ಮಗನಿಗೆ ದಯಾಮರಣ ಅನುಮತಿ ಕೇಳಿದ್ದ ಪೋಷಕರಿಗೆ ರಿಲೀಫ್ ಕೊಟ್ಟು ತೆರಳಿದ್ರು ಡಿವೈ ಚಂದ್ರಚೂಡ್

By Mahmad Rafik  |  First Published Nov 12, 2024, 3:43 PM IST

ಡಿವೈ ಚಂದ್ರಚೂಡ್ ಅವರು ನಿವೃತ್ತಿ ದಿನದಂದು ಕೋಮಾ ಸ್ಥಿತಿಯಲ್ಲಿರುವ ಮಗನಿಗೆ ದಯಾಮರಣ ಕೋರಿದ ಪೋಷಕರ ಅರ್ಜಿ ವಿಚಾರಣೆ ನಡೆಸಿ, ಉತ್ತರ ಪ್ರದೇಶ ಸರ್ಕಾರವು ಚಿಕಿತ್ಸಾ ವೆಚ್ಚ ಭರಿಸುವಂತೆ ಆದೇಶಿಸಿದ್ದಾರೆ.


ನವದೆಹಲಿ: ಡಿವೈ ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಾಧೀಶ ಸ್ಥಾನದಿಂದ ನಿವೃತ್ತಿ ಹೊಂದಿದ್ದು, ಸಂಜೀವ್ ಖನ್ನಾ ಹೊಸ ಸಿಜೆಐ ಆಗಿ ನೇಮಕಗೊಂಡಿದ್ದಾರೆ. ಡಿವೈ ಚಂದ್ರಚೂಡ್ ತಮ್ಮ ಸೇವಾವಧಿಯ ಕೊನೆಯ ದಿನದಂದು ಮಗನಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದ ಪೋಷಕರಿಗೆ ದೊಡ್ಡ ರಿಲೀಫ್ ನೀಡಿದ್ದಾರೆ. 30 ವರ್ಷದ ಹರೀಶ್ ರಾಣಾ ಎಂಬ ಯುವಕ ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದು, ಆತನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆ ಮಗನಿಗೆ ದಯಾಮರಣ ನೀಡಬೇಕೆಂದು ಆತನ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ವೈದ್ಯಕೀಯ ಸಾಧನಗಳ ಸಹಾಯದಿಂದ ಮಗ ಜೀವಂತವಾಗಿದ್ದಾನೆ. ಜೀವಾಧಾರಕ ವ್ಯವಸ್ಥೆಯ ಸಾಧನಗಳನ್ನು ತೆಗೆದ್ರೆ ಆತ ಸಾವನ್ನಪ್ಪುತ್ತಾನೆ. ಹಾಗಾಗಿ ಸಹಜ ಸಾವಿಗೆ ಪೋಷಕರು ಅನುಮತಿ ಕೇಳಿದ್ದರು.

ಡಿವೈ ಚಂದ್ರಚೂಡ ಅವರ ತಮ್ಮ ಕೆಲಸದ ಕೊನೆಯ ದಿನದಂದು ದಯಾಮರಣದ ಅರ್ಜಿಯ ಕುರಿತು ಮಹತ್ವದ ತೀರ್ಪು ನೀಡಿದ್ದಾರೆ. ಪೋಷಕರು ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿರುವ ಕಾರಣ, ಕೋಮಾದಲ್ಲಿರುವ ಹರೀಶ್ ವೈದ್ಯಕೀಯ ವೆಚ್ಚವನ್ನು ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. 

Tap to resize

Latest Videos

ಹರೀಶ್ ಪೋಷಕರಾದ ಅಶೋಕ್ ರಾಣಾ (62) ಮತ್ತು ನಿರ್ಮಲಾದೇವಿ ಹಲವು ವರ್ಷಗಳಿಂದ ಮಗನ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತಿದ್ದಾರೆ. ಯಾವಾಗ ಆರ್ಥಿಕ ಸ್ಥಿತಿ ಕುಸಿಯಲಾರಂಭಿಸಿಯೋ ಮಗನಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಭವಿಷ್ಯದಲ್ಲಿ ಚಿಕಿತ್ಸಾ ವೆಚ್ಚ ಪಾವತಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಜಿಯಲ್ಲಿ ಅಶೋಕ್ ರಾಣಾ ಮತ್ತು  ನಿರ್ಮಾಲಾದೇವಿ ಉಲ್ಲೇಖಿಸಿದ್ದರು. ಮೊಹಾಲಿ ಓದುತ್ತಿರುವಾಗ ನಾಲ್ಕನೇ ಮಹಡಿಯಿಂದ ಬಿದ್ದಿದ್ದರಿಂದ ತಲೆಗೆ ಗಂಭೀರ ಗಾಯವಾಗಿತ್ತು.

