ಸೈಕಲ್‌ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದೇಗೆ? ವಿಡಿಯೋ ನೋಡಿ

Published : Nov 29, 2024, 05:05 PM IST
ಸೈಕಲ್‌ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದೇಗೆ? ವಿಡಿಯೋ ನೋಡಿ

ಸಾರಾಂಶ

ಸೈಕಲ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಅನಿರೀಕ್ಷಿತವಾಗಿ ಹಣದ ಕಂತೆ ಸಿಕ್ಕಿದ್ದು, ಹೊಸ ವಾಹನ ಖರೀದಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನವದೆಹಲಿ: ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸಿತ್ತು ಅಂತ ಹೇಳಲು ಅಸಾಧ್ಯ. ಇನ್ನು ಕೆಲವರು ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆಗಿರುತ್ತಾರೆ. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬಳು ಬಾಲಿವುಡ್ ಸಿನಿಮಾದ ಹಾಡಿಗೆ ಧ್ವನಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ರಸ್ತೆ ಬದಿ 'ಕಚ್ಚಾ ಬದಾಮ್' ಎಂದು ಹೇಳುತ್ತಾ ಕಡಲೆಬೀಜ ಮಾರುತ್ತಿದ್ದ ವ್ಯಕ್ತಿಯ ಹಾಡಿಗೆ ಇಡೀ ಭಾರತವೇ ಹೆಜ್ಜೆ ಹಾಕಿತ್ತು. ಇದೆಲ್ಲದರ ಜೊತೆ ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಟ್ರೆಂಡಿಂಗ್ ರೀಲ್ಸ್‌  ಮಾಡುತ್ತಾ ಸಮಾಜಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹವುದೇ ಒಂದು ವಿಡಿಯೋ ಟ್ರೆಂಡ್ ಆಗುತ್ತಿದೆ.

ಹೌದು, ಕೆಲ ಡೆಲಿವರಿ ಬಾಯ್‌ಗಳು ತಾವು ಕೆಲಸ ಮಾಡುತ್ತಾ ತಮ್ಮ ದಿನನಿತ್ಯದ ಜೀವನಶೈಲಿಯನ್ನು ರೆಕಾರ್ಡ್ ಮಾಡುತ್ತಾ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಸೈಕಲ್ ಮೇಲೆ ಬಂದ ಡೆಲಿವರಿ ಬಾಯ್‌ಗೆ ಗ್ರಾಹಕರೊಬ್ಬರು ಹೆಚ್ಚುವರಿ ಹಣ ನೀಡಿ ಗಮನ ಸೆಳೆದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ತಾಯಿಯೊಬ್ಬಳು ಪುಟ್ಟ ಮಗುವಿನ ಜೊತೆ ಆಹಾರ ಸರಬರಾಜು ಮಾಡುತ್ತಿದ್ದರು. ಇದೀಗ ವೈರಲ್ ಆಗುತ್ತಿರೋ ವಿಡಿಯೋದಲ್ಲಿ ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಯ ಅದೃಷ್ಟ ಖುಲಾಯಿಸಿದೆ.

ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಸೈಕಲ್ ಮೇಲೆ ಆಹಾರ ಪೂರೈಸುವ ಕೆಲಸ ಮಾಡುತ್ತಿರುತ್ತಾನೆ. ಫುಡ್ ತೆಗೆದುಕೊಂಡು ಗ್ರಾಹಕರಿಗೆ ನೀಡಲು ಯುವಕ ಹೋಗುತ್ತಿರುತ್ತಾನೆ. ಗ್ರಾಹಕರ ಅಡ್ರೆಸ್ ಬರುತ್ತಿದ್ದಂತೆ ಸೈಕಲ್ ನಿಲ್ಲಿಸಿ ಕಟ್ಟಡದೊಳಗೆ ಹೋಗುತ್ತಾನೆ. ಈ ಸಮಯದಲ್ಲಿ ಕಾರ್‌ನಿಂದ ಹೊರ ಬರುವ ವ್ಯಕ್ತಿ ಸೈಕಲ್ ಮೇಲಿರುವ ಫುಡ್ ಬಾಕ್ಸ್‌ನಲ್ಲಿ ಹಣದ ಕಂತೆಯುಳ್ಳ ಲಕೋಟೆ ಇರಿಸಿ ಹೋಗುತ್ತಾನೆ. ಲಕೋಟೆ ಮೇಲೆ "ನಿಮ್ಮ ಹೊಸ ಬೈಕ್‌" ಗಾಗಿ ಎಂದು ಬರೆಯಲಾಗಿರುತ್ತದೆ. 

