
ನವದೆಹಲಿ(ಜೂ.20): ತಡ ರಾತ್ರಿ ಪಾರ್ಟಿ, ಒಳಗೆ ಸೇರಿತ್ತು ಗುಂಡು, ಆಗಲೇ ಯವತಿ ಆಗಿದ್ದಳು ಗಂಡು. ಇಷ್ಟು ಸಾಕು ನೋಡಿ. ಎಣ್ಣೆ ಏಟಿನಿಂದ ಯುವತಿ ಪೊಲೀಸ್ ಕಾಲರ್ ಹಿಡಿದು ಯದ್ವಾ ತದ್ವಾ ಬೈಗುಳ, ಕ್ಯಾಬ್ ಡ್ರೈವರನ್ನೇ ಹೊರಕ್ಕೆ ಹಾಕಿ ಡ್ರೈವಿಂಗ್ ಮಾಡುವ ಸಾಹಸ, ನಡು ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಡಿಕ್ಷನರಿಯಲ್ಲಿ ಇಲ್ಲದ ಪದಗಳ ಸ್ವಾಗತ. ಒಂದಾ ಎರಡಾ...
ಮುಂಬೈನಲ್ಲಿ ತಡ ರಾತ್ರಿ ಪಾರ್ಟಿ ಮುಗಿಸಿ ಕ್ಯಾಬ್ ಮೂಲಕ ಮರಳುತ್ತಿದ್ದ ಮೂವರು ಯುವತಿಯರಲ್ಲಿ ಒಬ್ಬಳಿಗೆ ನಶೆ ಏರಿದೆ. ಕ್ಯಾಬ್ ಡ್ರೈವರ್ ಹಾಗೂ ಆತ ಇಡೀ ಕುಟುಂಬಕ್ಕೆ ಬೈಗುಳದ ಅಭಿಷೇಕ ಮಾಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಕ್ಯಾಬ್ ನಿಲ್ಲಸಲು ಸೂಚಿಸಿದ್ದಾಳೆ. ಬಳಿಕ ಡ್ರೈವರ್ ಕಾಲರ್ ಹಿಡಿದು ಎಳೆದು ಹೊರಕ್ಕೆ ಹಾಕಿದ್ದಾಳೆ. ಬಳಿಕ ಕ್ಯಾಬ್ ಡ್ರೈವರ್ ಸೀಟ್ ಏರಿ ತಾನೇ ಕಾರು ಚಲಾಯಿಸುವುದಾಗಿ ರಂಪಾಟ ಮಾಡಿದ್ದಾಳೆ.
ಕಂಠಪೂರ್ತಿ ಕುಡಿದು ಸೆಲೆಬ್ರಿಟಿ ಎಂಬುದನ್ನೇ ಮರೆತ ಗಾಯಕಿ
ಮುಂಬೈ ನಡು ಬೀದಿಯಲ್ಲಿ ಯುವತಿ ರಂಪಾಟ ನೋಡಿ ಜನ ಸೇರಿದರು. ಅಷ್ಟರಲ್ಲೇ ಮುಂಬೈ ಪೊಲೀಸರು ಸ್ಥಳ್ಕಕೆ ಆಗಮಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಯುವತಿಯ ಆಕ್ರೋಶ ಹೆಚ್ಚಾಗಿದೆ. ವಾಹನದಿಂದ ಇಳಿದು ಬಂದ ಪೊಲೀಸ್ ಕಾಲರನ್ನೇ ಹಿಡಿದು ಬೈಗುಳ ಸುರಿಮಳೆಗೈದಿದ್ದಾಳೆ.
ಗುಸ್ತು ತಿರುಗುತ್ತಿದ್ದ ಮುಂಬೈ ಪೊಲೀಸ್ ವಾಹನದಲ್ಲಿ ಮಹಿಳಾ ಪೊಲೀಸ್ ಇಲ್ಲದ ಕಾರಣ ಪಾನಮತ್ತ ಯುವತಿಯನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಮಾಡಬೇಕಾಯಿತು.ಯುವತಿ ರಂಪಾಟವನ್ನು ಕ್ಯಾಬ್ ಡ್ರೈವರ್ ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದಾನೆ.
ದಾರಿಯಲ್ಲಿ ಸಾಗುತ್ತಿದ್ದ ಇತರರ ಮೇಲೂ ಏಗರಾಡಿದ್ದಾಳೆ. 9ಕ್ಕೂ ಹೆಚ್ಚು ವಿಡಿಯೋ ಚಿತ್ರೀಕರಿಸಿಕೊಂಡ ಕ್ಯಾಬ್ ಡ್ರೈವರ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅತ್ತ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿ, ಸಾರ್ವಜನಿಕವಾಗಿ ಅಸಭ್ಯ ವರ್ತನೆ, ಸಾರ್ವಜನಿಕರಿಗೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳು ಯುವತಿ ವಿರುದ್ಧ ದಾಖಲಾಗಿದೆ.
