India

ನ್ಯಾ. ಸಂಜೀವ್ ಖನ್ನಾ ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ

ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ

ಚುನಾವಣಾ ಬಾಂಡ್ ಯೋಜನೆ ಮತ್ತು 370ನೇ ವಿಧಿ ಕುರಿತಾದ ತೀರ್ಪುಗಳು ಸೇರಿದಂತೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೇವಲ ಆರು ತಿಂಗಳ ಕಾರ್ಯಾವಧಿ

ಸಂಜೀವ್‌ ಖನ್ನಾ ಅವರ ಅಧಿಕಾರಾವಧಿ ಇಂದಿನಿಂದ 13 ಮೇ 2025 ರವರೆಗೆ ಇರಲಿದೆ. ನ್ಯಾ. ಖನ್ನಾ ತಮ್ಮ ಅಧಿಕಾರಾವಧಿಯಲ್ಲಿ ಹಲವು ಐತಿಹಾಸಿಕ ತೀರ್ಪುಗಳಲ್ಲಿ ಭಾಗಿಯಾಗಿದ್ದಾರೆ.

ಚುನಾವಣಾ ಬಾಂಡ್ ನಿಂದ 370ನೇ ವಿಧಿ ತನಕ

ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಹಾಗೂ, 370ನೇ ವಿಧಿಯನ್ನು ರದ್ದುಗೊಳಿಸುವಿಕೆಯನ್ನು ಬೆಂಬಲಿಸುವ ಮತ್ತು ಇವಿಎಂ ಬಳಕೆಯನ್ನು ಖಚಿತಪಡಿಸುವ ತೀರ್ಪುಗಳಲ್ಲಿ ಅವರು ಭಾಗಿಯಾಗಿದ್ದಾರೆ.

ಕಾನೂನು ಕುಟುಂಬದಿಂದ ಬಂದ ನ್ಯಾಯಮೂರ್ತಿ ಖನ್ನಾ

ಚುನಾವಣಾ ಬಾಂಡ್ ಯೋಜನೆಯ ವಿರುದ್ಧ ತೀರ್ಪು ನೀಡುವ ಮೂಲಕ ಅವರು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಅಗತ್ಯವನ್ನು ಪ್ರಮುಖವೆಂದು ಪರಿಗಣಿಸಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಕಾನೂನು ಕುಟುಂಬದಿಂದ ಬಂದವರಾಗಿದ್ದಾರೆ.

ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರ ಸೋದರ ಸಂಬಂಧಿ

ಖನ್ನಾ ಅವರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಚ್.ಆರ್. ಖನ್ನಾ ಅವರ ಸೋದರ ಸಂಬಂಧಿ, 1976 ರಲ್ಲಿ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ರಕ್ಷಿಸಿದ್ದರು.

ಚಿಕ್ಕಪ್ಪನ ಹಾದಿಯಲ್ಲಿ ಸಾಗಿ ಈ ಮಟ್ಟಕ್ಕೆ

ನ್ಯಾ. ಎಚ್.ಆರ್. ಖನ್ನಾ  ತತ್ವಗಳು ಮತ್ತು ನೈತಿಕತೆ ಅವರಿಗೆ  ಯಾಂಗದಲ್ಲಿ ವಿಶೇಷ ಸ್ಥಾನ ಗಳಿಸಿಕೊಟ್ಟವು, ಆದರೆ ಅವರ ಧೈರ್ಯಶಾಲಿ ತೀರ್ಪಿನಿಂದಾಗಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ವಂಚಿತರಾಗಬೇಕಾಯಿತು.

ಚುನಾವಣಾ ಪ್ರಕ್ರಿಯೆಗೆ ಇವಿಎಂ ಮುಖ್ಯವೆಂದಿದ್ದ ಖನ್ನಾ

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ತಮ್ಮ ಅಧಿಕಾರಾವಧಿಯಲ್ಲಿ ನ್ಯಾಯಮೂರ್ತಿ ಖನ್ನಾ ಇವಿಎಂ ಸುರಕ್ಷತೆ ಕುರಿತು ಎದ್ದ ಪ್ರಶ್ನೆಗಳನ್ನು ತಿರಸ್ಕರಿಸಿ ಅದನ್ನು ಚುನಾವಣಾ ಪ್ರಕ್ರಿಯೆಗೆ ಮುಖ್ಯವೆಂದು ಪರಿಗಣಿಸಿದ್ದಾರೆ.

ಇವಿಎಂ ಬೂತ್ ಕ್ಯಾಪ್ಚರ್ ತಡೆಯಲು ಸಹಾಯಕ ಎಂದರು

ಇವಿಎಂ ಬೂತ್ ಕ್ಯಾಪ್ಚರ್ ಮತ್ತು ನಕಲಿ ಮತದಾನವನ್ನು ತಡೆಯಲು ಸಹಾಯಕ ಎಂದು ಅವರು ಹೇಳಿದ್ದಾರೆ. ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸುವ ತೀರ್ಪನ್ನು ಬೆಂಬಲಿಸಿ ಅದನ್ನು ಸಾಂವಿಧಾನಿಕ ಎಂದು ಘೋಷಿಸಿದ್ದರು.

ಈ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ

ನ್ಯಾ. ಖನ್ನಾ ದೆಹಲಿ ವಿವಿ ಕ್ಯಾಂಪಸ್ ಲಾ ಸೆಂಟರ್‌ನಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಅವರು NALSA ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು ಹಲವು ಸರ್ಕಾರಿ ಇಲಾಖೆಗಳಲ್ಲಿ ಹಿರಿಯ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕ್ರಿಮಿನಲ್ ವಕೀಲರಾಗಿದ್ದ ನ್ಯಾ. ಖನ್ನಾ

ದೆಹಲಿ ಹೈಕೋರ್ಟ್‌ನಲ್ಲಿ ಅವರು ಅಪರಾಧ ಪ್ರಕರಣಗಳಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ನೇಮಕಾತಿಯಿಂದ ದೇಶದ ನ್ಯಾಯಾಂಗದಲ್ಲಿ ಹೊಸ ಯುಗದ ಆರಂಭದ ನಿರೀಕ್ಷೆಗಳಿವೆ.

ಗುಳಿಬಿದ್ದ ಕೆನ್ನೆ, ಭಾರೀ ತೂಕ ಇಳಿಕೆ ಅಸ್ಥಿಪಂಜರದಂತಾದ ಸುನೀತಾ ವಿಲಿಯಮ್ಸ್!

ಪ್ರಾಣಿ ಮೇಳದಲ್ಲಿ ಎಲ್ಲರ ಗಮನಸೆಳೆದ 23 ಕೋಟಿ ಮೌಲ್ಯದ ಕೋಣ

ಭಾರತದಲ್ಲಿರುವ ಮುಸ್ಲಿಂ ವಿಶ್ವವಿದ್ಯಾಲಯಗಳು ಇವು

ಭಾರತೀಯ ರೈಲ್ವೆ ಹೊಸ ದಾಖಲೆ: ಒಂದೇ ದಿನದಲ್ಲಿ 3 ಕೋಟಿ ಜನರ ಪ್ರಯಾಣ