ರಾವಣ ದಹನದ ವೇಳೆ ಅವಘಡ, ಜನರ ಮೇಲೆ ಬಿತ್ತು ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ!

By Suvarna NewsFirst Published Oct 5, 2022, 9:00 PM IST
Highlights

ರಾವಣ ದಹನ ವೇಳೆ ಮತ್ತೊಂದು ದುರಂತ ಸಂಭವಿಸಿದೆ. ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ ನೆರೆದಿದ್ದವರ ಮೇಲೆ ಬಿದ್ದಿದೆ. ಇದರ ಪರಿಣಾಮ ಹಲವು ಗಾಯಗೊಂಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
 

ಯಮುನಾನಗರ(ಅ.05): ದಸರಾ ಹಬ್ಬದ ವಿಜಯದಶಮಿಯಂದು ನಡೆಯುವ ರಾವಣ ದಹನದಲ್ಲಿ ಈಗಾಗಲೇ ಹಲವು ವಿಘ್ನಗಳು ನಡೆದಿದೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಈ ಬಾರಿ ಹರ್ಯಾಣದ ಯಮುನಾಗರದಲ್ಲಿ ರಾವಣ ದಹಣ ಮಾಡುತ್ತಿದ್ದ ಜನರ ಮೇಲೆ ಪ್ರತಿಕೃತಿ ಬಿದ್ದಿದೆ. ಇದರ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ದಸರಾ ಹಬ್ಬದ ಕೊನೆಯ ದಿನ ರಾವಣ ಪ್ರತಿಕೃತಿ ದಹಿಸುವುದು ಸಂಪ್ರದಾಯ. ದೇಶಾದ್ಯಂತ ಈ ರಾವಣ ದಹನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೇ ರೀತಿ ಯಮುನಾಗರದಲ್ಲಿ ಅತೀ ದೊಡ್ಡ ರಾವಣ ಎರಡು ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಪ್ರತಿಕೃತಿಗೆ ಸಂಪೂರ್ಣ ಪಟಾಕಿಯನ್ನು ಕಟ್ಟಲಾಗಿತ್ತು. ಪೂಜಾ ಕಾರ್ಯಗಳು ಮುಗಿದ ಬಳಿಕ ರಾವಣ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿದೆ. ರಾವಣನ ಪ್ರತಿಕೃತಿ ಹೊತ್ತಿ ಉರಿದಿದೆ. ಇದೇ ವೇಳೆ ಪ್ರತಿಕೃತಿ ಹತ್ತಿರ ತೆರಳಿ ಕೆಲ ಪಟಾಕಿಗಳಿ ಬೆಂಕಿ ಹಚ್ಚುವ ಕಾರ್ಯವನ್ನು ಹಲವು ಮಾಡಿದ್ದಾರೆ. ಇದೇ ವೇಳೆ ರಾವಣನ ಪ್ರತಿಕೃತಿ ಉರಿಯುತ್ತಲೇ ಜನರ ಮೇಲೆ ಬಿದ್ದಿದೆ. ಸಾವಿರಾರು ಮಂದಿ ನೆರೆದಿದ್ದರು. ತಕ್ಷಣವೇ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ರಾವಣನ ಪ್ರತಿಕೃತಿ ಬೀಳುತ್ತಿದ್ದಂತೆ ಕಟ್ಟಲಾಗಿದ್ದ ಪಟಾಕಿಗಳು ಒಂದೇ ಸಮನೆ ಸಿಡಿಯಲು ಆರಂಭಿಸಿದೆ. ಆದರೂ ಹರಸಾಹಸ ಪಟ್ಟು ಗಂಭೀರವಾಗಿ ಗಾಯಗೊಂಡರವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾವಣ ಪ್ರತಿಕೃತಿ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಭೀಕರ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಈ ಘಟನೆಯಲ್ಲಿ ಎಷ್ಟು ಮಂದಿಗೆ ಗಾಯವಾಗಿದೆ. ಗಾಯಗೊಂಡವರ ಪರಿಸ್ಥಿತಿ ಹೇಗಿದೆ ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

 

| Haryana: A major accident was averted during Ravan Dahan in Yamunanagar where the effigy of Ravana fell on the people gathered. Some people were injured. Further details awaited pic.twitter.com/ISk8k1YWkH

— ANI (@ANI)

 

Dasara 2022: ರಾವಣನಿಗಿದ್ದ ಈ ಒಳ್ಳೆಯ ಗುಣಗಳ ಪರಿಚಯ ನಿಮಗಿದೆಯೇ?