ಇದನ್ನೂ ಓದಿ: ಐಸ್ ಕ್ರೀಂ ಪ್ಯಾಕ್ ಮಾಡುವ ಮುನ್ನ ಈ ವ್ಯಕ್ತಿ ಮಾಡಿದ್ದೇನು ಏನು? ವಿಡಿಯೋ ನೋಡಿ

ಆಹಾರ ಕೊಟ್ಟ ಬಳಿಕ ಮತ್ತೊಂದು ಆರ್ಡರ್ ಸ್ವೀಕರಿಸುವ ಯುವಕ ಹೋಟೆಲ್ ನತ್ತ ಹೋಗುತ್ತಿರುತ್ತಾನೆ. ಅಲ್ಲಿಯವರೆಗೂ ಆತನ ಬಾಕ್ಸ್‌ನಲ್ಲಿ ಕಂತೆ ಕಂತೆ ಹಣವಿರೋ ವಿಷಯ ಗೊತ್ತಿರಲ್ಲ. ಮತ್ತೊಂದು ಆರ್ಡರ್ ಸ್ವೀಕರಿಸಿ ಫುಡ್ ಬಾಕ್ಸ್‌ನಲ್ಲಿಡುವಾಗ ಅಲ್ಲಿರುವ ಪಾಕೆಟ್ ತೆಗೆದು ನೋಡುತ್ತಾನೆ. ಅದರೊಳಗಿರುವ ಹಣ ನೋಡಿ ಖುಷಿಯಿಂದ ದೇವರಿಗೆ ನಮಸ್ಕರಿಸುತ್ತಾನೆ. ನಂತರ ಡೆಲಿವರಿ ಬಾಯ್ ತನ್ನದಾದ ಸ್ಕೂಟಿ ಖರೀದಿಸಿ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಿರೋದನ್ನು ಅಂತ್ಯದಲ್ಲಿ ತೋರಿಸಲಾಗಿದೆ.

ಈ ವಿಡಿಯೋವನ್ನು ರವಿ ಕುಮಾರ್ (seenu.malik.365) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 6.59 ಲಕ್ಷಕ್ಕೂ ಅಧಿಕ ಲೈಕ್ಸ್, 9 ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಇವರೇ ರಿಯಲ್ ಹೀರೋ, ತಮ್ಮಲ್ಲಿಯ ಹಣವನ್ನು ಮತ್ತೊಬ್ಬರಿಗೆ ಯಾವುದೇ ಪ್ರತಿಫಲವಿಲ್ಲದೇ ನೀಡಲು ಸಹ ದೊಡ್ಡ ಮನಸ್ಸು ಬೇಕು ಎಂದಿದ್ದಾರೆ. ಕೆಲವರು ಡೆಲಿವರಿ ಬಾಯ್ ಎಲೆಕ್ಟ್ರಿಕ್ ವೆಹಿಕಲ್ ಖರೀದಿಸಿದ್ಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಮಳೆಯಲ್ಲಿ ಜೋಳ ಮಾರುತ್ತಿದ್ದ ಪುಟಾಣಿಗಳ ಮುಖದಲ್ಲಿ ನಗು ತರಿಸಿದ ಕಾರ್‌ನಲ್ಲಿ ಬಂದ ವ್ಯಕ್ತಿ- ವಿಡಿಯೋ ನೋಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಬಂಗಾಳ ಮುಖ್ಯ ಚುನಾವಣಾಧಿಕಾರಿ ಇದೀಗ ಸುವೇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ
ಗ್ರೇಟರ್ ಬೆಂಗಳೂರು ಚುನಾವಣೆ ಮತ್ತೆ ಮುಂದೂಡಿಕೆಯಾಗ್ತಾ? ಸಿಬ್ಬಂದಿ ಕೊರತೆನಾ… ಇಲ್ಲ ಬೇರೆ ಕಾರಣವಾ? ಸುಪ್ರೀಂ ಮೆಟ್ಟಿಲೇರಿದ ಸರ್ಕಾರದ ಅಸಲಿ ಕಾರಣವೇನು?