ಒಂದು ವಾರದಿಂದ ಬೆಳಗ್ಗೆಯೂ ಲುಧಿಯಾನದಲ್ಲಿ ಕತ್ತಲು, ಕೇಡುಗಾಲದ ಸೂಚನೆ ನೀಡಿತಾ ಸೂರ್ಯ?

By Chethan Kumar  |  First Published Nov 12, 2024, 2:52 PM IST

ನವೆಂಬರ್ 5 ರಿಂದ ಲುಧಿಯಾನದಲ್ಲಿ ಸೂರ್ಯ ಮೂಡಿಲ್ಲ, ಬೆಳಕು ಕಾಣುತ್ತಿಲ್ಲ. ಬೆಳಗ್ಗೆಯಿಂದಲೂ ಕತ್ತಲು ಆವರಿಸಿದೆ. ಜನರು ಟಾರ್ಚ್ ಹಿಡಿದು ಓಡಾಡುತ್ತಿದ್ದಾರೆ. ಇದು ಬಹು ದೊಡ್ಡ ಆಪತ್ತಿನ ಮುನ್ಸೂಚನೆಯನ್ನು ನೀಡುತ್ತಿದೆಯಾ?
 


ಲುಧಿಯಾನ(ನ.12) ಭಾರತ ದಕ್ಷಿಣ ರಾಜ್ಯಗಳಲ್ಲಿ ಕೆಲವೆಡೆ ಮಳೆ, ಕೆಲ ರಾಜ್ಯದಲ್ಲಿ ಮಳೆ ಮೋಡಗಳು ಗೋಚರಿಸಿದೆ. ಚೆನ್ನೈ ಸೇರಿದಂತೆ ತಮಿಳುುನಾಡಿನ ಕೆಲೆವೆಡೆ ಮಳೆಯಾಗುತ್ತಿದೆ. ಹೀಗಾಗಿ ಸೂರ್ಯ ಕಿರಣಗಳು ಪ್ರಕರವಾಗಿಲ್ಲ. ಆದರೆ ಪಂಜಾಬ್‌ನ ಲುಧಿಯಾನದಲ್ಲಿ ಹಾಗಲ್ಲ. ನವೆಂಬರ್ 5 ರಿಂದ ಲುಧಿಯಾನ ಬೆಳಗ್ಗೆಯಿಂದಲೂ ಕತ್ತಲಲ್ಲಿ ಮುಳುಗಿದೆ. ಜನರು ಟಾರ್ಚ್ ಹಿಡಿದು, ವಾಹನ ಸವಾರರು ಹೆಡ್ ಲೈಟ್ ಹಾಕಿಯೇ ಸಾಗುತ್ತಿದ್ದಾರೆ. ಲುಧಿಯಾನದ ಜನತೆ ಈ ಬಾರಿ ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ಸೂರ್ಯನ ಬೆಳಕು ಕಾಣದೆ ಕಂಗಲಾಗಾಗಿದ್ದಾರೆ. ಇದೇ ವೇಳೆ ಬೆಳಗ್ಗೆಯಾದರೆ ಸೂರ್ಯನ ಕಿರಣ ಸ್ಪರ್ಶಿಸುತ್ತಿಲ್ಲ ಎಂದಾದರೆ ಬಹುದೊಡ್ಡ ಆಪತ್ತು ಕಾದಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಲುಧಿಯಾನದಲ್ಲಿ ಸೂರ್ಯನ ಬೆಳಕೇ ಬೀಳದಿರುವ ರೀತಿ ವಾತಾವರಣ ಬದಲಾಗಿದ್ದು ಸ್ವಯಂ ಕೃತ ಅಪರಾಧ. ಲುಧಿಯಾನದಲ್ಲಿ ಮಾಲಿನ್ಯ ಅಷ್ಟರಮಟ್ಟಿಗೆ ಸೂರ್ಯನ ಕಿರಣಗಳನ್ನು ತಡೆಯುತ್ತಿದೆ. ಲುಧಿಯಾನ ವಾಯು ಮಾಲಿನ್ಯ ವಿಪರೀತವಾಗಿದೆ. ಇತ್ತ ಮೋಡ ಕವಿದ ವಾತಾವರಣವಿರುವ ಕಾರಣ ಲುಧಿಯಾನ ಮದ್ಯಾಹ್ನ 12 ಗಂಟೆಯಾದರೂ ಕತ್ತಲಲ್ಲಿ ಮುಳುಗಿದೆ. ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಪಂಜಾಬ್ ಲುಧಿಯಾನ ವಾಯು ಮಾಲಿನ್ಯ ಕುರಿತು ಅಧ್ಯಯನ ನಡೆಸಿದೆ. ಈ ವೇಳೆ ಒಂದೆಡೆ ಧೂಳು, ಕಾರ್ಖಾನೆ, ವಾಹನಗಳ ಕಾರ್ಬನ್ ಜೊತೆಗೆ ದಟ್ಟ ಹೊಗೆ ಲುಧಿಯಾನದಲ್ಲಿ ಬಹುದೊಡ್ಡ ಸಮಸ್ಯೆ ತಂದಿಟ್ಟಿದೆ. 

Latest Videos

ವಿಶ್ವದ ಅತಿ ಕಲುಷಿತ ನಗರ ಲಾಹೋರ್, 1900 ದಾಟಿದ ವಾಯು ಗುಣಮಟ್ಟ, ಭಾರತದ ಮೇಲೆ ಪಾಕ್‌ ಆರೋಪ!