ಶ್ರೀರಾಮ ರಾವಣನನ್ನು ಸಂಹರಿಸಿದ ದಿನವನ್ನು ಭಾರತದಲ್ಲಿ ರಾವಣ ದಹನ ದಿನವಾಗಿ ಆಚರಿಸಲಾಗುತ್ತದೆ. ಈ ಆಚರಣೆಗೆ ಈಗಾಗಲೇ ಸರ್ಕಾರ ಹಲವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅತೀವ ಎಚ್ಚರಿಕೆ ವಹಿಸಬೇಕು. ಆದರೆ ಹಲವು ಭಾಗಗಳಲ್ಲಿ ನಿರ್ಲಕ್ಷ್ಯಕ್ಕೆ ಮುಗ್ದರು ಬಲಿಯಾದ ಉದಾಹರಣೆಗಳಿವೆ. 2018ರಲ್ಲಿ ಇದೇ ರಾವಣ ದಹನ ವೇಳೆ ಅತೀ ದೊಡ್ಡ ದುರಂತ ನಡೆದಿತ್ತು. ಭಾರತದ ಇತಿಹಾಸದಲ್ಲಿ ರಾವಣ ದಹನ ದಿನ ನಡೆದ ಅತೀ ದೊಡ್ಡ ದುರಂತ ಇದಾಗಿದೆ.

ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ ಹರಿದ ರೈಲು
ರಾವಣ ದಹನ ಕಾರ್ಯಕ್ರಮ ವೀಕಿಸುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡ ಭೀಕರ ಘಟನೆ  ಅಮೃತಸರದಲ್ಲಿ ನಡೆದಿತ್ತು. ಅಮೃತಸರ ಸಮೀಪದ ಜೋಡಾ ಫಾಟಕ್‌ ಎಂಬಲ್ಲಿ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಂಗ್ರೆಸ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿತ್ತು. ರೈಲ್ವೆ ಹಳಿಯ ಸಮೀಪದಲ್ಲೇ ನಡೆಯುವ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ಈ ಪೈಕಿ ಒಂದಷ್ಟುಜನ ರಾವಣ ದಹನ ಸ್ಥಳದಲ್ಲಿ, ಇನ್ನಷ್ಟುಜನ ದೂರದಲ್ಲಿ, ಮತ್ತಷ್ಟುಜನ ಈ ಎರಡೂ ಸ್ಥಳಗಳ ನಡುವೆ ಬರುವ ರೈಲ್ವೆ ಹಳಿಯ ಮೇಲೆ ನಿಂತಿದ್ದರು. ರಾತ್ರಿ 8 ಗಂಟೆ ವೇಳೆಗೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಲೇ, ಅದು ಮುಗಿಲೆತ್ತರಕ್ಕೆ ಅಗ್ನಿಜ್ವಾಲೆಯನ್ನು ಹಬ್ಬಿಸಿತ್ತು. ಈ ನಡುವೆ ಅದರೊಳಗೆ ಇಡಲಾಗಿದ್ದ ಪಟಾಕಿಗಳು ಭಾರೀ ಸದ್ದಿನೊಂದಿಗೆ ಸ್ಫೋಟಿಸಲು ಆರಂಭವಾಯಿತು. ಈ ವೇಳೆ ದೂರದಲ್ಲಿದ್ದ ನಿಂತಿದ್ದ ಜನರು ಸಮೀಪದಿಂದ ಘಟನೆ ವೀಕ್ಷಿಸುವ ಸಲುವಾಗಿ ರೈಲ್ವೆ ಹಳಿಯತ್ತ ಧಾವಿಸಿದರು.

ಅಣ್ಣ ರಾವಣನ ಸಾವಿಗೆ ಸಂಚು ಮಾಡಿದಳೇ ಶೂರ್ಪನಖಿ?!

 ರೈಲು ಆಗಮಿಸಿದ ಸುಳಿವು ಜನರಿಗೆ ಗೊತ್ತಾಗಲಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ನೂರಾರು ಜನರ ಮೇಲೆ ರೈಲು ಹರಿದು ಹೋಯ್ತು. ಎರಡೂ ದಿಕ್ಕಿನಿಂದ ರೈಲು ಆಗಮಿಸಿದ ಕಾರಣ ಜನರಿಗೆ ತಪ್ಪಿಸಿಕೊಳ್ಳಲೂ ಅವಕಾಶ ಸಿಗಲಿಲ್ಲ. ಪರಿಣಾಮ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.
 

click me!