ಮನೆಯಲ್ಲಿಯೇ ಹರೀಶ್ ರಾಣಾಗೆ ಚಿಕಿತ್ಸೆ ನೀಡಲು ಕೋರ್ಟ್ ಸೂಚನೆ ನೀಡಿದೆ. ಉತ್ತರ ಪ್ರದೇಶ ಸರ್ಕಾರವೇ ಹರೀಶ್ ಚಿಕಿತ್ಸೆಯನ್ನು ನೋಡಿಕೊಳ್ಳಬೇಕು. ಆನ್-ಕಾಲ್ ವೈದ್ಯಕೀಯ ಅಧಿಕಾರಿ ಮತ್ತು ಶುಶ್ರೂಷಾ ಸಲಹೆ ಜೊತೆ ಫಿಸಿಯೋಥೆರಪಿಸ್ಟ್ ಮತ್ತು ಆಹಾರ ತಜ್ಞರು ಭೇಟಿ ನೀಡುತ್ತಿರಬೇಕು. ಈ ಎಲ್ಲಾ ವೈದ್ಯಕೀಯ ಸೇವೆಯ ವೆಚ್ಚವನ್ನು ಉತ್ತರ ಪ್ರದೇಶ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ನೆರವಿನಿಂದ ದಲಿತ ಯುವಕನಿಗೆ ಸಿಕ್ತು ಐಐಟಿ ಸೀಟ್

ಡಿವೈ ಚಂದ್ರಚೂಡ್ ಪ್ರಮುಖ ತೀರ್ಪುಗಳು
*ನ್ಯಾಯಾಲಯಗಳನ್ನು ಹೆಚ್ಚು ಹೈಟೆಕ್ ಮಾಡುವತ್ತ ಗಮನಹರಿಸಿದರು. ಇ-ಫೈಲಿಂಗ್, ಪೇಪರ್‌ಲೆಸ್ ಸಲ್ಲಿಕೆ, ಬಾಕಿ ಇರುವ ಪ್ರಕರಣಗಳಿಗೆ ವಾಟ್ಸಾಪ್ ಅಪ್‌ಡೇಟ್, ಡಿಜಿಟಲ್ ಪರದೆ, ವಿಡಿಯೋ ಕಾನ್ಫರೆನ್ಸಿಂಗ್, ಲೈವ್ ಟ್ರ್ಯಾಕಿಂಗ್, ಲೈವ್ ಸ್ಟ್ರೀಮಿಂಗ್ ಸೌಲಭ್ಯವನ್ನು ಪ್ರಾರಂಭಿಸಿದರು.

*ನ್ಯಾಯಾಲಯಗಳಲ್ಲಿ ತಕ್ಕಡಿ ಹಿಡಿದಿರುವ ನ್ಯಾಯದ ದೇವತೆಯ ಪ್ರತಿಮೆಯನ್ನು ಎಲ್ಲರೂ ನೋಡಿರುತ್ತಾರೆ, ಅವರ ಕಣ್ಣಿಗೆ ಬಟ್ಟೆ ಕಟ್ಟಿರುತ್ತದೆ. ಕಾನೂನು ಕುರುಡು ಎಂಬ ಗಾದೆ ಕೂಡ ಪ್ರಚಲಿತದಲ್ಲಿದೆ. ಆದರೆ ಸಿಜೆಐ ಡಿವೈ ಚಂದ್ರಚೂಡ್ ನ್ಯಾಯದ ದೇವತೆಯ ಪ್ರತಿಮೆಯಲ್ಲಿ ಬದಲಾವಣೆ ಮಾಡಿದರು. ಬಲಗೈಯಲ್ಲಿ ತಕ್ಕಡಿಯನ್ನು ಸಮತೋಲನಗೊಳಿಸಲಾಯಿತು. ಕಣ್ಣಿನ ಪಟ್ಟಿಯನ್ನು ತೆಗೆಯಲಾಯಿತು. ಎಡಗೈಯಲ್ಲಿ ಕತ್ತಿಯ ಬದಲು ನ್ಯಾಯದ ದೇವತೆಯ ಕೈಯಲ್ಲಿ ಸಂವಿಧಾನವನ್ನು ನೀಡಲಾಯಿತು.

*ಸಿಜೆಐ ಡಿವೈ ಚಂದ್ರಚೂಡ್ ತಮ್ಮ ಮತ್ತೊಂದು ಪ್ರಮುಖ ಬದಲಾವಣೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಜಾದಿನಗಳ ಸಂಖ್ಯೆಯನ್ನು ಗರಿಷ್ಠ 95ಕ್ಕೆ ಇಳಿಸಿದರು. ಮೊದಲು ಈ ಸಂಖ್ಯೆ 103 ಆಗಿತ್ತು. ಇದಲ್ಲದೆ, ರಜಾ ನ್ಯಾಯಾಧೀಶರನ್ನು ಕೇವಲ ನ್ಯಾಯಾಧೀಶರು ಎಂದು ಕರೆಯುವಂತೆ ಆದೇಶಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕುರ್ಚಿಗಳ ಬ್ಯಾಕ್‌ರೆಸ್ಟ್‌ಗಳು ವಿಭಿನ್ನವಾಗಿರದೆ ಒಂದೇ ರೀತಿ ಇರುವಂತೆ ಮಾಡಿದರು.

ಇದನ್ನೂ ಓದಿ: ನೂತನ ಸಿಜೆಐಯಾಗಿ ಪ್ರಮಾಣ ಸ್ವೀಕರಿಸಿದ ಸಂಜೀವ್ ಖನ್ನಾ ನೀಡಿದ ಪ್ರಮುಖ ತೀರ್ಪುಗಳು

click me!