ಲುಧಿಯಾನದಲ್ಲಿ ಹೆಚ್ಚಿನ ರೈತರು ಕಳೆಗೆ ಬೆಂಕಿ ಹಾಕುವ ಪ್ರಕ್ರಿಯೆಯನ್ನು ಬಿಟ್ಟಿಲ್ಲ. ಕೋರ್ಟ್, ಸರ್ಕಾರ ಎಚ್ಚರಿಸಿದರೂ ಈ ಪದ್ಧತಿಯಿಂದ ರೈತರು ಹಿಂದೆ ಸರಿದಿಲ್ಲ. ಇದರ ಪರಿಣಾಮ ಲುಧಿಯಾನ ಕತ್ತಲಲ್ಲಿ ಮುಳುಗಿದೆ. ಹಲವರು ಇದು ಕೇಡುಗಾಲದ ಮುನ್ಸೂಚನೆ ಎಂದು ಎಚ್ಚರಿಸಿದ್ದಾರೆ. ಹೌದು, ಇದು ವಾತಾವರಣದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆ ಕೇಡುಗಾಲದ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಲುಧಿಯಾನದಲ್ಲಿನ ಪರಿಸ್ಥಿತಿ ಇತರ ನಗರಗಳೂ ಎದುರಿಸುವ ದಿನ ದೂರವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ದೆಹಲಿ ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿದೆ. ಈ ವಾಯು ಮಾಲಿನ್ಯ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಮುಂಬೈ ಸೇರಿದಂತೆ ಹಲವು ನಗರಗಳಿಗೂ ವ್ಯಾಪಿಸಿದೆ. ಹೀಗಾಗಿ  ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಚಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲುಧಿಯಾನದಲ್ಲಿ ಸೂರ್ಯನ ಬೆಳಕು ಸರಿಯಾಗಿ ಭೂಮಿಗೆ ಸ್ಪರ್ಶಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಗಾಳಿ ಪ್ರಮಾಣ ಕೂಡ ತಗ್ಗಿದೆ. ಸರಿಯಾಗಿ ಗಾಳಿ ಬೀಸಿದರೂ ವಾತಾವರಣದಲ್ಲಿನ ದಟ್ಟ ಹೊಗೆ ದೂರವಾಗಲಿದೆ. ಆದರೆ ಸದ್ಯ ಮೋಡ ಕವಿದ ವಾತಾವರಣದ ಕಾರಣ ಗಾಳಿಯ ವೇಗವೂ ಕಡಿಮೆಯಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರೈತರು ಲುಧಿಯಾನದಲ್ಲಿ ಬೆಳೆ ಕೊಯಿಲು ಮಾಡಿದ ಬಳಿಕ ಕಳೆಗೆ ಬೆಂಕಿ ಹಚ್ಚುತ್ತಾರೆ. ಇದೇ ಗೊಬ್ಬರನ್ನು ಮುಂದಿನ ಬೆಳೆಗೆ ಬಳಸುತ್ತಾರೆ. ಇದರಿಂದ ಇಳುವರಿ ಹೆಚ್ಚಾಗಲಿದೆ ಅನ್ನೋದು ರೈತರ ವಾದ. ಆದರೆ ಇದರಿಂದ ಆಗುತ್ತಿರುವ ಪರಿಮಾಮ ಮಾತ್ರ ಗಂಭೀರವಾಗಿದೆ. 

ದೆಹಲಿಯಲ್ಲಿನ ವಾಯು ಮಾಲಿನ್ಯದಲ್ಲೂ ಕಳೆಗೆ ಬೆಂಕಿ ಹಚ್ಚುವ ರೈತರ ಪ್ರಕ್ರಿಯೆ ಕೊಡುಗೆಯೂ ಇದೆ. ದೆಹಲಿ ಸುತ್ತಮುತ್ತ ಅಂದರೆ ಹರ್ಯಾಣ, ಪಂಜಾಬ್ ಭಾಗಗಲ್ಲಿ ರೈತರು ಕಳೆಗೆ ಬೆಂಕಿ ಹಚ್ಚುವ ಕಾರಣ ಈ ದಟ್ಟ ಹೊಗೆ ದೆಹಲಿಗೆ ಸುಲಭವಾಗಿ ಸೇರಿಕೊಳ್ಳುತ್ತಿದೆ. ಇಧರ ಜೊತೆಗೆ ದೆಹಲಿಯ ಮಾಲಿನ್ಯವೂ ಪ್ರಮುಖ ಪಾತ್ರವಹಿಸುತ್ತಿದೆ. ದೆಹಲಿಯಲ್ಲಿರುವ ವಿಪರೀತವಾಗಿರುವ ವಾಹನ, ಕಾರ್ಖನೆಗಳ ಹೊಗೆ, ಧೂಳು ಸೇರಿಕೊಂಡು ಭಾರತದ ರಾಷ್ಟ್ರ ರಾಜಧಾನಿ  ದೆಹಲಿಯನ್ನು ಮತ್ತಷ್ಟು ಮಲಿನ ಮಾಡಿದೆ. ಇತ್ತ ಯಮುನಾ ನದಿಯೂ ಕೂಡ ಮಲಿನವಾಗಿದೆ.

ಮಂಗಳೂರು, ಬೆಂಗಳೂರು, ಮೈಸೂರಿನಲ್ಲಿ ಭಾರಿ ವಾಯುಮಾಲಿನ್ಯ: ಗ್ರೀನ್‌ಪೀಸ್‌ ವರದಿಯಲ್ಲೇನಿದೆ?


 

click me!