್ಯೆಗಳು ಇಕ್ಕಟ್ಟಿಗೆ ಸಿಲುಕಿವೆ. ಅವು ಬಗೆಹರಿಸಲು ಎಷ್ಟು ಸಮಯ ಬೇಕು ಎಂದೆಲ್ಲ ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಮಾತುಕತೆ ನಡೆಸುವ ಅಧಿಕಾರಿಗಳು ಸಾಮಾನ್ಯವಾಗಿ ಈ ಹಂತದಲ್ಲಿ ಅಂತಹ ವಿಷಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ ಎಂದರು. ಇದಕ್ಕೆ ಉದಾಹರಣೆಯೊಂದು ಉಲ್ಲಲೇಖಿಸಿದ ಸಚಿವರು, ವರ್ಷಗಳ ಹಿಂದೆ ಪರಮಾಣು ಒಪ್ಪಂದದ ಮಾತುಕತೆಗಳಲ್ಲಿ ಭಾಗವಹಿಸಿದಾಗ ವಾತಾವರಣವು ಇದೇ ರೀತಿಯದ್ದಾಗಿತ್ತು. ಜನರು ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಿದ್ದರು ಎಂದು ಹೇಳಿದರು.

ಹೊಸ ಶಕ್ತಿಗಳು ಹೊರಹೊಮ್ಮುತ್ತಿವೆ.

ಇದೇ ವೇಳೆ ಜಾಗತಿಕ ಪರಿಸ್ಥಿತಿ ಬಗ್ಗೆ ಮಾತನಾಡಿದ ಎಸ್ ಜೈಶಂಕರ್ ಅವರು, ಮಧ್ಯಪ್ರಾಚ್ಯ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಆಫ್ರಿಕಾದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳ ಬಗ್ಗೆಯೂ ಪ್ರಸ್ತಾಪಿದರು. ಜಾಗತಿಕ ಪರಿಸ್ಥಿತಿಯೂ ಪ್ರಮುಖ ಬದಲಾವಣೆಗೆ ಒಳಗಾಗುತ್ತಿದೆ. ಹೊಸ ಶಕ್ತಿಗಳು ಹೊರಹೊಮ್ಮುತ್ತಿವೆ. ಪ್ರಸ್ತುತ ಉದ್ವಿಗ್ನತೆಗಳಿಗೆ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ಖಂಡಿತವಾಗಿಯೂ ಒಂದು ಪ್ರಮುಖ ಕಾರಣವಾಗಿದೆ. ಆದರೆ ಅದು ಒಂದೇ ಅಲ್ಲ. ಇಂತಹ ಸವಾಲಿನ ಸಮಯದಲ್ಲಿ ಬಲವಾದ ನಾಯಕತ್ವ ತುಂಬಾ ಅಗತ್ಯ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿಯೋ ಬಳಕೆದಾರರಿಗೆ ವಾರ್ನಿಂಗ್, ಕೇವಲ ₹11 ರೀಚಾರ್ಜ್ ಆಫರ್ ಹಿಂದಿರುವ ಅಸಲಿ ಕಥೆ ಏನು?
ಮರದಿಂದ ಉದುರಿತು ರಾಶಿ ರಾಶಿ ಹಣ: ಹೆಕ್ಕಿಕೊಳ್ಳಲು ಮುಗಿಬಿದ್ದ ಜನ! ಶಿಮ್ಲಾದಲ್ಲಿ ವಿಚಿತ್ರ ಘಟನೆ- ವಿಡಿಯೋ ವೈರಲ್​