ನಕಲಿ ಕೇಸ್‌ನಲ್ಲಿ ಮೋದಿ ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್‌ ಶಾ

Published : Mar 31, 2023, 07:12 AM ISTUpdated : Mar 31, 2023, 07:14 AM IST
ನಕಲಿ ಕೇಸ್‌ನಲ್ಲಿ ಮೋದಿ ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್‌ ಶಾ

ಸಾರಾಂಶ

ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅವರನ್ನು ಸಿಲುಕಿಸಲು ಯುಪಿಎ ಸರ್ಕಾರ ಅವಧಿಯಲ್ಲಿ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ನವದೆಹಲಿ: ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅವರನ್ನು ಸಿಲುಕಿಸಲು ಯುಪಿಎ ಸರ್ಕಾರ ಅವಧಿಯಲ್ಲಿ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಆಗ ನಾನು ಗುಜರಾತ್‌ನ ಗೃಹ ಸಚಿವನಾಗಿದ್ದೆ. ನಕಲಿ ಎನ್‌ಕೌಂಟರ್‌ ಎನ್ನಲಾದ ಪ್ರಕರಣವೊಂದರ ತನಿಖೆಯ ವೇಳೆ ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಿಬಿಐ ನನ್ನ ಮೇಲೆ ಒತ್ತಡ ಹೇರಿ ನರೇಂದ್ರ ಮೋದಿಯವರನ್ನು ಸಿಲುಕಿಸಲು ಯತ್ನಿಸಿತ್ತು. ಆದರೆ ಬಿಜೆಪಿ ಯಾವತ್ತೂ ಅದರ ಬಗ್ಗೆ ಗದ್ದಲ ಎಬ್ಬಿಸಲಿಲ್ಲ ಎಂದು ಹೇಳಿದ್ದಾರೆ.

ಸುದ್ದಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅಮಿತ್‌ ಶಾ (Amit Shah) ಅವರಿಗೆ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮನ್ನು ಸಿಲುಕಿಸಲು ಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದ ಬಗ್ಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಮೇಲಿನಂತೆ ಅಮಿತ್‌ ಶಾ ಉತ್ತರಿಸಿದ್ದಾರೆ.

ಕಾಶ್ಮೀರ ನಕಲಿ ಎನ್ಕೌಂಟರ್‌ ಮುಚ್ಚಿಹಾಕಲು ಸೇನಾಧಿಕಾರಿ ಯತ್ನ: ಆರೋಪಪಟ್ಟಿ

ಶಾ ಅವರು ಅದ್ಯಾವ ನಕಲಿ ಎನ್‌ಕೌಂಟರ್‌ (fake encounter) ಪ್ರಕರಣ ಎಂಬ ವಿವರಣೆಯನ್ನು ನೀಡಲಿಲ್ಲ. ಆದರೆ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2005ರಲ್ಲಿ ಹಿಸ್ಟರಿ ಶೀಟರ್‌ ಸೊಹ್ರಾಬುದ್ದೀನ್‌ ಶೇಖ್‌ ಎಂಬಾತನ ಎನ್‌ಕೌಂಟರ್‌ ನಡೆದಿತ್ತು. ಆದರೆ ಇದು ನಕಲಿ ಎನ್‌ಕೌಂಟರ್‌ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ಆರೋಪಿಯಾಗಿದ್ದ 22 ಜನರು ಸುದೀರ್ಘ ವಿಚಾರಣೆ ಬಳಿಕ ಖುಲಾಸೆಯಾಗಿದ್ದರು. ಅದೇ ಪ್ರಕರಣವನ್ನು ಶಾ ಉಲ್ಲೇಖಿಸಿರಬಹುದು ಎಂದು ಹೇಳಲಾಗಿದೆ.

Amit Shah : ಆಪ್ ಹಾಗೂ ನಿಷೇಧಿತ SFJ ನಡುವಿನ ಸಂಬಂಧದ ಬಗ್ಗೆ ತನಿಖೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!