ಕುಡಿದ ಆಮಲಿನಲ್ಲಿ ಪೊಲೀಸ್ ಕಾರೇರಿ ಜಾಲಿ ರೈಡ್ ಹೊರಟವ ಅಂದರ್ : ವಿಡಿಯೋ ವೈರಲ್
ಕುಡುಕನ ಅವಾಂತರ: ವಾಹನ ತಡೆದು ರಂಪಾಟ
ಮದ್ಯದ ಅಮಲಿನಲ್ಲಿ ಬೆಳಗಾವಿಯಲ್ಲಿ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಡಿಫ್ಸ್ ಹೊಡೆದು ಹಾಗೂ ವಾಹನಗಳನ್ನು ಅಡ್ಡಗಟ್ಟಿರಂಪಾಟ ಮಾಡಿರುವ ಘಟನೆ ನಗರದ ಕಾಂಗ್ರೆಸ್ ರಸ್ತೆಯಲ್ಲಿ ಗುರುವಾರ ನಡೆದಿದೆ. ಕಾಂಗ್ರೆಸ್ ರಸ್ತೆಯಲ್ಲಿ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು, ನಶೆಯಲ್ಲಿ ಕಾಂಗ್ರೆಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ರಂಪಾಟ ಮಾಡಿದ್ದಾನೆ. ಅಲ್ಲದೇ ನಡುರಸ್ತೆಯಲ್ಲೇ ವಾಹನಗಳ ಮುಂದೆ ಡಿಫ್ಸ್ ಹೊಡೆದು ತನ್ನ ಸಾಹಸವನ್ನು ಪ್ರದರ್ಶನ ಮಾಡಿದ್ದಾನೆ. ಈ ಕುಡುಕನ ಈ ಹೈಡ್ರಾಮಾವನ್ನು ನೋಡಿದ ವಾಹನ ಸವಾರರು ಹಾಗೂ ಸಾರ್ವಜನಿಕರು ನಗುನಗುತ್ತಾ ಸಾಗುತ್ತಿದ್ದರು. ಅಲ್ಲದೇ ಇನ್ನೂ ಕೆಲವರು ಹೊಟ್ಟೆಹುನ್ನಾಗುವಂತೆ ನಕ್ಕು ನಕ್ಕು ಸುಸ್ತಾದ ಪ್ರಸಂಗವೂ ಜರುಗಿತು. ಈತನ ಹೈಡ್ರಾಮಾದಿಂದ ಕೆಲ ಸಮಯ ರಸ್ತೆಯಲ್ಲಿ ವಾಹನ ನಿಂತಿದ್ದರಿಂದ ವಾಹನಗಳು ಸಾಲುಗಟ್ಟಿನಿಂತಿದ್ದವು.
ಶಾಸಕರ ಭವನದ ಕೊಠಡಿಯಲ್ಲಿ ಮಹಿಳೆ ಹೈಡ್ರಾಮಾ
ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿದ್ದ ಶಾಸಕರ ಭವನದ ಕೊಠಡಿಗೆ ದಿಢೀರ್ ಪ್ರವೇಶಿಸಿದ ಮಹಿಳೆಯೊಬ್ಬರು ಶಾಸಕರ ಜತೆ ವಾಗ್ವಾದ ನಡೆಸಿ ಕೆಲ ಕಾಲ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಜರುಗಿದೆ.
ಶಾಸಕರ ಭವನದ 3ನೇ ಅಂತಸ್ತಿನ ಕೊಠಡಿಗೆ ಸಂಖ್ಯೆ 350ಕ್ಕೆ ಸೋಮವಾರ ಬೆಳಗ್ಗೆ ಬಂದಿದ್ದ ಮಹಿಳೆ, ಶಾಸಕರ ಜತೆ ಜಗಳ ಮಾಡಿದ್ದಾರೆ. ನಿಮ್ಮಿಂದ ನನಗೆ ಅನ್ಯಾಯವಾಗಿದೆ ಎಂದು ರಂಪಾಟ ಮಾಡಿದ್ದಾರೆ. ಈ ಮಹಿಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎನ್ನಲಾಗಿದೆ. ಈಕೆಯ ವರ್ತನೆಯಿಂದ ಶಾಸಕರು ಮುಜುಗರ ಅನುಭವಿಸಿದರು. ಬಳಿಕ ಕೊಠಡಿಯಿಂದ ಹೊರ ನಡೆದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